About Us Advertise with us Be a Reporter E-Paper

ಅಂಕಣಗಳು

ಸೂತ್ರಧಾರಿಯೋ, ಪಾತ್ರಧಾರಿಯೋ?

ಅವಲೋಕನ: ಕುಮಾರ ಶೇಣಿ, ರಾಜ್ಯಶಾಸ್ತ್ರ ಪ್ರಾಧ್ಯಾಪಕರು

ಪಾಕ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಅಧ್ಯಕ್ಷ  ಇಮ್ರಾನ್ ಖಾನ್, ಇತರ ಪಕ್ಷಗಳ ಬೆಂಬಲದೊಂದಿಗೆ  ಪಟ್ಟಕ್ಕೆ ಏರಿದ್ದಾರೆ. ಆದರೆ ತನ್ನದೆಂಬ ಅಸ್ಮಿತೆಯನ್ನು ಉಳಿಸಿಕೊಳ್ಳಲಾಗದ ದೇಶದಲ್ಲಿ, ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ಇಮ್ರಾನ್ ಖಾನ್ ವಿಸ್ಮಯ ಮೂಡಿಸುವರೇ ಎಂಬುದು ಸದ್ಯಕ್ಕೆವಿಶ್ವ ರಾಜಕಾರಣದ ಮುಂದಿರುವ ಯಕ್ಷ ಪ್ರಶ್ನೆ. ಪಾಕ್‌ನ ರಾಜಕಾರಣದ ಇತಿಹಾಸವನ್ನು ಗಮನಿಸಿದಾಗ ಇದು ಸಾಧ್ಯವೇ ಎಂಬ ಅನುಮಾನವು ಮೂಡುತ್ತಿದೆ

ಪಾಕ್‌ನ ರಾಜಕಾರಣವೇ ಹಾಗೆ. ಪಾಕ್‌ನ ರಾಜಕಾರಣಿಗಳು ಈ ಪಾತ್ರಧಾರಿಗಳ ಹಾಗೇ. ಸೂತ್ರಧಾರಿ ಹೇಳಿದಂತೆ ನಟಿಸುವವರು ಮಾತ್ರ. ಆ ಕೆಲಸ ಮಾಡದಿದ್ದರೆ ಪಾತ್ರಧಾರಿಯೇ ಬದಲಾಗುತ್ತಾನೆ ಹೊರತು ಸೂತ್ರಧಾರಿಯಲ್ಲ. ಇಂತಹ  ಸೂತ್ರಧಾರ ಇರುವುದು ಎರಡು ‘ಎ’ಗಳ ಕೈಯಲ್ಲಿ. ಒಂದು ಅ್ಟಞ ಅಂದರೆ ಸೇನೆ, ಇನ್ನೊಂದು ಅ್ಝ್ಝ ಅಂದರೆ ಧರ್ಮ.

ಇಲ್ಲಿ ಸೇನೆಯು ಎರಡು ರೀತಿಯಲ್ಲಿ ಆಡಳಿತವನ್ನು ನಡೆಸುತ್ತದೆ. ಒಂದು ನೇರವಾಗಿ, ಅಂದರೆ ಗವರ್ನರ್ ಜನರಲ್‌ಗಳು ಮತ್ತು ಸೇನಾಧ್ಯಕ್ಷರ ಮೂಲಕ. ಇನ್ನೊಂದು ಪರೋಕ್ಷವಾಗಿ, ಅಂದರೆ ಪ್ರಧಾನಿಗಳನ್ನು ನಿಯಂತ್ರಿಸುವುದರ ಮೂಲಕ.

1970ರಲ್ಲಿ ಪಾಕ್‌ನಲ್ಲಿ ಮೊದಲ ಸಲ ಚುನಾವಣೆ ನಡೆದು, ಝುಲ್ಫಿಕರ್ ಆಲಿ ಭುಟ್ಟೋ ಪ್ರಧಾನಿಯಾಗಿ ಆಯ್ಕೆಗೊಂಡರೂ, ಅವರು ಅಧಿಕಾರದಲ್ಲಿದ್ದುದು 7 ವರ್ಷಗಳು ಮಾತ್ರ.  ಅವರನ್ನು ಪದಚ್ಯುತಗೊಳಿಸಿ ಗಲ್ಲಿಗೇರಿಸಲಾಯಿತು. ಅವರ ಪುತ್ರಿ ಬೆನಜೀರ್ ಭುಟ್ಟೋ ಎರಡು ಸಲ ಪದಚ್ಯುತಗೊಂಡು, ನಂತರ ಹತ್ಯೆಗೀಡಾದರು. ಇತ್ತೀಚೆಗೆ ಅಧಿಕಾರದಲ್ಲಿದ್ದ ನವಾಜ್ ಶರೀಫ್ ಈಗ ಜೈಲು ಸೇರಿದ್ದಾರೆ. ಈ ಎಲ್ಲಾ ಘಟನೆಗಳ ಹಿಂದೆ ಸೇನೆಯ ಕೈವಾಡ ಇದೆ. ಪಾಕ್‌ನ ರಾಜಕೀಯ ಇನ್ನೊಂದೆಡೆ ನಿಯಂತ್ರಣಕ್ಕೊಳಪಡುವುದು, ಧರ್ಮಗುರುಗಳಿಂದ. ಮಹಮ್ಮದ್ ಆಲಿ ಜಿನ್ನಾರ ಕನಸಿನ, ಸೆಕ್ಯುಲರ್, ಆಧುನಿಕ ರಾಜ್ಯ, ಅವರ ಸಾವಿನೊಂದಿಗೆ ಮರೆಯಾಗಿ ಹೋಯಿತು. ನಂತರದ ಪಾಕ್ ನಾಯಕರೆಲ್ಲರೂ ಸಾಗಿದ್ದು ಇಸ್ಲಾಮಿಕ್ ರಾಜ್ಯದತ್ತ. ಸಂಪ್ರದಾಯವಾದಿಗಳು  ರೀತಿಯ ಜೀವನ ಸಾಗಿಸುತ್ತಿದ್ದ ಜಿನ್ನಾರನ್ನು, ಮುಸ್ಲಿಂ ಎಂದು ಒಪ್ಪಿಕೊಳ್ಳಲು ಎಂದಿಗೂ ಸಿದ್ದರಿರಲಿಲ್ಲ. ಹೀಗಾಗಿ ಧರ್ಮ ಗಟ್ಟಿಯಾಗುತ್ತಿದ್ದಂತೆ, ಜಿನ್ನಾ ಸಂಪೂರ್ಣವಾಗಿ ಮರೆಯಾಗಿ ಹೋದರು. ಜಿನ್ನಾರ ಅಕಾಲಿಕ ಮರಣ, ಸಂಪ್ರದಾಯವಾದಿಗಳಿಗೆ ಇಸ್ಲಾಮಿಕ್ ರಾಜ್ಯವನ್ನು ಕಟ್ಟಲು ಸುಲಭವಾಗಿ ದಾರಿಮಾಡಿಕೊಟ್ಟಿತು.

1956ರಲ್ಲಿ, ಸಂಪ್ರದಾಯವಾದಿಗಳ ಒತ್ತಡದಿಂದ, ಇಸ್ಕಂದರ್ ಮಿರ್ಜಾ ಪಾಕಿಸ್ತಾನವನ್ನು ಮುಸ್ಲಿಂ ಗಣರಾಜ್ಯ ಎಂದು ಘೋಷಿಸಿದರು. ಇಮ್ರಾನ್ ಖಾನ್ ಭ್ರಷ್ಟಾಚಾರ ವಿರುದ್ಧದ ಹೋರಾಟದ ಮೂಲಕ ರಾಜಕೀಯಕ್ಕೆ ಬಂದರೂ, ನಂತರ ಧಾರ್ಮಿಕ ವಿಚಾರಗಳನ್ನು ಪ್ರಚಾರಕ್ಕೆ ಬಳಸಿಕೊಂಡು, ಶರಿಯತ್  ಬೆಂಬಲಿಸಿದರು.

ಕಾಶ್ಮೀರ ಸಮಸ್ಯೆಯಂತಹ ವಿಚಾರಗಳನ್ನು ಬಳಸಿಕೊಂಡು, ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ. ಯಾವುದೇ ಪ್ರಧಾನಿ ಇದನ್ನು ಬಗೆಹರಿಸಲು ಪ್ರಯತ್ನಿಸಿದರೆ, ಸೇನೆ ಅಡ್ಡಗಾಲು  ಹಾಕುತ್ತದೆ. ಭಾರತದ ಮೇಲೆ ಸೇನಾಪೋಷಿತ ಉಗ್ರರಿಂದ ಆದ ಉರಿ, ಪಠಾಣ್‌ಕೋಟ್ ದಾಳಿಯಂತಹ ಘಟನೆಗಳು ಇದಕ್ಕೆ ಉದಾಹರಣೆ. ಇಂತಹ ಪರಿಸ್ಥಿತಿಯಲ್ಲಿ, ಇಮ್ರಾನ್ ಖಾನ್ ಸರಕಾರ ಆಡಳಿತಕ್ಕೆ ಬಂದಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಇಮ್ರಾನ್ ಖಾನ್ ಮತ್ತೊಬ್ಬ ಪಾತ್ರಧಾರಿಯಾಗುವುದು ಖಚಿತ.

Tags

Related Articles

Leave a Reply

Your email address will not be published. Required fields are marked *

Language
Close