About Us Advertise with us Be a Reporter E-Paper

Breaking Newsರಾಜ್ಯ

ಜನ ನಮ್ಮ ವಿರುದ್ಧ ದಂಗೆ ಏಳಲ್ಲ: ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ: ರಾಜ್ಯ ಸರಕಾರದ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಬಸ್‌ನಿಲ್ದಾಣದ ಎದುರು ಬಿಜೆಪಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ವೇಳೆ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿಯವರು ಬಿಜೆಪಿ ಮೇಲೆ ದಂಗೆ ಏಳುವಂತೆ ಮಾಡಿದ್ದು ಕಾನೂನು ಬಾಹಿರವಾಗಿದ್ದು, ಪೊಲೀಸ್ ಇಲಾಖೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್, ಜೆಡಿಎಸ್ ನ ಈ ಅಪವಿತ್ರ ಮೈತ್ರಿಯಾಗಿರುವ ಈ ಸರಕಾರವನ್ನು ನಾವು ಉರುಳಿಸಬೇಕಿಲ್ಲ. ಜನ ಎಂದಿಗೂ ನಮ್ಮ ವಿರುದ್ಧ ದಂಗೆ ಏಳುವುದಿಲ್ಲ. ಜನರೇ ಅವರ ವಿರುದ್ಧ ದಂಗೆ ಏಳುತ್ತಾರೆ. ಇದು ಪರ್ಸಂಟೇಜ್ ಸರಕಾರವಾಗಿದೆ. ಇದನ್ನು ಜನರು ಅರಿತಿದ್ದಾರೆ. ಮುಖ್ಯಮಂತ್ರಿಯವರ ಈ ಮಾತನ್ನು ನಾವು ಖಂಡಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಮಾಜಿ, ಹಾಲಿ ಶಾಸಕರು, ಬಿಜೆಪಿಯ  ಹಲವಾರು ಮುಖಂಡರು ಉಪಸ್ಥಿತರಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close