About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಿದ ಪರಮೇಶ್ವರ

ಬೆಂಗಳೂರು: ಬೆಂಗಳೂರು ನಿರ್ಮಾತೃ ಹಾಗು ನಾಡಪ್ರಭು ಎಂದೇ ಖ್ಯಾತರಾದ ಕೆಂಪೇಗೌಡರ ಪ್ರತಿಮೆಯನ್ನು ಉಪಮುಖ್ಯಮಂತ್ರಿ ಜಿ ಪರಮೇಶ್ವರ ಅನಾವರಣಗೊಳಿಸಿದ್ದಾರೆ.

ಸದಾಶಿವನಗರದ ರಮಣಶ್ರೀ ಪಾರ್ಕ್‌‌ನಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಪರಮೇಶ್ವರ ಅನಾವರಣಗೊಳಸಿದ್ದಾರೆ.

ಇದೇ ವೇಳೆ ಮಾತನಾಡಿದ ಪರಮೇಶ್ವರ, “ನಾಡಪ್ರಭು ಕೆಂಪೇಗೌಡರು ನಿರ್ಮಸಿದ ಬೆಂಗಳೂರು ಇಂದು ಎಲ್ಲೆಗಳನ್ನು ಮೀರಿ ತನ್ನ ಪರಿಮಿತಿ ಮೀರಿ ಬೆಳೆಯುತ್ತಿದೆ. ಕೆಂಪೇಗೌಡರು ಈ ನಾಡಿನ ನಿರ್ಮಾತೃ. ಕೆಂಪೇಗೌಡ ಅತಿ ದೊಡ್ಡ ಪ್ರತಿಮೆಯನ್ನು ಅನಾವರಣಗೊಳಿಸುತ್ತಿರುವುದು ಹೆಮ್ಮೆಯ ವಿಚಾರ. ಈ ಹಿಂದೆ ಸದಾಶಿವನಗರದಲ್ಲಿ ಗೋಪುರ ಬಿಟ್ಟರೆ ಬೇರೇನೂ ಇರಲಿಲ್ಲ. ನಿರ್ಜನ ಪ್ರದೇಶವಾಗಿತ್ತು. ಈಗ ಇಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ”  ಎಂದಿದ್ದಾರೆ.

ಇದೇ ವೇಳೆ, ಸಂಸದ ಡಿ ವಿ ಸದಾನಂದ ಗೌಡ, ಶಾಸಕ ಅಶ್ವತ್ಥನಾರಾಯಣ್‌ ಹಾಗು ಮೇಯರ್‌ ಸಂಪತ್‌ ರಾಜ್‌ ಇದ್ದರು.

Tags

Related Articles

Leave a Reply

Your email address will not be published. Required fields are marked *

Language
Close