About Us Advertise with us Be a Reporter E-Paper

Breaking Newsದೇಶಪ್ರಚಲಿತ

ಇಂದೂ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ…!

ದೆಹಲಿ: ಡಾಲರ್‌ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿತ ಮತ್ತು ಕಚ್ಚಾ ತೈಲದ ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತೈಲದ ಬೆಲೆ ಏರಿಕೆಯಾಗಿದೆ. ಸೋಮವಾರ ಪೆಟ್ರೋಲ್‌ ಬೆಲೆ 31 ಪೈಸೆ ಹೆಚ್ಚಾದರೆ, ಡೀಸೆಲ್‌ 44 ಪೈಸೆ ಹೆಚ್ಚಾಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 79.15, ಮುಂಬೈನಲ್ಲಿ  86.56 ರು. ಆಗಿದೆ. ಡೀಸೆಲ್‌ ದೆಹಲಿಯಲ್ಲಿ 71.15, ಮುಂಬೈನಲ್ಲಿ 75.54 ರು.ಗೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ 81.72,  ಡೀಸೆಲ್‌ 73.44ಕ್ಕೆ ಏರಿಕೆಯಾಗಿದೆ. ತೈಲ ಬೆಲೆ ಏರಿಕೆಯಾಗಿರುವುದರಿಂದ ವಾಹನ ಸವಾರರ ಜೇಬಿಗಂತೂ ಕತ್ತರಿ ಬಿದ್ದಿದೆ.

ಕಳೆದ ಒಂದು ತಿಂಗಳಿಂದ ಡಾಲರ್‌ ಎದುರು 2.5 ರೂಪಾಯಿ ಮೌಲ್ಯ ಕುಸಿದು 71ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆ ಭಾರತಕ್ಕೆ ಹೆಚ್ಚಾಗುತ್ತಿದೆ. ಆಗಸ್ಟ್‌ 16ರಿಂದ ಇದುವರೆಗೆ ಸುಮಾರು ಎರಡು ರೂಪಾಯಿ ಪೆಟ್ರೋಲ್‌ ಬೆಲೆ ಹೆಚ್ಚಾದರೆ, ಡೀಸೆಲ್‌ ಬೆಲೆ 2.42 ರು. ಹೆಚ್ಚಾಗಿದೆ.

ದೇಶಾದ್ಯಂತ ಇಂದು ತೈಲ ದರ ಪರಿಷ್ಕರಣೆಯಾಗಿದ್ದು, ಸೋಮವಾರ ಪೆಟ್ರೋಲ್‌ ಬೆಲೆ 31 ಪೈಸೆ ಹೆಚ್ಚಾದರೆ, ಡೀಸೆಲ್‌ 44 ಪೈಸೆ ಹೆಚ್ಚಾಗಿದೆ. ಈ ದರ ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close