About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಗೌರಿ ಲಂಕೇಶ್ ಹತ್ಯೆ ಪ್ರಕರಣ ಅಂತಿಮ ಘಟ್ಟ ತಲುಪಿದೆ: ಡಾ. ಜಿ.ಪರಮೇಶ್ವರ್

ತುಮಕೂರು: ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಗ್ಗೆ ಸರಕಾರ ನಿರ್ಲಕ್ಷ್ಯವಹಿಸಿಲ್ಲ. ಪ್ರಕರಣವನ್ನು ಸಮರ್ಪಕವಾಗಿ ತನಿಖಾ ತಂಡ ಕಾಯೋನ್ಮುಖವಾಗಿದ್ದು, ತನಿಖೆ ಅಂತಿಮ ಘಟ್ಟ ತಲುಪಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ತಾಲೂಕಿನ ಹೆಗ್ಗೆರೆಯ ಡಾ.ಎಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ಯೆಗೆ ಸಂಬಂಧಿಸಿದಂತೆ ತನಿಖಾ ತಂಡ ಅಗತ್ಯ ಸಾಕ್ಷ್ಯ ಸಂಗ್ರಹಿಸಿದೆ. ಕೆಲವೇ ದಿನಗಳಲ್ಲಿ ತನಿಖೆ ಅಂತಿಮಗೊಳ್ಳಲಿದೆ ಎಂದರು.

ಸಾರಿಗೆ ಸಚಿವರು ಶೇ.15ರಷ್ಟು ದರ ಹೆಚ್ಚು ಮಾಡಬೇಕು ಎಂದು ಸಲ್ಲಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಯಾವುದೆ ಕಾರಣಕ್ಕೂ ಸೆಸ್ ಕಡಿಮೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರು.

ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಮೇಲೆ ದೇಶದಲ್ಲಿ ರುಪಾಯಿ ಮೌಲ್ಯ ಕುಸಿಯುತ್ತಿದೆ. 16ನೇ ಬಾರಿ ತೈಲ ಬೆಲೆ ಏರಿಕೆಯಾಗಿದೆ. ಇದು ಮೋದಿ ಆಡಳಿತ ವೈಖರಿ. ತೈಲ ಬೆಲೆ ಕಡಿಮೆ ಮಾಡುವಲ್ಲಿ ಕೇಂದ್ರ ಚಿಂತಿಸಿಲ್ಲ. ಪದಾರ್ಥಗಳ ಬೆಲೆ ಹೆಚ್ಚಾಗುತ್ತಿವೆ, ರೈತರಿಗೆ ಸಾಕಷ್ಟು ತೊಂದರೆ ಆಗುತ್ತಿವೆ. ಆದರೂ ಪ್ರಧಾನಿ ಈ ಬಗ್ಗೆ ಚಿಂತಿಸದೆ ವಿದೇಶಗಳನ್ನು ಸುತ್ತುವಲ್ಲಿ ಕಾಲಕಳೆಯುತ್ತಿದ್ದಾರೆ. ದೇಶದ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಆನರು ಮೋದಿ ಆಡಳಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರಕಾರ ರಚನೆ ಮಾಡುವ ಸಂದರ್ಭದಲ್ಲಿ ಆಗಿರುವ ಒಪ್ಪಂದದಂತೆ ಮಹಾನಗರ ಪಾಲಿಕೆಗಳಲ್ಲಿ ಮೈತ್ರಿ ಮಾಡಿಕೊಳ್ಳುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಾಡಿನ ಜನರಿಗೆ ಉತ್ತಮ ಆಡಳಿತ ನೀಡುವುದೇ ನಮ್ಮ ಉದ್ದೇಶ. ಇದರ ಬಗ್ಗೆ ಕೇಳಿ ಬರುವ ಟೀಕೆಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.

Tags

Related Articles

One Comment

  1. ಈ ದಂಡ ಪಿಂಡ ಬಾಯಿಗೆ ಬಂಡ ಹಾಗೆ ಮಾತನಾಡುತ್ತೆ. ಇದರ ತಲೇಲಿ ಶೆಗಣಿನೂ ಇಲ್ಲ. ಈಗ ಇವರು ಹಿಡಿದವರೆಲ್ಲ ಮುಂದೆ ನ್ಯಾಯಾಲಯದಲ್ಲಿ ನಾವೇನು ತಪ್ಪು ಮಾಡಿಲ್ಲ, ಆರಕ್ಷಕರು ನಮಗೆ ಚಿತ್ರಹಿಂಸೆ ಮಾಡಿದರು. ಅದಕ್ಕೆ ನಾವೇ ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡೆವು ಎನ್ನುತ್ತಾರೆ. ನ್ಯಾಯಾಲಯ ಪುರಾವೆ ಇಲ್ಲ ಎಂದು ಇವರನ್ನು ಬಿಟ್ಟು ಬಿಡುತ್ತವೆ. ಈ ನಾಟಕ ನಮ್ಮ ದೇಶದಲ್ಲಿ ನೆಡೆಯುತ್ತ ಇರುತ್ತದೆ

Leave a Reply

Your email address will not be published. Required fields are marked *

Language
Close