About Us Advertise with us Be a Reporter E-Paper

ಕ್ರೀಡೆ

ಹಿಮಾ ದಾಸ್ ಜಾತಿ ಬಗ್ಗೆ ತಲೆಕೆಡಿಸಿಕೊಂಡ ಜನ

ದೆಹಲಿ: ಇತ್ತೀಚೆಗೆ ಫಿನ್ ಲ್ಯಾಂಡ್‌ನಲ್ಲಿ ನಡೆದ ೨೦ವರ್ಷದೊಳಗಿನವರ ಕ್ರೀಡಾಕೂಟದಲ್ಲಿ ೪೦೦ ಮೀಟರ್‌ ಓಟದಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಹಿಮಾ ದಾಸ್‌ ಯಾವ ಜಾತಿ ಎಂದು  ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ಯಾಗುತ್ತಿದೆ.

ಭಾರತದಲ್ಲಿ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದ್ದು, ಎಲ್ಲ ವಿಚಾರಕ್ಕೂ ಜಾತಿ  ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಭಾರತದ ಕೀರ್ತಿ ಪತಾಕೆ ಹಾರಿಸಿದ ಹಿಮಾ ದಾಸ್ ಅವರನ್ನು ಕೂಡ ಈ ಜಾತಿ ವಿಚಾರದಲ್ಲಿ ಸಿಲುಕಿಕೊಂಡಿದ್ದಾರೆ. ಜನತೆ ಹಿಮಾ ದಾಸ್‌ ಬಗ್ಗೆ ತಿಳಿಯುವ ಬದಲು  ಆಕೆ ಯಾವ ಜಾತಿಗೆ ಸೇರಿದವಳು ಎಂಬುದರ ಬಗ್ಗೆ ಹುಡುಕುತ್ತಿದ್ದಾರೆ. ಹಿಮಾ ದಾಸ್ ಜಾತಿಯ ಬಗ್ಗೆ ಕೇರಳ, ಕರ್ನಾಟಕ, ಹರಿಯಾಣ, ಅಸ್ಸಾಂ ಹಾಗೂ ಬೆಂಗಾಲ್‌ನ ಜನರೇ ಹೆಚ್ಚು ತಲೆಕೆಡಿಸಿಕೊಂಡುವರು ಎಂದು ತಿಳಿದು ಬಂದಿದೆ.

 ಈ  ಹಿಂದೆ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದ ಸಾಕ್ಷಿ ಮಲಿಕ್ ಹಾಗೂ ಪಿವಿ ಸಿಂಧು ಅವರ ಜಾತಿಯನ್ನು ಭಾರತೀಯರು ಜಾಲಾಡಿ ತಿಳಿದುಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close