About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮತ್ತೆ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ

ದೆಹಲಿ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡ ಪರಿಣಾಮ ಮಂಗಳವಾರ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸತತ 10 ದಿನಗಳ ಏರಿಕೆ ಕಂಡಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 79.40 ರೂ. ಹಾಗೂ ಡೀಸೆಲ್ ದರ 71.34 ರೂ. ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 81.98 ರೂ. ಮತ್ತು ಡೀಸೆಲ್‌ ದರ 73.72 ರೂ. ಇದೆ. ಕೋಲ್ಕತದಲ್ಲಿ ಪೆಟ್ರೋಲ್ ಬೆಲೆ 82.31 ರೂ. ಮತ್ತು ಡೀಸೆಲ್ ಬೆಲೆ 74.27 ರೂ. ಗಳಾಗಿವೆ. ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಪೆಟ್ರೋಲ್‌ ದರ 86.80 ರೂ. ಮತ್ತು ಡೀಸೆಲ್ ಬೆಲೆ 75.82 ರೂ. ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್‌ ಬೆಲೆ 82.51 ರೂ.,  ಡೀಸೆಲ್‌ ಬೆಲೆ 75.48 ರೂ. ಆಗಿದೆ.

Tags

Related Articles

Leave a Reply

Your email address will not be published. Required fields are marked *

Language
Close