About Us Advertise with us Be a Reporter E-Paper

ಸಿನಿಮಾಸ್

ಶುಕ್ರವಾರ ಥಿಯೇಟರ್‌ನಲ್ಲಿ ಪತಿ ಹುಡುಕುತ್ತಾರೆ ಶೀತಲ್‌ ಶೆಟ್ಟಿ

‘ಪತಿಬೇಕು ಡಾಟ್‌ ಕಾಮ್‌’ ಚಿತ್ರ ತನ್ನ ವಿಭಿನ್ನ ಟೈಟಲ್, ಟ್ರೇಲರ್‌ ಮತ್ತು ಹಾಡಿನಿಂದ ಸಾಕಷ್ಟು ಸುದ್ದಿ ಮಾಡಿದೆ, ಮಾಡಿತ್ತಿದೆ. ಇದೇ ಶುಕ್ರವಾರ ಚಿತ್ರ ತೆರೆ ಕಾಣಲಿದ್ದು ಚಿತ್ರದ ಮೇಲಿರುವ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

’ಪತಿಬೇಕು ಡಾಟ್‌ ಕಾಮ್‌’ ಚಿತ್ರ ಫ್ಯಾಮಿಲಿ ಎಂಟರ್‌ಟೈನಿಂಗ್‌ ಸಿನಿಮಾವಾಗಿದ್ದು ಮಧ್ಯಮ ವರ್ಗದ ಹೆಣ್ಣು ಮಗಳೊಬ್ಬಳ ಕಥೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ವಯಸ್ಸು 30 ದಾಟಿದರೂ ಮದುವೆಯಾಗಲಿಲ್ಲವೆಂದರೆ ಸಮಾಜ ಆಕೆಯನ್ನು ಹೇಗೆ ನೋಡುತ್ತದೆ, ಬರುವ ಗಂಡಿನ ಬಯಕೆಗಳನ್ನು ನೋಡಿ ನೋಡಿ ಹೆಣ್ಣು ಹೇಗೆ ನೋವಿಗೀಡಾಗಿತ್ತಾಳೆ ಎನ್ನುವುದನ್ನು ಚಿತ್ರದಲ್ಲಿ ಎತ್ತಿ ತೋರಿಸಲಾಗಿದೆ. ’ಪ್ರಸ್ತುತ ಯಾವ ಹೆಣ್ಣೂ ಕೂಡ ನೋವಿಲ್ಲದೇ ಬದುಕುತ್ತಿರುವುದು ನಮಗೆ ಕಾಣಸಿಗುವುದಿಲ್ಲ. ಪ್ರತಿಯೊಬ್ಬ ಹೆಣ್ಣಿಗೂ ಒಂದಲ್ಲಾ ಒಂದು ರೀತಿಯಲ್ಲಿ ನೋವು ಬೆನ್ನತ್ತಿರುತ್ತದೆ. ಅದರಲ್ಲೂ ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಬಹಳಷ್ಟು ರೀತಿಯಲ್ಲಿ ಸಮಸ್ಯೆಗಳು ಸುತ್ತಿಕೊಂಡಿರುತ್ತವೆ. ಅಂತಹ ಸಮಸ್ಯೆ, ನೋವಿನಲ್ಲಿ ಒಂದನ್ನು ಹೆಕ್ಕಿ ಸಮಾಜದ ಮುಂದೆ ತೋರಿಸುವ ಪ್ರಯತ್ನ ನಮ್ಮ ಈ ’ಪತಿಬೇಕು ಡಾಟ್ ಕಾಮ್‌’  ಸಿನಿಮಾ’ ಎನ್ನುತ್ತಾರೆ ಚಿತ್ರದ ನಿರ್ದೇಶಕರಾದ ರಾಕೇಶ್‌.

ಶೀತಲ್‌ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೇಲರ್‌ಗೆ ನಟ ಸುದೀಪ್‌, ಶಿವಣ್ಣ, ನಟಿ ಏಮಿ ಜಾಕ್ಸನ್‌ ಮುಂತಾದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳ ಆಶೀರ್ವಾದದೊಂದಿಗೆ ಚಿತ್ರದ ಹಾಡನ್ನು ಬಿಡುಗಡೆಗೊಳಿಸಲಾಗಿತ್ತು. ಇದೇ ಶುಕ್ರವಾರ ತೆರೆ ಕಾಣುತ್ತಿರುವ ’ಪತಿಬೇಕು ಡಾಟ್‌ ಕಾಮ್’ ಚಿತ್ರದಿಂದಾಗಿ ನಟಿ ಶೀತಲ್‌ಗೆ ಪ್ರೇಕ್ಷಕರು ಪತಿಯನ್ನು ಹುಡುಕಿಕೊಡುತ್ತಾರಾ? ಕಾದು ನೋಡಬೇಕು.

Tags

Related Articles

Leave a Reply

Your email address will not be published. Required fields are marked *

Language
Close