About Us Advertise with us Be a Reporter E-Paper

Breaking Newsದೇಶಪ್ರಚಲಿತವಿದೇಶ

ಯೂಟರ್ನ್ ಹೊಡೆದ ಪಾಕಿಸ್ತಾನ..!

ಇಸ್ಲಾಮಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಪತ್ರ ಬರೆದಿದ್ದಾರೆ ಎಂದು ಪಾಕ್ ವಿದೇಶಾಂಗ ಸಚಿವ ಖುರೇಷಿ ಹೇಳಿಕೆ ವಿಚಾರ ಸಂಬಂಧ, ಇದೀಗ ಪಾಕಿಸ್ತಾನ ಯೂಟರ್ನ್ ಹೊಡೆದಿದೆ. ಶಾಂತಿ ಮಾತುಕತೆಗಾಗಿ ಮೋದಿ ಪತ್ರ ಬರೆದಿರುವಾಗಿ ನಮ್ಮ ಸಚಿವರು ಹೇಳಿಕೆಯೇ ನೀಡಿಲ್ಲ ಎಂದು ಉಲ್ಟಾ ಹೊಡೆದಿದೆ.

ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಉಭಯ ದೇಶಗಳ ಶಾಂತಿ ಮಾತುಕತೆಗಾಗಿ ಇಮ್ರಾನ್ ಖಾನ್‍ಗೆ ಪತ್ರ ಬರೆದಿದ್ದರು ಎಂದು ಹೇಳಿದ್ದರು. ಆದ್ರೆ, ಈ ಮಾತನ್ನು ನಿರಾಕರಿಸಿದ ಭಾರತ, ಪಾಕ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಇಮ್ರಾನ್ ಖಾನ್‍ಗೆ ಶುಭಾಶಯ ತಿಳಿಸಿ ಪತ್ರ ಬರೆದಿದ್ದರು. ಆದ್ರೆ ಶಾಂತಿ ಮಾತುಕತೆ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿಲ್ಲ ಎಂದು ಭಾರತ ಸ್ಫಷ್ಟಪಡಿಸಿತ್ತು. ಇದಾದ ಕೆಲ ಸಮಯದಲ್ಲೇ ಉಲ್ಟಾ ಹೊಡೆದ ಪಾಕಿಸ್ತಾನ, ನಾವು ಆ ರೀತಿಯಾಗಿ ಹೇಳಿಕೆ ನೀಡಿಲ್ಲ ಎಂದಿದೆ.

Tags

Related Articles

Leave a Reply

Your email address will not be published. Required fields are marked *

Language
Close