About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಪಂಜಾಬ್‌ ಸಿಎಂಗೆ ಕಾಡು ಕವುಜಗದ ಪ್ರತಿಕೃತಿ ಗಿಫ್ಟ್ ಕೊಟ್ಟ ಸಿಧುಗೆ ಮತ್ತೊಂದು ಸಂಕಷ್ಟ

ಅಮೃತಸರ: ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಅವರಿಗೀಗ ಹೊಸ ಸಂಕಷ್ಟ ಎದುರಾಗಿದೆ.

ಹೌದು, ಪಾಕಿಸ್ತಾನದಿಂದ ಖರೀದಿಸಿ ತಂದಿದ್ದ ಕಪ್ಪು ಕಾಡು ಕವುಜಗದ ಪ್ರತಿಕೃತಿಯನ್ನು ಸಿಧು ಮುಖ್ಯಮಂತ್ರಿಗೆ ಉಡುಗೊರೆಯಾಗಿ ನೀಡಿದ್ದರು. ಇದೀಗ ಈ ವಿಚಾರವೇ ಸಿಧುಗೆ ಸಂಕಷ್ಟ ತಂದೊಡ್ಡಿದೆ. ಕಾಡು ಕೌಜುಗದ ಅಂಗಾಂಗಗಳಿಂದ ಮಾಡಿದ, ಜೀವಂತ ಕೌಜುಗವನ್ನೇ ಹೋಲುವ ಪ್ರತಿಕೃತಿಯನ್ನು ಅನುಮತಿ ಇಲ್ಲದೆ ಭಾರತಕ್ಕೆ ತಂದ ಬಗ್ಗೆ ಹಾಗೂ ಅದನ್ನು ತಮ್ಮ ಬಳಿ ಸಂಗ್ರಹಿಸಿಟ್ಟುಕೊಂಡಿದ್ದರ ಬಗ್ಗೆ ವನ್ಯಜೀವಿ ಕಾರ್ಯಕರ್ತ ಸಂದೀಪ್​ ಜೈನ್​ ಎಂಬುವವರು ವನ್ಯಜೀವಿ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

”1972 ವನ್ಯಜೀವಿ ಕಾಯ್ದೆಯ ಪ್ರಕಾರ ವನ್ಯಜೀವಿಗಳನ್ನು ಅಕ್ರಮವಾಗಿ ಬಂಧಿಸಿಡುವುದು, ಅವುಗಳ ಅಂಗಾಂಗಗಳನ್ನು ಸಂಗ್ರಹಿಸಿಡುವುದು ಅಪರಾಧ” ಎಂದು ಸಂದೀಪ್​ ಜೈನ್ ಆರೋಪಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close