ಕೊಪ್ಪಳ: ಪಾಕಿಸ್ತಾನದ ಪರ ಹೇಳಿಕೆ ನೀಡಿ ವಿವಾದಕ್ಕೀಡಾದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಬೆನ್ನಿಗೆ ಇದೀಗ ಕೃಷಿ ಇಲಾಖೆ ಸಚಿವ ಕೃಷ್ಣೇ ಭೈರೇಗೌಡ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮಕ್ಕೆ ಮೂರುವರೆ ಸಾವಿರ ಇತಿಹಾಸವಿದೆ. ಆದರೆ ಭಾರತದಿಂದ ಪಾಕ್ ಬೇರ್ಟಪಟ್ಟು 50 ವರ್ಷವಾಗಿದೆ. ಕೇವಲ 50 ವರ್ಷದಲ್ಲಿ ಪಾಕಿಸ್ತಾನ ನರಕವಾಯಿತಾ? ಎಂದು ಬಿಜೆಪಿ ಆರ್ ಎಸ್ ಎಸ್ ನವರಿಗೆ ಸಚಿವರು ಪ್ರಶ್ನಿಸಿದ್ದಾರೆ.
ಬಿಜೆಪಿ, ಆರ್ ಎಸ್ ಎಸ್ ನವರು ಪಾಕಿಸ್ತಾನವನ್ನು ನರಕವೆಂದು ಕರೆದಿದ್ದಾರೆ. ಹಿಂದೂ ಧರ್ಮದ ಮೂಲ ಸ್ಥಳ ಪಾಕಿಸ್ತಾನವಾಗಿದೆ. ಸಿಂಧೂ ಕಣಿವೆಯಿಂದಾಗಿ 'ಹಿಂದೂ' ಎಂಬ ಪದ ಬಂದಿದೆ. ಅಲ್ಲಿಂದಲೇ ವೇದ, ಉಪನಿಷತ್ತುಗಳು ಹುಟ್ಟಿಕೊಂಡಿವೆ. ಆದರೆ ಇಂದು ಸಿಂಧೂ ಕಣಿವೆ ಇರುವುದು ಪಾಕಿಸ್ತಾನದಲ್ಲೇ. ಹಾಗಾದರೆ ಹಿಂದೂ ಧರ್ಮದ ಮೂಲ ಸ್ಥಳವೇ ನರಕನಾ?. ಹಿಂದೂ ಧರ್ಮ ನರಕದಿಂದ ಬಂದಿದೆ ಎಂಬುವುದನ್ನು ನೀವು ಈಗ ಒಪ್ಪಿಕೊಳ್ಳುತ್ತೀರಾ ಎಂದು ಬಿಜೆಪಿ, ಆರ್ ಎಸ್ ಎಸ್ ಗೆ ಸಚಿವರು ಸವಾಲೆಸೆದಿದ್ದಾರೆ.
ಅಖಂಡ ಭಾರತದಲ್ಲಿ ಹಿಂದೂ ಪಾಕಿಸ್ತಾನ ಸೇರಿಕೊಂಡಿರುವುದರಿಂದ ಮೊದಲು ಎಲ್ಲರೂ ಪಾಕಿಸ್ತಾನವನ್ನು ಗೌರವಿಸುವುದನ್ನು ಕಲಿಯಬೇಕು ಎಂದು ಹೇಳಿದರು.