About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಪಾಕಿಸ್ತಾನ ನಮ್ಮ ಬೆನ್ನಿಗೆ ಚೂರಿ ಹಾಕಿದೆ: ಅಮೆರಿಕದ ಮಾಜಿ ಸೇನಾಧಿಕಾರಿ

ವಾಷಿಂಗ್ಟನ್‌ ಡಿ ಸಿ: ತಾಲಿಬಾನ್‌ ಸೇರಿದಂತೆ ಅನೇಕ ಭಯೋತ್ಪಾದಕ ಸಂಘಟನೆಗಳ ವಿಚಾರದಲ್ಲಿ ಇಬ್ಬಂದಿತನದ ನಿಲುವು ಹೊಂದಿರುವ ಪಾಕಿಸ್ತಾನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಅಮೆರಿಕ ಮಿಲಿಟರಿಯ ಹಿರಿಯ ಅಧಿಕಾರಿ ಲಾರೆನ್ಸ್‌ ಸೆಲ್ಲಿನ್‌ ತಿಳಿಸಿದ್ದಾರೆ.

ಅಫ್ಘಾನಿಸ್ತಾನ ಹಾಗು ಉತ್ತರ ಇರಾಕ್‌ನಲ್ಲಿ ಕೆಲಸ ಮಾಡಿರುವ ಸೆಲ್ಲಿನ್‌, ಅಫ್ಘಾನಿಸ್ತಾನದಲ್ಲಿ ಅಮೆರಿಕ ಕಾರ್ಯಾಚರಣೆ ಆರಂಭಿಸಿದ ಕೂಡಲೇ, ಅಕ್ಟೋಬರ್‌‌ 2001ರಲ್ಲಿ ತಾಲಿಬಾನ್‌ ಭಯೋತ್ಪಾದಕರಿಗೆ ಐಎಸ್‌ಐ ಶಸ್ತ್ರಾಸ್ತ್ರಗಳನ್ನು ಒದಗಿಸಿತ್ತು ಎಂದು ಹೇಳಿದ್ದಾರೆ.

ತಾಲಿಬಾನ್ ಹಾಗು ಅಲ್‌ ಕಯ್ದಾ ಜತೆಗೆ ಯುದ್ಧ ಮಾಡುತ್ತಿರುವ ಅಮೆರಿಕಕ್ಕೆ ಯಾವುದೇ ರೀತಿಯ ನೆರವು ನೀಡಬಾರದು ಎಂದು ಪಾಕಿಸ್ತಾನದ ಅಂದಿನ ಅಧ್ಯಕ್ಷ ಜನರಲ್‌ ಪವೇಝ್‌ ಮುಷರಫ್‌ಗೆ ಐಎಸ್‌ಐ ನಿರ್ದೇಶಕ ಲೆಫ್ಟೆನೆಂಟ್‌ ಜನರಲ್‌ ಮಹ್ಮೊದ್‌ ಅಹ್ಮದ್‌ ಹೇಳಿದ್ದರು ಎಂದು ತಿಳಿದುಬಂದಿದೆ.

“ಪಾಕಿಸ್ತಾನದ ಈ ಇಬ್ಬಂದಿತನ 17 ವರ್ಷವಾದರೂ ಇನ್ನೂ ಮುಂದುವರೆಯುತ್ತಲೇ ಇದೆ. ಮಿಲಿಟರಿ ಹಾಗು ಆರ್ಥಿಕ ನೆರವಿನ ರೂಪದಲ್ಲಿ ಶತಕೋಟಿಗಟ್ಟಲೇ ಡಾಲರ್‌ಗಳನ್ನು ಸ್ವೀಕರಿಸಿರುವ ಪಾಕಿಸ್ತಾನ ಮತ್ತೊಂದೆಡೆ ತಾಲಿಬಾನ್‌ ಹಾಗು ಹಕ್ಕಾನಿ ಜಾಲಗಳಿಗೆ ಬೆಂಬಲ ನೀಡುವ ಮೂಲಕ ಅಫ್ಘಾನಿಸ್ತಾನದಲ್ಲಿ ಅಮೆರಿಕದ ಹಿನ್ನಡೆಗೆ ಕಾರಣವಾಗಿತ್ತು.

ತಾಲಿಬಾನ್‌ನ ಕಟ್ಟಾ ಬೆಂಬಲಿಗನಾಗಿದ್ದ ಐಎಸ್‌ಐನ ಮಾಜಿ ಮುಖ್ಯಸ್ಥ ಲೆಫ್ಟೆನೆಂಟ್‌ ಜನರಲ್‌ ಹಮೀದ್‌ ಗುಲ್‌ ಮಾತನಾಡಿ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ವ್ಯೂಹದ ಕುರಿತು ಉರ್ದು ಪತ್ರಿಕೆಯೊಂದಕ್ಕೆ ತಿಳಿಸಿದ್ದ. “ಅಫ್ಘಾನಿಸ್ತಾನದಿಂದ ಸೊವಿಯತ್‌ ಒಕ್ಕೂಟವನ್ನು ಐಎಸ್‌ಐ ಆಚೆಗಟ್ಟಿತು ಎಂದು ಮಾತ್ರವಲ್ಲದೇ ಇದೇ ಐಎಸ್‌ಐ ಅಫ್ಘಾನಿಸ್ತಾನದಿಂದ ಅಮೆರಿಕವನ್ನೂ ಆಚೆಗಟ್ಟಿತು ಎಂದು ಇತಿಹಾಸ ಹೇಳಲಿದೆ”  ಎಂದು ಗುಲ್‌ ಹೇಳಿದ್ದನು.

ತಾಲಿಬಾನ್‌ಗೆ ಪಾಕಿಸ್ತಾನದಿಂದ ಬೆಂಬಲ ಸಿಗುವವರೆಗೂ ಈ ಭಯೋತ್ಪಾದಕ ಸಂಘಟನೆಯನ್ನು ಮುಗಿಸಲು ಆಗುವುದಿಲ್ಲ ಎಂದು ಸೆಲ್ಲಿನ್‌ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ.

ಪಾಕ್‌ಗೆ ಸಾಕಷ್ಟು ನಿಕಟವಾಗಿರುವ ಚೀನಾ ಇತ್ತೀಚಿನ ದಿನಗಳಲ್ಲಿ ತಾಲಿಬಾನ್‌ನೊಂದಿಗೆ ಗುಪ್ತವಾದ ಸಮಾಲೋಚನೆಗಳನ್ನು ಮಾಡುತ್ತಿದೆ ಎಂದು ಸೆಲ್ಲಿನ್ ಆಪಾದನೆ ಮಾಡಿದ್ದರೆ.

ಕಳೆದ ತಿಂಗಳು ಚೀನಾ, ರಷ್ಯಾ, ಇರಾನ್‌ ಹಾಗು ತನ್ನ ಗುಪ್ತಚರ ಸಂಸ್ಥೆಗಳ ಪದಾಧಿಕಾರಿಗಳ ಉನ್ನತ ಮಟ್ಟದ ಸಭೆ ಆಯೋಜಿಸಿದ್ದ ಪಾಕಿಸ್ತಾನ, ಅಫ್ಘಾನಿಸ್ತಾನದಿಂದ ಅಮೆರಿಕ ನಿರ್ಗಮಿಸಿದ ಬಳಿಕ ಏನು ಮಾಡಬೇಕೆಂದು ಚರ್ಚೆ ನಡೆಸಿತ್ತು.

ವಾಸ್ತವದ ಅರಿವಿಲ್ಲದೇ, ಹೊಸ ಉಪಾಯಗಳ ಕೊರತೆಯಲ್ಲಿ ಅಫ್ಘಾನಿಸ್ತಾನದಲ್ಲಿ ವಿಫಲವಾದ ವ್ಯೂಹವನ್ನು ಅಮೆರಿಕ ಮುಂದುವರೆಸಿದೆ ಎಂದು ಸೆಲ್ಲಿನ್‌ ಇದೇ ಸಂದರ್ಭ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close