ವಿಶ್ವವಾಣಿ

‘ಪತಿಬೇಕು’ ವಿಶೇಷ ಪ್ರದರ್ಶನಕ್ಕೆೆ ಮುಗಿಬಿದ್ದ ಮಹಿಳಾಮಣಿಗಳು

ಶುಕ್ರವಾರ ತೆರೆಕಂಡ ‘ಪತಿಬೇಕು ಡಾಟ್ ಕಾಮ್’ ಚಿತ್ರಕ್ಕೆೆ ಜನ ಮನ್ನಣೆ ಸಿಗುತ್ತಿದೆ. ರಾಜ್ಯದಾದ್ಯಂತ ಜನ ಮೆಚ್ಚಿ ಶೀತಲ್ ಶೆಟ್ಟಿಗೆ ಭೇಷ್ ಎನ್ನುತ್ತಿದ್ದಾಾರೆ. ಹೆಣ್ಣು ಮಕ್ಕಳ ಒಡಲಿನ ಕಥೆಯನ್ನು ತೆರೆಮೇಲೆ ತರಿಸಿ ಅದೆಷ್ಟೋ ಹೆಣ್ಣುಮಕ್ಕಳು ಕಣ್ಣು ಒದ್ದೆೆ ಮಾಡಿಕೊಳ್ಳುವಂತೆ ಮಾಡುವಲ್ಲಿ ‘ಪತಿಬೇಕು ಡಾಟ್ ಕಾಮ್’ ಚಿತ್ರ ಯಶಸ್ವಿಯಾಗಿದೆ. ಇದೇ ಹಿನ್ನಲೆಯಲ್ಲಿ ಇಂದು ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.


ಬೆಂಗಳೂರಿನ ಮಾಗಡಿ ರಸ್ತೆೆಯಲ್ಲಿರುವ ಪ್ರಸನ್ನ ಚಿತ್ರಮಂದಿರ ಮತ್ತು ಮೈಸೂರಿನ ಉಡ್‌ಲ್ಯಾಂಡ್ ಚಿತ್ರಮಂದಿರದಲ್ಲಿ ಮಧ್ಯಾಹ್ನ 1.15ಕ್ಕೆೆ ಹೆಣ್ಣು ಮಕ್ಕಳಿಗಾಗಿ ‘ಪತಿಬೇಕು ಡಾಟ್ ಕಮ್’ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಹೆಣ್ಣು ಮಕ್ಕಳಿಗೆ ಚಿತ ಪ್ರವೇಶ ನೀಡಲಾಗಿತ್ತು. ಚಿತ್ರವನ್ನು ನೋಡಲು ಸಾಕಷ್ಟು ಹೆಣ್ಣು ಮಕ್ಕಳು ಬಂದಿರುವುದು ಚಿತ್ರ ತಂಡಕ್ಕೆೆ ಸಂತಸ ತಂದಿದೆ.
ಹೆಣ್ಣು ಮಕ್ಕಳಿಗಾಗಿ ಮಾಡಿರುವ ಚಿತ್ರ. ಅವರಿಗಾಗಿ ವಿಶೇಷ ಪ್ರದರ್ಶನ ನೀಡುತ್ತಿದ್ದೇವೆ. ಚಿತ್ರ ಮಂದಿರ ಫುಲ್ ಆಗಿರುವುದು ಸಂತಸ ತಂದಿದೆ ಎನ್ನುತ್ತದೆ ‘ಪತಿಬೇಕು ಡಾಟ್ ಕಾಮ್’ ಚಿತ್ರ ತಂಡ.

ರಾಕೇಶ್‌ ನಿದೇರ್ಶನದ ’ಪತಿಬೇಕು ಡಾಟ್‌ ಕಾಮ್‌’ ಚಿತ್ರಕ್ಕೆ ಶ್ರೀನಿವಾಸ್‌, ಮಂಜುನಾಥ್‌ ಮತ್ತು ರಾಕೇಶ್‌ ಬಂಡವಾಳ ಹೂಡಿದ್ದಾರೆ.