ಪಾಸ್ ಪೋರ್ಟ್ ಇನ್ನೂ ವಿಳಾಸ ಪುರಾವೆಯಲ್ಲ

Posted In : ದೇಶ

ದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ವಿದೇಶ ಪ್ರಯಾಣಕ್ಕೆ ಬಳಸುವ ಪಾಸ್ ಪೋರ್ಟ್ ಬುಕ್ ನ ಕೊನೆಯ ಪುಟವನ್ನು ಮುದ್ರಿಸಲಾಗುವುದಿಲ್ಲ. ಇದರಿಂದಾಗಿ, ವಿಳಾಸ ಪುರಾವೆಯ ಮಾನ್ಯತೆಯನ್ನು ಕಳೆದುಕೊಳ್ಳಲಿದೆ ಎಂದು ಕೇಂದ್ರ ವಿದೇ ಶಾಂಗ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಮಾನ್ಯವಾಗಿ ಪಾಸ್ ಪೋರ್ಟ್ನ ಕೊನೆಯ ಪುಟದಲ್ಲಿ ಭಾರತೀಯ ನಾಗರಿಕನ ಹೆಸರು, ತಂದೆ/ರಕ್ಷಕರ ಹೆಸರು, ತಾಯಿ, ಪತ್ನಿ ಮತ್ತು ವಿಳಾಸವನ್ನು ವಿವರವಾಗಿ ಮುದ್ರಿಸಲಾಗುತ್ತದೆ.

ತಂದೆಯ ಹೆಸರು ಬಳಸುವುದು ಕಡ್ಡಾಯವಲ್ಲ ಎಂಬ ವಿದೇಶಾಂಗ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಸಚಿವಾಲಯದ ನಿರ್ದೇಶನದಂತೆ, ಮೂವರು ತಜ್ಞರ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಇನ್ನು ಹೊಸ ಪಾಸ್ ಪೋರ್ಟ್ ನಲ್ಲಿ ಕೊನೆಯ ಪುಟ ಖಾಲಿಯಿರಲಿದೆ. ಈ ಕುರಿತಂತೆ, ಸಚಿವಾಲಯದ ದಾಖಲೆಗಳಲ್ಲಿ ಅಪ್ ಡೇಟ್ ಮಾಡಲಾಗು ವುದು ಎಂದು ಸಮಿತಿ ತಿಳಿಸಿದೆ.

ಸರಕಾರಿ ಅಧಿಕಾರಿಗಳಿಗೆ ಬಿಳಿ, ರಾಯಭಾರಿಗಳಿಗೆ ಕೆಂಪು ಮತ್ತು ಇತರರಿಗೆ ನೀಲಿ ಬಣ್ಣ ಮುಂತಾದ ಬಣ್ಣಗಳಲ್ಲಿ ಪಾಸ್ ಪೋರ್ಟ್ ನೀಡಲಾಗುತ್ತಿದೆ. ಇವುಗಳ ಮುದ್ರಣದ ಹೊಣೆಗಾರಿಕೆ ನಾಸಿಕ್ ನ ಇಂಡಿಯನ್ ಸೆಕ್ಯೂರಿಸಿ ಪ್ರೆಸ್ ನೋಡಿಕೊಳ್ಳುತ್ತಿದೆ.

Leave a Reply

Your email address will not be published. Required fields are marked *

eighteen − four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top