About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

“ಪಶ್ಚಿಮ ಬಂಗಾಳ ಬಾಂಗ್ಲಾವಾಗದು” ಎಂದ ಕೇಂದ್ರ

ಕೋಲ್ಕತ್ತಾ: ಪಶ್ಚಿಮ ಬಂಗಾಳವನ್ನು ಬಾಂಗ್ಲಾ ಎಂದು ಮರುನಾಮಕರಣ ಮಾಡಬೇಕೆಂದು ಕೋರಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಕೋರಿಕೆಯನ್ನು ಕೇಂದ್ರ ಸರಕಾರ  ತಿರಸ್ಕರಿಸಿದೆ.

ಬದಲಾಗಿ, ರಾಜ್ಯಕ್ಕೆ “ಪಶ್ಚಿಮಬಂಗಾ” ಎಂದು ಹೆಸರಿಡಲು ಕೇಂದ್ರ ಸೂಚಿಸಿದೆ. ಈ ಕುರಿತು ರಾಜ್ಯದ ಬಿಜೆಪಿ ಘಟಕ ಒಲವು ವ್ಯಕ್ತಪಡಿಸಿದೆ.

ರಾಜ್ಯದ ಹೆಸರನ್ನು ಬದಲಿಸಲು ಮೂರನೇ ಬಾರಿಗೆ ಮಮತಾ ಸರಕಾರ ಕೇಂದ್ರದ ಮುಂದೆ ಪ್ರಸ್ತಾಪ ಇಟ್ಟಿದೆ. ಈ ಮುನ್ನ 2011ರಲ್ಲಿ ಯುಪಿಎ ಸರಕಾರ ಇದ್ದಾಗ, ರಾಜ್ಯವನ್ನ “ಪಶ್ಚಿಮಬಂಗಾ” ಎಂದು ಕರೆಯಲು ಅನುಮತಿ ಕೋರಿ ದೀದಿ ಸರಕಾರ ಸಲ್ಲಿಸಿದ್ದ ಮನವಿ ತಿರಸ್ಕೃತಗೊಂಡಿತ್ತು.

ಬಳಿಕ 2016ರಲ್ಲಿ ಮತ್ತೊಂದು ಪ್ರಸ್ತಾಪ ಮುಂದಿಟ್ಟ ದೀದಿ ಸರಕಾರ, ರಾಜ್ಯವನ್ನು ಬಂಗಾಳದಲ್ಲಿ “ಬಾಂಗ್ಲಾ” ಎಂದೂ ಇಂಗ್ಲೀಷಿನಲ್ಲಿ “ಬೆಂಗಾಲ್‌” ಎಂದೂ, ಹಿಂದಿಯಲ್ಲಿ “ಬಂಗಾಳ” ಎಂದೂ ಹೆಸರನ್ನು ಬದಲಿಸಲು ಕೋರಿತ್ತು. ಎನ್‌ಡಿಎ ಸರಕಾರ ಕೂಡಾ ಈ ಪ್ರಸ್ತಾಪವನ್ನು ತಿರಸ್ಕರಿಸಿತ್ತು.

 

Tags

Related Articles

Leave a Reply

Your email address will not be published. Required fields are marked *

Language
Close