About Us Advertise with us Be a Reporter E-Paper

ಪ್ರಚಲಿತವಿದೇಶ
Trending

‘ಪಾರ್ಕರ್ ಸೋಲಾರ್ ಪ್ರೋಬ್’ ಉಡಾವಣೆ ಯಶಸ್ವಿ

ವಾಷಿಂಗ್ಟನ್: ಸೂರ್ಯನ ಮೇಲ್ಮೆ ಅಧ್ಯಯನಕ್ಕಾಗಿ ಅಮೆರಿಕದ ನಾಸಾ ರೂಪಿಸಿದ ಮಹತ್ವಕಾಂಕ್ಷಿ ಮಾನವ ರಹಿತ ‘ಪಾರ್ಕರ್ ಸೋಲಾರ್ ಪ್ರೋಬ್’ ಯಶಸ್ವಿಯಾಗಿ ಉಡಾವಣೆಯಾಗಿದೆ.

ಮುಂಜಾನೆ 3 ಗಂಟೆ 31 ನಿಮಿಷ ಅಂದರೆ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆ 1 ನಿಮಿಷಕ್ಕೆ ಡೆಲ್ಟಾ -4 ಹೆಸರಿನ ರಾಕೆಟ್ ಸೋಲಾರ್ ಪ್ರೋಬ್ ಅನ್ನು ಹೊತ್ತುಕೊಂಡು ಫ್ಲೋರಿಡಾದ ಕೇಪ್ ಕೆನವರಾಲ್‍ನಿಂದ ಬಾಹ್ಯಾಕಾಶಕ್ಕೆ ಚಿಮ್ಮಿದೆ. ಇದಕ್ಕಾಗಿ ಅಮೆರಿಕ ಸುಮಾರು 1.5 ಬಿಲಿಯನ್ ಡಾಲರ್ (ಹತ್ತು ಸಾವಿರ ಕೋಟಿ ರೂ.) ಹಣ ಖರ್ಚು ಮಾಡಿದೆ.

ಸೂರ್ಯನ ಬಳಿ ತಲುಪಿದ 7 ವರ್ಷಗಳ ಅವಧಿಯಲ್ಲಿ 24 ಬಾರಿ ಈ ನೌಕೆ ಹಾದು ಹೋಗಲಿದೆ.  ಸೂರ್ಯನ ಶಾಖದಿಂದ ನೌಕೆ ಸುಟ್ಟು ಹೋಗದೆ ಇರಲು ಕಾರ್ಬನ್ ಹೀಟ್ ಶೀಲ್ಡ್ ಗಳನ್ನು ಬಳಸಲಾಗಿದೆ. ಹೊರಭಾಗದಲ್ಲಿ 1371 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಹಾಗೂ ಒಳಭಾಗದಲ್ಲಿ 30 ಡಿಗ್ರಿ ಸೆಲ್ಸಿಯಸ್ ಇರುವಂತೆ ನೌಕೆಯನ್ನು ವಿನ್ಯಾಸ ಮಾಡಲಾಗಿದೆ. ವಿದ್ಯುತ್‍ಗಾಗಿ ಸೌರ ಪ್ಯಾನೆಲ್‍ಗಳನ್ನು ಬಳಸಲಾಗಿದೆ. ನೌಕೆಯು  ಅಭೂತಪೂರ್ವ ಶಾಖದ ಮಟ್ಟವನ್ನು ಮತ್ತು ಭೂಮಿಯ ಮೇಲೆ ಅನುಭವಿಸಿದ ವಿಕಿರಣದ 500 ಪಟ್ಟು ಸಹಿಸಿಕೊಳ್ಳಬಲ್ಲದು.

1958ರಲ್ಲಿ ಮೊದಲ ಬಾರಿಗೆ ಯೂಜಿನ್ ಪಾರ್ಕರ್ ಎಂಬ  ಭೌತವಿಜ್ಞಾನಿ ಸೋಲಾರ್ ಮಾರುತ ಇರುವಿಕೆಯ ಬಗ್ಗೆ ವಿವರಿಸಿದ್ದರು. ಹೀಗಾಗಿ ನಾಸಾದ ಈ ಮಹತ್ವಕಾಂಕ್ಷಿ ಯೋಜನೆಗೆ 91 ವರ್ಷದ ವಿಜ್ಞಾನಿ ಪಾರ್ಕರ್ ಅವರ ಹೆಸರನ್ನು ಇಟ್ಟು ಗೌರವಿಸಲಾಗಿದೆ.  ಇನ್ನು ಕಳೆದ ವಾರವಷ್ಟೇ ನಾಸಾದ ಈ ಯೋಜನೆಯ ಬಗ್ಗೆ ಪ್ರಭಾವಿತಗೊಂಡಿದ್ದ ಪಾರ್ಕರ್ ಅವರು, ಇದೊಂದು ‘ಬಹಳ ಸಂಕೀರ್ಣ ಯಂತ್ರ’ ಎಂದು ತಿಳಿಸಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close