About Us Advertise with us Be a Reporter E-Paper

ಅಂಕಣಗಳು

ಪಾಸ್ವಾನ್ ಚಿತ್ತ ಎತ್ತ?

ಬಿಹಾರದ ರಾಮ್ ವಿಲಾಸ್ ಪಾಸ್ವಾನ್  ಸದ್ದು ಮಾಡಲು ಆರಂಭಿಸಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ಬಣ್ಣ ಬದಲಿಸುವ ಚಾಳಿ ಮತ್ತು ಛಾತಿ ಎರಡನ್ನೂ ಹೊಂದಿರುವ ಪಾಸ್ವಾನ್ ಎನ್‌ಡಿಎದಿಂದ ಹೊರ ನಡೆಯವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವಂತಿದೆ. ರಾಜಕೀಯ ವಿದ್ಯಮಾನಗಳ ಮಟ್ಟಿಗೆ ಕೂಗು ಕೋಳಿ ಎಂದೇ ಹೆಸರಾಗಿರುವ ಪಾಸ್ವಾನ್ ರಾಜಕಾರಣದ ದಿಕ್ಕು ಎತ್ತ ಬೀಸುತ್ತಿದೆ ಎಂಬುದನ್ನು ಗ್ರಹಿಸುವಲ್ಲಿ ಸಿದ್ಧಹಸ್ತರು. ಹಾಗೆಯೇ ಗಾಳಿ ಬೀಸುವ ಕಡೆ ಸಾಗಿ ಬೇಳೆ ಬೇಯಿಸಿಕೊಳ್ಳುವ ಚತುರ ರಾಜಕಾರಣಿಯೂ ಹೌದು. ಅಂತಹ ಪಾಸ್ವಾನ್ ಈಗ ಕೇಂದ್ರ  ಗಡುವು ನೀಡಿದ್ದಾರೆ. ರಾಷ್ಟ್ರೀಯ ಹಸಿರು ಪೀಠದ ಮುಖ್ಯಸ್ಥರಾಗಿರುವ ನ್ಯಾಯಮೂರ್ತಿ ಎ.ಕೆ. ಗೋಯೆಲ್ ಅವರನ್ನು ಕಿತ್ತೊಗೆಯಲು ಹಾಗೂ ಎಸ್ಸಿ-ಎಸ್ಟಿ ಕಾಯಿದೆಗೆ ಸುಗ್ರೀವಾಜ್ಞೆ ಹೊರಡಿಸುವಂತೆ ಆಗ್ರಹ ಮಾಡಿದ್ದಾರೆ. ದಿಲ್ಲಿಯ ರಾಜಕಾರಣದ ಒಳಮರ್ಮಗಳನ್ನು ಅರಿತವರಿಗೆ ಪಾಸ್ವಾನರ ಈ ನಡೆಯ ಹಿಂದಿನ ಉದ್ದೇಶ ಏನು ಎಂಬುದು ಸುಸ್ಪಷ್ಟ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎನ್‌ಡಿಎ ಘಟಬಂ‘ನದಿಂದ ಮುಕ್ತರಾಗಿ ಲಾಲು ಕೂಟದ ‘ಾಗವಾಗುವ ಹುನ್ನಾರ ಇದು ಎಂದೇ ರಾಜಕೀಯವಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ. ಮಿತ್ರರನ್ನು ದೂರ ಮಾಡಿಕೊಳ್ಳುವುದು, ಹೊಸ  ಬೆಳೆಸುವುದು ಪಾಸ್ವಾನರಿಗೆ ಅಂಗಿ ಬದಲಿಸಿದಷ್ಟೇ ಸಲೀಸು. ಎನ್‌ಡಿಎದಲ್ಲಿದ್ದುಕೊಂಡೇ ನಿತೀಶ ಒಡಗೂಡಿ ಕಿರು ಕೂಟ ರಚಿಸಿಕೊಂಡು ಒತ್ತಡ ಹೇರುವ ತಂತ್ರ ಕೈಗೂಡದ ಕಾರಣ ಪಾಸ್ವಾನ್ ತಮ್ಮ ಚಿತ್ತ ಮತ್ತೊಂದು ಕೂಟದತ್ತ ನೆಟ್ಟಿದ್ದಾರೆ. ಬಿಜೆಪಿಗೆ ಇದು ಗೊತ್ತಿರದ ಸಂಗತಿ ಏನಲ್ಲ. ಈ ಒತ್ತಡವನ್ನು ಅದು ಹೇಗೆ ನಿ‘ಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.

Tags

Related Articles

Leave a Reply

Your email address will not be published. Required fields are marked *

Language
Close