ವಿಶ್ವವಾಣಿ

ಪರ್ಯಾಯ ಇಂಧನ ಬಳಿಸಿದರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಗಡ್ಕರಿ

ರಾಯ್ವುರ್: ಪರ್ಯಾಯ ಇಂಧನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಿಸಿದರೆ ಡೀಸೆಲ್ ಬೆಲೆ ಲೀಟರ್‌ಗೆ 50ರು. ಮತ್ತು ಪೆಟ್ರೋಲ್ ಬೆಲೆ 55 ರು.ಆಗುವ ಸಾಧ್ಯೆವಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ದುರ್ಗ್ ಜಿಲ್ಲೆಯ ಛರೋಡಾದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ನಮ್ಮ ಪೆಟ್ರೋಲಿಯಂ ಸಚಿವಾಲಯ 5 ಇಥೆನಾಲ್ ಘಟಕಗಳನ್ನು ನಿರ್ಮಿಸಲಿದೆ. ಭತ್ತ, ಗೋಧಿ, ಕಬ್ಬು ಹಾಗೂ ಕಸದಿಂದ ಇಂಧನವನ್ನು ಉತ್ಪಾದಿಸಲಾಗುವುದು, ಹೀಗಾದರೆ ಡೀಸೆಲ್ 50 ರು ಮತ್ತು ಪೆಟ್ರೋಲ್ 55 ರು. ಗೆ ಲಭ್ಯೆವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ಪರ್ಯಾಯ ಇಂಧನಗಳಾದ ಇಥೆನಾಲ್, ಮಿಥೆನಾಲ್, ಜೈವಿಕ ಇಂಧನ ಮತ್ತು ಸಿಎನ್‌ಜಿ ಕೃಷಿ ವಲಯದ ಅಭಿವೃದ್ಧಿಗೆ ದರ ಉತ್ತಮವಾಗಿದೆ. ಅಕ್ಕಿ, ಗೋಧಿ ಬೇಳೆ ಮತ್ತು ಕಬ್ಬು ಇಲ್ಲಿ ಯಥೇಚ್ಛವಾಗಿದೆ. ಅದೇ ವೇಳೆ ಈ ರಾಜ್ಯ ಜೈವಿಕ ಇಂಧನ ಉತ್ಪಾದನೆಯ ಕೇಂದ್ರವಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ಗಡ್ಕರ್ ಅವರು ಅಭಿಪ್ರಾಯ ಪಟ್ಟಿದ್ದಾರೆ.