About Us Advertise with us Be a Reporter E-Paper

Breaking Newsದೇಶಪ್ರಚಲಿತವಿದೇಶ
Trending

ಬದಲಾಗಿದ್ದು ಸರಕಾರ ಮಾತ್ರ, ಚಾಳಿಯಲ್ಲ….

ಸ್ವತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ  ದೇಶದ ಹಲವೆಡೆ ಭಯೋತ್ಪಾದಕ ದಾಳಿ ನಡೆಸಲು ಭಯೋತ್ಪಾದಕ ಸಂಘಟನೆಗಳಾದ ಜೈಶೆ ಮೊಹಮ್ಮದ್‌ ಹಾಗು ಲಷ್ಕರೆ ತೊಯ್ಬಾ ಸಂಘಟನೆಗಳು ಸಂಚು ರೂಪಿಸಿದ್ದ ವಿಚಾರವನ್ನು ಗುಪ್ತಚರ ಸಂಸ್ಥೆಗಳು ಇತ್ತೀಚೆಗೆ ಬಯಲುಮಾಡಿದ್ದವು.

ಪಾಕ್‌ ಸೇನೆ ಹಾಗು ಐಎಸ್‌ಐ ಕುಮ್ಮಕ್ಕಿರುವ ಸುಮಾರು 600 ಭಯೋತ್ಪಾದಕರು ನಿಯಂತ್ರಣ ರೇಖೆ ದಾಟಲು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಜ್ಜಾಗಿದ್ದಾರೆ ಎಂಬ ಪಕ್ಕಾ ಮಾಹಿತಿ ಇತ್ತೀಚೆಗೆ ಬಂದಿತ್ತು.

ಪಾಕಿಸ್ತಾನದಲ್ಲಿ ಕಳೆದ ತಿಂಗಳು ಚುನಾವಣೆ ನಡೆಯುತ್ತಿದ್ದ ವೇಳೆ, ನಿಯಂತ್ರಣ ರೇಖೆ ಬಳಿ ಪರಿಸ್ಥಿತಿ ಸಾಕಷ್ಟು ಶಾಂತಿಯುತವಾಗಿತ್ತು. ಆದರೆ ಇದೀಗ ಚುನಾವಣಾ ಪ್ರಕ್ರಿಯೆಗಳೆಲ್ಲಾ ಮುಗಿಯುತ್ತಿದ್ದಂತೆ ಎಂದಿನ ಚಾಳಿ ಮುಂದುವರೆಸಿರುವ ಪಾಕ್‌ ಸೇನೆ, ಖುದ್ದು ನುಸುಳುಕೋರರಿಗೆ ಕವರ್‌ ಪೈರಿಂಗ್‌ ಮೂಲಕ ನಿಯಂತ್ರಣ ರೇಖೆ ದಾಟಲು ಬೆಂಬಲ ನೀಡಿದೆ.

ದಟ್ಟ ಅರಣ್ಯದಿಂದ ಆವರಿಸಿರುವ ಗುರೆಝ್‌ ಪ್ರದೇಶದಲ್ಲಿ ನಿಯಂತ್ರಣ ರೇಖೆ ನುಸುಳಲು ಯತ್ನಿಸಿದ ಭಯೋತ್ಪಾದಕರ ಸುಳಿವು ದೊರಕುತ್ತಲೇ, ಪ್ರಾಣದ ಹಂಗು ತೊರೆದು ಕಾರ್ಯಾಚರಣೆಗೆ ಇಳಿದ ಭದ್ರತಾ ಪಡೆಗಳು ಭಾರೀ ಸಂಚನ್ನು ವಿಫಲಗೊಳಿಸಿವೆ.

ಧೀರೋದಾತ್ತ ಹೋರಾಟ ನಡೆಸಿದ ಓರ್ವ ಮೆಜರ್‌ ಹಾಗು ಮೂವರು ಹವೀಲ್ದಾರ್‌  ಹುದ್ದೆಯ ಯೋಧರು ಇದೇ ವೇಳೆ ಹುತಾತ್ಮರಾಗಿದ್ದಾರೆ.

ವಾರ್ಷಿಕ ಅಮರನಾಥ ಯಾತ್ರೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಭಯೋತ್ಪಾದಕ ಸಂಘಟನೆಗಳು ಹಾಕಿದ್ದ ಸ್ಕೆಚ್‌ಅನ್ನು ಭದ್ರತಾ ಪಡೆಗಳು ವಿಫಲಗೊಳಿಸಿದ್ದಲ್ಲದೇ, ಯಾತ್ರೆಗೆ ಅಭೂತಪೂರ್ವ ಭದ್ರತೆ ನೀಡಿದ ಹಿನ್ನೆಲೆಯಲ್ಲಿ ಬೇರೆಡೆ ದಾಳಿ ನಡೆಸಲು ಭಯೋತ್ಪಾದಕರು ಮುಂದಾಗಿದ್ದಾರೆ.

ಪಾಕ್‌ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೈಜೋಡಿಸಲು ಕಾಶ್ಮೀರ ಮೂಲದ ಹಿಜ್ಬುಲ್ ಮುಝಾಹಿದೀನ್‌ ಕೂಡಾ ಸಿದ್ಧವಿದೆ.

“ಭಾರತವೇನಾದರೂ ಒಂದು ಹೆಜ್ಜೆ ಮುಂದಿಟ್ಟರೆ ನಾವು ಎರಡು ಹೆಜ್ಜೆ ಮುಂದಿಡುತ್ತೇವೆ” ಎಂದು ಪಾಕ್ ಭಾವೀ ಪ್ರಧಾನಿ ಇಮ್ರಾನ್‌ ಖಾನ್‌ ಇತ್ತೀಚೆಗೆ ಹೇಳಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close