About Us Advertise with us Be a Reporter E-Paper

ಪ್ರಚಲಿತವಿದೇಶ
Trending

ಇಮ್ರಾನ್‌ ವಿರುದ್ಧ ತೊಡೆ ತಟ್ಟಿರುವ ಪಾ‌ಕ್‌ ವಿಪಕ್ಷಗಳು

ಇಸ್ಲಾಮಾಬಾದ್‌: ಪಾಕ್‌ ಪ್ರಧಾನಿಯಾಗುವ ಇಮ್ರಾನ್‌ ಖಾನ್‌ ಯತ್ನಕ್ಕೆ ಸಾಕಷ್ಟು ಸವಾಲುಗಳಿದ್ದು, ಇದೀಗ ಮತ್ತೊಂದು ಪರೀಕ್ಷೆ ಎದುರಾಗಿದೆ.

ಮಾಜಿ ಕ್ರಿಕೆಟ್‌ ಆಟರಗಾರನ ಪ್ರಧಾನ ಮಂತ್ರಿ ಆಕಾಂಕ್ಷೆಗೆ ಸವಾಲೆಸೆದಿರುವ ಪಾಕ್‌ನ ಎರಡು ದೊಡ್ಡ ರಾಜಕೀಯ ಪಕ್ಷಗಳು, ಸಣ್ಣಪುಟ್ಟ ಪಕ್ಷಗಳ ಜತೆ ಸೇರಿ ತಮ್ಮದೇ ಸ್ವಂತ ಪ್ರಧನಿ ಅಭ್ಯರ್ಥಿಯನ್ನು ಸಂಸತ್ತಿನಲ್ಲಿ ನಿಲ್ಲಿಸಲು ಚಿಂತನೆ ನಡೆಸಿವೆ ಎನ್ನಲಾಗಿದೆ.

ಮೈತ್ರಿಕುಟದ ಸಾಮೂಹಿಕ ಯತ್ನಕ್ಕೆ ಫಲಸಿಗುವ ಸಾಧ್ಯತೆ ಇಲ್ಲ. ಆದರೆ ಇಮ್ರಾನ್‌ ಖಾನ್‌ಗೆ ಇರುವ ಶಾಸನಾತ್ಮಕ ಸಂಖ್ಯಾಬಲವನ್ನು ಕ್ಷೀಣಿಸುವ ಮೂಲಕ ಸರಕಾರ ನಡೆಸಲು ಸಾಕಷ್ಟು ಸರ್ಕಸ್‌ ನಡೆಸಬೇಕಾದ ಅನಿವಾರ್ಯಕ್ಕೆ ಈಡುಮಾಡಬಹುದಾಗಿದೆ.

272 ಸದಸ್ಯರ ಪಾಕ್‌ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 116 ಸ್ಥಾನಗಳನ್ನು ಹೊಂದಿರುವ ಇಮ್ರಾನ್ ಖಾನ್ರ ತೆಹ್ರೀಕ್‌ ಏ ಇನ್ಸಾಫ್‌ ಪಾಕಿಸ್ತಾನ, ಸಣ್ಣ ಪುಟ್ಟ ಪಕ್ಷಗಳು ಹಾಗು ಸ್ವತಂತ್ರ ಅಭ್ಯರ್ಥಿಗಳನ್ನು ಒಳಗೊಂಡು ಸರಕಾರ ರಚನೆ ಮಾಡಲು ಯತ್ನಿಸುತ್ತಿದೆ.

ಜುಲೈ 25ರಂದು ನಡೆದ ಚುನಾವಣೆಯ ಫಲಿತಾಂಶದ ಹಿಂದೆ ಮಿಲಿಟರಿಯ ಕೈವಾಡವಿದೆ ಎಂದು ಬಲವಾಗಿ ಆಪಾದನೆ ಮಾಡುತ್ತಿರುವ ಪ್ರಮುಖ ವಿಪಕ್ಷಗಳು, ಸರಕಾರ ರಚನೆಯನ್ನು ತಡೆಗಟ್ಟಲು ಸಕಲ ಯತ್ನ ಮಾಡುವುದಾಗಿ ತಿಳಿಸಿವೆ.

ಜೈಲಿನಲ್ಲಿರುವ ನವಾಝ್‌ ಶರೀಫ್‌ರ ಪಾಕಿಸ್ತಾನ ಮುಸ್ಲಿಂ ಲೀಗ್‌ ಹಾಗು ಮಾಜಿ ಪ್ರಧಾನಿ ಬೇನಝೀರ್‌ ಭುಟ್ಟೋರ ಪಾಕಿಸ್ತಾನ ಪೀಪಲ್ಸ್ ಪಾರ್ಟಿಗಳು ಒಂದೆಡೆ ಸೇರಿ ಸರ್ವ ಪಕ್ಷಗಳ ನಿಯೋಗ ರಚನೆ ಮಾಡಿಕೊಂಡಿವೆ.

ಈ ಕುರಿತು ಅಧ್ಯಯನ ನಡೆಸಿದ ಐರೋಪ್ಯ ಒಕ್ಕೂಟದ ಚುನಾವಣಾ ಸರ್ವೇಕ್ಷಣಾ ತಂಡವು, ಪಾಕ್‌ ಚುನಾವಣೆಯ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆಯ ಕೊರತೆ ಕಂಡು ಬಂದಿದೆ ಎಂದು ತಿಳಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close