About Us Advertise with us Be a Reporter E-Paper

Breaking Newsದೇಶಪ್ರಚಲಿತ

ಶೀಘ್ರದಲ್ಲೇ ಡಾಲರ್​, ಪೆಟ್ರೋಲ್​ ಬೆಲೆ 100 ರು. ತಲುಪಲಿದೆ: ಚಂದ್ರಬಾಬು ನಾಯ್ಡು

ದೆಹಲಿ: ಇಂಧನ ದರ ಏರಿಕೆಯಾಗುತ್ತಿರುವ ವಿಚಾರದಲ್ಲಿ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪೆಟ್ರೋಲ್​ ಬೆಲೆ ಅತಿ ಶೀಘ್ರದಲ್ಲೇ 100 ರು. ತಲುಪಲಿದೆ. ಅಷ್ಟೇ ಅಲ್ಲ ಡಾಲರ್​ ಎದುರು ಭಾರತದ ರೂಪಾಯಿ ಮೌಲ್ಯ ಕುಸಿತ ಕಂಡು 100 ರು.ಗೆ ತಲುಪಲಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡ ಪರಿಣಾಮ ಮಂಗಳವಾರ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸತತ 10 ದಿನಗಳ ಏರಿಕೆ ಕಂಡಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗವಾಗಿದೆ.

ಹೀಗಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಬಿಜೆಪಿಯ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.

ಲೀಟರ್​ ಪೆಟ್ರೋಲ್​ ಬೆಲೆ 48 ರು.ಗಿಂತ ಹೆಚ್ಚಿರಬಾರದು. ಅದನ್ನು ಮೀರಿದರೆ ಲೂಟಿ ಎನಿಸಿಕೊಳ್ಳುತ್ತದೆ ಎಂದರು. ಆಗಸ್ಟ್​ 16ರಿಂದ ಇಲ್ಲಿಯವರೆಗೆ ಪೆಟ್ರೋಲ್​ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚು ಕಡಿಮೆ 2.ರು.ಗಳಷ್ಟು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಬ್ರಮಣಿಯನ್​ ಸ್ವಾಮಿ ಅವರು ಈ ಹೇಳಿಕೆ ನೀಡಿದ್ದಾರೆ.

Tags

Related Articles

One Comment

Leave a Reply

Your email address will not be published. Required fields are marked *

Language
Close