About Us Advertise with us Be a Reporter E-Paper

Breaking Newsರಾಜ್ಯ
Trending

ಪ್ರಯಾಣಿಕ-ಓಲಾ ಕ್ಯಾಬ್ ಚಾಲಕನ ನಡುವೆ ಜಟಾಪಟಿ..!

ಮಂಗಳೂರು: ನಗರದಲ್ಲಿ ಓಲಾ ಕ್ಯಾಬ್ ಚಾಲಕನ ಮೇಲೆ ಪ್ರಯಾಣಿಕರೊಬ್ಬರು ದಾದಾಗಿರಿ ನಡೆಸಿರುವುದಾಗಿ ಆರೋಪಿಸಲಾಗಿದೆ.

ಓಲಾ ಕಾರು ಬುಕ್ಕಿಂಗ್ ಮಾಡಿದ ಪ್ರಯಾಣಿಕರೊಬ್ಬರು ಹೇಳಿದ ಕಡೆ ‌ ಬರಲೇಬೇಕು ಎಂದು ಆಗ್ರಹಿಸಿದ್ದಾರೆ. ನಿಯಮ ಮೀರಿ ಬರಲಾಗುವುದಿಲ್ಲ ಎಂದ ಚಾಲಕನ ಮಾತಿಗೆ ಪ್ರಯಾಣಿಕ ಕೆರಳಿದ್ದಾರೆ. ಕಾರಿಂದ ಇಳಿಯುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದ್ರಿಂದ ಬೇರೆ ದಾರಿ ಕಾಣದ ಚಾಲಕ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಠಾಣೆ ಬಳಿ 50 ಕ್ಕೂ ಹೆಚ್ಚು ಒಲಾ ಕಾರು ಚಾಲಕರು ಕದ್ರಿ ಠಾಣೆ‌ ಮುಂದೆ ಜಮಾಯಿಸಿದ್ದಾರೆ.

ಘಟನೆ ವಿವರ:

ಓಲಾ ಆ್ಯಪ್ ನಲ್ಲಿ ಕಾರು ಬುಕ್ ಮಾಡಿದ ಪ್ರಯಾಣಿಕ ಬಳಿಕ ಸಿಟಿ ವ್ಯಾಪ್ತಿಯಿಂದ ಹೊರಗೆ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ 4 ಕಿ.ಮೀ ವರೆಗೆ ಮಾತ್ರ ಹೋಗುವ ನಿಯಮ ಇದ್ದುದ್ದರಿಂದ ವ್ಯಾಪ್ತಿ ಮೀರಿ ಬರಲಾಗುವುದಿಲ್ಲ ಎಂದು ಚಾಲಕ ಹೇಳಿದ್ದಾರೆ. ಇದಕ್ಕೆ ತಗಾದೆ ತೆಗೆದ ಪ್ರಯಾಣಿಕ ವರ್ತಿಸಿರುವುದಾಗಿ ಕಾರು ಚಾಲಕ‌ ಆರೋಪಿಸಿದ್ದಾರೆ. ಅಲ್ಲದೆ ಪ್ರಯಾಣಿಕ ತನಗೆ ದೊಡ್ಡಮಟ್ಟದ‌  ಪ್ರಭಾವಿ‌ ರಾಜಕಾರಣಿಗಳ ಸಂಪರ್ಕ ಇದೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close