Breaking Newsದೇಶಪ್ರಚಲಿತ
ಪ್ರಯಾಣಿಕರ ಕಿವಿ, ಮೂಗಿನಲ್ಲಿ ಸುರೀತು ರಕ್ತ, ಜೈಪುರಕ್ಕೆ ಹೊರಟಿದ್ದ ವಿಮಾನ ವಾಪಸ್..! (ವಿಡಿಯೊ)

ಮುಂಬೈ: ಆಕ್ಸಿಜನ್ ಕೊರತೆ ಉಂಟಾದ ಕಾರಣ ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತ ಮತ್ತು ತಲೆನೋವು ಉಂಟಾದ ಪರಿಣಾಮ ಜೆಟ್ ಏರ್ ವೇಸ್ ವಿಮಾನ ವಾಪಸ್ ಮುಂಬೈಗೆ ಬಂದಿಳಿದ ಘಟನೆ ಗುರುವಾರ ಬೆೆಳಗ್ಗೆ ನಡೆದಿದೆ.
ವಿಮಾನ ಟೇಕ್ ಆಫ್ ಸಮಯದಲ್ಲಿ ಜೆಟ್ ಏರ್ ವೇಸ್ ಸಿಬ್ಬಂದಿ ಕ್ಯಾಬಿನ್ ಒತ್ತಡ ನಿರ್ವಹಿಸುವ ಸ್ವಿಚ್ ಆನ್ ಮಾಡಲು ಮರೆತಿದ್ದರು. ಇದರಿಂದ ಸುಮಾರು 30 ಮಂದಿ ಪ್ರಯಾಣಿಕರಲ್ಲಿ ಕಿವಿ, ಮೂಗಿನಲ್ಲಿ ರಕ್ತ ಸುರಿದಿದೆ. ಇನ್ನುಳಿದವರು ತಲೆನೋವು ಎಂದು ದೂರಿದ್ದಾರೆ. ಅವರೆಲ್ಲರಿಗೂ ಮುಂಬಯಿ ವಿಮಾನ ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು.
‘ಗಾಳಿಯ ಒತ್ತಡ ಕಡಿಮೆಯಿದ್ದುದರಿಂದ ಎಲ್ಲರಿಗೂ ಆಮ್ಲಜನಕದ ಮಾಸ್ಕ್ ನೀಡಲಾಯಿತು. ಹಲವರಿಗೆ ಕಿವಿ, ಮೂಗಿನಲ್ಲಿ ರಕ್ತ ಬಂದಿತು’ ಎಂದು ಪ್ರಯಾಣಿಕ ದರ್ಶಕ್ ಹಾಥಿ ತಿಳಿಸಿದರು. ಇನ್ನು ಈ ಸಂಬಂಧ ವಿಮಾನ ಅಪಘಾತ ತನಿಖಾ ಬ್ಯೂರೋ ತನಿಖೆ ಕೈಗೊಂಡಿದೆ. ಘಟನೆಗೆ ಕಾರಣವಾದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಏರ್ವೇಸ್ ವಕ್ತಾರರು ತಿಳಿಸಿದ್ದಾರೆ. ಈ ಬಗ್ಗೆ ಜೆಟ್ಏರ್ವೇಸ್ ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸಿದೆ.
#WATCH: Inside visuals of Jet Airways Mumbai-Jaipur flight that was turned back to Mumbai airport midway today after a loss in cabin pressure (Source: Mobile visuals) pic.twitter.com/SEktwy3kvw
— ANI (@ANI) September 20, 2018
Earlier visuals of passengers of Jet Airways Mumbai-Jaipur flight after being deplaned when the flight was turned back to Mumbai airport midway, after loss in cabin pressure. Visuals from Mumbai airport. pic.twitter.com/GOXsJYhr7S
— ANI (@ANI) September 20, 2018