About Us Advertise with us Be a Reporter E-Paper

Breaking Newsದೇಶಪ್ರಚಲಿತ

ಹುಟ್ಟುಹಬ್ಬಕ್ಕೆ ಸಂಸತ್ ಭವನ ಮಾದರಿಯ ಕೇಕ್: ಬಿಜೆಪಿ ಸಂಸದ..

ದೆಹಲಿ: ಲೋಕಸಭೆ ಬಿಜೆಪಿ ಸಂಸದ, ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಶಂಕರ್ ಕಟಾರಿಯಾ ಅವರು ತಮ್ಮ ಹಟ್ಟುಹಬ್ಬಕ್ಕೆ ಸಂಸತ್ ಭವನದ ಮಾದರಿಯ ಕೇಕ್ ಕತ್ತರಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

 ಉತ್ತರ ಪ್ರದೇಶದಲ್ಲಿ ಶುಕ್ರವಾರ ತಮ್ಮ 54 ನೇ ಹುಟ್ಟುಹಬ್ಬಕ್ಕೆ , 54ಕೆ.ಜಿ ತೂಕದ ಸಂಸತ್ ಭವನದ ರೋಪದ ಕೇಕ್ ಅನ್ನು ಪತ್ನಿ ಮೃದುಲಾ ಅವರೊಂದಿಗೆ ಸೇರಿ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಕೇಕ್ ಮೇಲೆ ಭಾರತದ ಧ್ಜಜವನ್ನೂ ಇರಿಸಲಾಗಿತ್ತು. ಆದರೆ, ಕೇಕ್ ಕತ್ತರಿಸುವುದಕ್ಕೂ ಮೊದಲು ಧ್ವಜವನ್ನು ತೆಗೆಯಲಾಗಿತ್ತು. ಹೀಗೆ ಕತ್ತರಿಸಿದ ಕೇಕ್ ಅನ್ನು ಪತಿ-ಪತ್ನಿ ಇಬ್ಬರೂ ಪರಸ್ಪರ ತಿನಿಸಿದ್ದರು. ವಿಡಿಯೋ ಈಗ ಸಾಮಾಜಿ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಂಸದ ಕಟಾರಿಯಾ ಅವರ ಭಾರಿ ಟೀಕೆಗೆ ಗುರಿಯಾಗಿದೆ.

ಈ ವಿವಾದದ ಹಿನ್ನೆಲೆ ಹಲವು ರಾಜಕಾರಣಿಗಳು ಸಂಸದ ಕಟಾರಿಯಾ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಬಿಜೆಪಿ ವಿರುದ್ಧ ಟೀಕಾ ಪ್ರವಾಹ ನಡಿಸಿದ್ದಾರೆ. ಹಾಗೂ ದುರ್ವರ್ತನೆ ತೋರಿದ ಸಂಸದನ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಬೇಕು, ಎಂದು ಹಿಂದು ಸಂಘಟನೆ ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.

ಸಂಸತ್ ಭವನದ ಮಾದರಿಯ ಕೇಕ್ ಕತ್ತರಿಸಿ ತಿನ್ನುವ ಮೂಲಕ ಸಂಸದ ಕಟಾರಿಯಾ ಭಾರತೀಯ ಸಂಸತ್‌ನ ಘನತೆಗೆ ದಕ್ಕೆ ಎಂದು ಸಮಾಜವಾದಿ ಪಕ್ಷದ ಮುಖಂಡ ವಾಜೀದ್ ನಾಸೀರ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್‌ನ ಆಗ್ರಾ ಮೆಟ್ರೋಪಾಲಿಟನ್ ಅಧ್ಯಕ್ಷ ಹಾಜಿ ಜಮಾಲುದ್ದೀನ್, ಈ ರೀತಿಯ ಕೇಕ್ ಕತ್ತರಿಸುವ ಮೂಲಕ ಕಟಾರಿಯಾ ಅವರು ಭಾರತೀಯ ಸಂಸದೀಯ ವ್ಯವಸ್ಥೆಯ ಕಗ್ಗೊಲೆ ಮಾಡಿದ್ದಾರೆ. ಇವರಿಗೆ ಸಂಸತ್ ಭವನ ಪ್ರವೇಶ ನಿರ್ಬಂಧಿಸಬೇಕು, ಎಂದು ಒತ್ತಾಯಿಸಿದ್ದಾರೆ.

ಸಂಸದ ಕಟಾರಿಯಾ ವಿವಾದಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಹಿಂದೆ ಅವರು ವಿವಾದಿತ ಹೇಳಿಕೆಯೊಂದನ್ನು ನೀಡಿದ್ದರು. ಶಿಕ್ಷಣ ದೇಶ ಕೇಸರಿಕರಣಗೊಳ್ಳಲಿದೆ ಹೇಳಿದ್ದ ಅವರು ತೀವ್ರ ಟೀಕೆಗೆ ಗುರಿಯಾಗಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close