ಪರಮ್ ಗೆ ರಾಯರೆಡ್ಡಿ ಬೆಂಬಲ

Posted In : ಕೊಪ್ಪಳ, ರಾಜ್ಯ

ಕೊಪ್ಪಳ: ಕಾವೇರಿ ಗಲಾಟೆಗೆ ಆರ್ ಎಸ್ ಎಸ್ ಕೈವಾಡವಿದೆ ಎಂಬುವುದಾಗಿ ಹೇಳಿಕೆ ನೀಡಿದ್ದ ಗೃಹಸಚಿವ ಡಾ ಜಿ ಪರಮೇಶ್ವರ್ ಅವರಿಗೆ ಉನ್ನತ ಶಿಕ್ಷಣ ಇಲಾಖೆ ಸಚಿವ ಬಸವರಾಜ ರಾಯರೆಡ್ಡಿ ಬೆಂಬಲ ಸೂಚಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,  ಕಾವೇರಿ ಗಲಾಟೆಯಲ್ಲಿ ಆರ್ ಎಸ್ ಎಸ್ ಕೈವಾಡವಿದೆ ಎಂದು ಗೃಹಸಚಿವ ಪರಮೇಶ್ವರ್ ಗೆ ಗುಪ್ತಚರದಿಂದ ವರದಿ ಬಂದಿರುವುದರಿಂದ ಅವರು ಹೇಳಿದ್ದಾರೆ. ವಿನಾಕಾರಣ ಅವರು ಹೇಳಿಕೆ ನೀಡಿರಲ್ಲ. ಅವರ ಬಳಿ ಸಾಕ್ಷ್ಯ  ಇದೆ. ಗೃಹಸಚಿವರೇ ಹೇಳಿದ ಮೇಲೆ ನಂಬದೇ ಇರಲು ಸಾಧ್ಯವಿಲ್ಲ. ರಾಜ್ಯ ಸರಕಾರ ಅಸ್ಥರಗೊಳಿಸಲು ಸಂಘಟನೆ ಷಡ್ಯಂತ್ರ ನಡೆದಿರಬಹುದು. ಭಾರತೀಯ ಜನತಾ ಪಕ್ಷದ ನಾಯಕರಿಗೆ ದೇಶದ ಅಭಿವೃದ್ಧಿಯಾಗಬೇಕೆಂಬ ಯೋಚನೆಯಿಲ್ಲ. ಹೀಗಾಗಿ ಬಿಜೆಪಿ ಕೋಮುವಾದವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮೋದಿ ಮಹಾಮೌನಿ:

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೊದಿಯವರ ವಿರುದ್ದ ವಾಗ್ದಾಳಿ ನಡೆಸಿದ ರಾಯರೆಡ್ಡಿ, ಪ್ರಧಾನಮಂತ್ರಿ ನರೆಂದ್ರ ಮೋದಿಯವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಮೌನಿ ಎಂದು ಹೇಳುತ್ತಿದ್ದರು. ಆದರೆ ಇದೀಗ ಮೋದಿಯವರು ಮಹಾ ಮೌನಿಯಾಗಿದ್ದಾರೆ. ಯಾಕೆಂದರೆ ಸಮಸ್ಯೆಗಳು ಬಂದಾಗ ಪ್ರಧಾನಿ ಮೋದಿ ಮಾತನಾಡುವುದೇ ಇಲ್ಲ. ಎರಡು  ವರ್ಷದ ಅವಧಿಯಲ್ಲಿ ಮೋದಿ ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು ಪ್ರಧಾನಿಯವರು ಸುಮ್ಮನೆ ಖಾಲಿ ಪ್ರಚಾರ ಬಯಸುತ್ತಿದ್ದಾರೆ. ಇವರು ಈ ರೀತಿ ಮುಂದುವರಿಸಿದ್ದಲ್ಲಿ ಮುಂದೆ ಮೋದಿ ಕೆಸಲ ಮಾಡುತ್ತಾರೆಂದು ನನಗನ್ನಿಸಲ್ಲ ಎಂದು ಮೋದಿ ವಿರುದ್ದ ಕಿಡಿಕಾರಿದರು. 

Leave a Reply

Your email address will not be published. Required fields are marked *

19 − 13 =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top