ವಿಶ್ವವಾಣಿ

ಮತ್ತೆ ಸಾಲ ಮಾಡಿ ಪೆಟ್ರೋಲ್ ಬೆಲೆ ಇಳಿಸಬೇಕಾ?

ಳೆದ ಒಂದು ವಾರದಿಂದ ಯಾವ ಟಿವಿ ಚಾನೆಲ್‌ಗಳಲ್ಲಿ ನೋಡಿದರೂ ಕೇಳಿಬರುತ್ತಿದ್ದ ಒಂದೇ ಒಂದು ವಿಷಯವೆಂದರೆ, ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯ ಏರಿಕೆ. ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ ಇದೇ ಸುದ್ದಿ. ಚಾನೆಲ್‌ಗಳ ಎಲ್ಲ ಡಿಬೇಟ್‌ಗಳಲ್ಲೂ ಇದೇ ವಿಷಯ. ಒಟ್ಟಿನಲ್ಲಿ ಜನರಿಗೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಬಿಸಿ ತಟ್ಟಿತ್ತೋ ಇಲ್ಲವೋ, ಆದರೆ ಮಾಧ್ಯಮಗಳಿಗಂತೂ ಈ ಬಿಸಿ ತುಸು ಹೆಚ್ಚಾಗೇ ತಟ್ಟಿದಂತಿದೆ. ಈ ಬೆಲೆ ಬಿತ್ತರಿಸುವ ಮಾಧ್ಯಮಗಳು, ಇದೇ ಬೆಲೆಯು ಇಳಿಕೆಯಾದಾಗ ಮಾತ್ರ ಈ ಮಾದರಿ ಶಬ್ದ ಮಾಡುವುದನ್ನು ನೋಡಿಲ್ಲ. ಇದೇ ಪೆಟ್ರೋಲ್ ಬೆಲೆ ಕಳೆದ ವರ್ಷ 60ರುಪಾಯಿ ಅಸುಪಾಸಿನಲ್ಲಿ ಸುಮಾರು ತಿಂಗಳ ಕಾಲವಿತ್ತು. ಆಗ ಎಂದೂ ಈ ಮಾದರಿಯ ಚರ್ಚೆಗಳು ನಡೆಯಲಿಲ್ಲ.

ಪ್ರತಿದಿನ 10ಪೈಸೆ ಏರಿಕೆಯಾದರೂ ಅದನ್ನು ‘ಬ್ರೇಕಿಂಗ್ ನ್ಯೂಸ್’ ಎಂದು ಪ್ರಕಟಿಸಲು ಶುರು ಮಾಡುವ ಇವರು, ಈ ಹಿಂದೆ ರುಪಾಯಿಗಟ್ಟಲೇ ಇಳಿಕೆಯಾದಾಗ, ಬ್ರೇಕಿಂಗ್ ನ್ಯೂಸ್‌ಗಳು ಎಲ್ಲಿಯೂ ಕಾಣಲಿಲ್ಲ. ಕಡಿಮೆಯಾದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆಯು ಇಳಿಕೆಯಾದುದರಿಂದಲೇ ಕಡಿಮೆಯಾಯಿತು ಎಂದು ಹೇಳಿದ್ದವು. ಈಗ ಮತ್ತದೇ ಕಚ್ಚಾ ತೈಲ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿದ್ದರಿಂದಲೇ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದೆಯೆಂದು ಯಾರೊಬ್ಬರೂ ಹೇಳುವುದಿಲ್ಲ. ಇಂತಹ ಎರಡು ರೀತಿಯ ಯೋಚನೆಗಳಿಂದಲೇ ಜನರ ದಿಕ್ಕು ತಪ್ಪಿಸುವಂತ ವಿಚಾರಗಳು ಪ್ರಸ್ತಾಪವಾಗುತ್ತವೆ. ಒಂದಂತೂ ಸತ್ಯ, ಹಿಂದಿನ ಯುಪಿಎ ಸರಕಾರವೂ ಕೇವಲ ಓಲೈಕೆ ರಾಜಕಾರಣ ಮಾಡಿಕೊಂಡೇ ಹಲವಾರು ಹಲವಾರು ವಿಚಾರಗಳನ್ನು ಜನರ ಮುಂದೆ ಸತ್ಯವಾಗಿ ಹೇಳಲಿಲ್ಲ. ಸಾಲವನ್ನು ಮಾಡಿಯಾದರೂ ತುಪ್ಪ ತಿನ್ನು ವಿಚಾರಗಳನ್ನು ಮುಂದಿಟ್ಟುಕೊಂಡು ಇವರು ಮಾಡಿದ ರಾಜಕೀಯದಿಂದ ಜನರಿಗೆ ಹಲವಾರು ವಿಷಯಗಳು, ಸತ್ಯಗಳು ತಿಳಿಯಲೇ ಇಲ್ಲ. ವಿಪರ್ಯಾಸವೆಂದರೆ, ಪ್ರಧಾನ ಮಂತ್ರಿಯಾಗಿದ್ದವರ ಬಯೋಡೇಟಾ ಸುಮಾರು ಐವತ್ತು ಪುಟಗಳಿಷ್ಟಿದ್ದರೂ ಅವರು ಸತ್ಯಾಂಶವನ್ನು ಜನರ ಮುಂದೆ ಇಡಲೇ ಇಲ್ಲ.

ಈ ಪೆಟ್ರೋಲ್, ಡಿಸೇಲ್ ವಿಚಾರದಲ್ಲಿಯೂ ಅಷ್ಟು ನಿಖರವಾದ ಚಿತ್ರಣವನ್ನು ಯುಪಿಎ ಸರಕಾರ ಜನರಿಗೆ ತಿಳಿಸುವ ಪ್ರಯತ್ನ ಮಾಡಲೇ ಇಲ್ಲ. ಉಪೇಂದ್ರರವರು ಸಿನಿಮಾವೊಂದರಲ್ಲಿ ಹೇಳುವಂತೆ, ಸತ್ಯಾಂಶವೂ ಕಹಿ ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ಸುಳ್ಳು ಎಂಬುದು ಸಾರಾಯಿ ಹಾಗೆ ಅದು ಕಿಕ್ ಕೊಡುವುದು ಜಾಸ್ತಿ. ಇದೇ ರೀತಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ವಿಚಾರದಲ್ಲಿಯೂ ಅಷ್ಟೇ. ಜನ ಸಾಮಾನ್ಯರಿಗೆ ಹಿಂದಿನ ಯುಪಿಎ ಸರಕಾರವು ಹೇಳಿದ ಸುಳ್ಳುಗಳೇ ತುಂಬಾ ಕಿಕ್ ಕೊಟ್ಟಿದ್ದವು.

ಪಾಪ, ಜನರು ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರುತ್ತಿದ್ದರೂ ಸಹ ಯುಪಿಎ ಸರಕಾರವು ಪೆಟ್ರೋಲ್, ಡಿಸೇಲ್ ಬೆಲೆಯನ್ನು ಏರಿಸಲಿಲ್ಲವೆಂದು ಖುಷಿ ಪಟ್ಟಿದ್ದರು. ಆದರೆ ಅವರಿಗೇನು ಗೊತ್ತು, ಅದರ ಹಿಂದೆ ‘ಆಯಿಲ್ ಬಾಂಡ್‌ಸ್’ ಎನ್ನುವ ದೊಡ್ಡ ಶೂಲವಿದೆಯೆಂದು. ಹೌದು ನಾನು ಹಿಂದೆಯೇ ಈ ವಿಚಾರವನ್ನು ತಿಳಿಸಿದ ಹಾಗೆ ಸಾಲ ಮಾಡಿಯಾದರೂ ತುಪ್ಪ ತಿನ್ನಿಸುವುದರಲ್ಲಿ ಇವರು ನಿಸ್ಸೀಮರು.

ಆಯಿಲ್ ಕಂಪನಿಗಳಿಗೆ ಪೆಟ್ರೋಲ್, ಡಿಸೇಲ್ ಎರಡನ್ನೂ ಕಡಿಮೆ ಬೆಲೆಯಲ್ಲಿ ಮಾರಲು ಹೇಳಿ ಅವರಿಗಾದ ನಷ್ಟವನ್ನು ಸರಕಾರವು ಭರಿಸುತ್ತದೆಂದು ವಚನ ನೀಡಿ, ತಮ್ಮ ಇಡೀ ಸರಕಾರದ ಅವಧಿಯಲ್ಲಿ ಸಾಲ ತೀರಿಸದೇ ಸುಮಾರು 200,000ಕೋಟಿಯಷ್ಟು ಹಣವನ್ನು ಈಗಿನ ಎನ್‌ಡಿಎ ಸರಕಾರದ ತಲೆಯ ಮೇಲೆ ಹೇರಿಯೇಬಿಟ್ಟರು. ಅದು ಹೇಗಿದೆಯೆಂದರೆ, ಅಪ್ಪನು ಬ್ಯಾಂಕಿನಲ್ಲಿ ಸಾಲ ಮುಂದೆ ಮಗನು 18ವರ್ಷದ ತುಂಬಿದ ಮೇಲೆ ಅಪ್ಪನ ಸಾಲ ತೀರಿಸುವಂತೆ, ಅಪ್ಪ ಸಾಲ ಮಾಡಿ ಹೆಂಡತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಂಡ ಇದನ್ನು ಅರಿಯದ ಮಕ್ಕಳು ಅಪ್ಪನನ್ನು ಹೊಗಳಿ ಕೊಂಡಾಡಿದರು. ಆದರೆ ಮಕ್ಕಳು ದೊಡ್ಡವರಾದ ಮೇಲೆ ಗೊತ್ತಾದದ್ದು ತನ್ನ ಅಪ್ಪ ಸಾಲ ಮಾಡಿ ತಮ್ಮನ್ನು ಖುಷಿಗೊಳಿಸಿದ್ದು. ಅಪ್ಪ ಮಾಡಿದ ಸಾಲದಿಂದ ತಿದ್ದಿಕೊಂಡ ಮಕ್ಕಳು ತನ್ನಪ್ಪ ಮಾಡಿದ ತಪ್ಪನ್ನು ತಾವು ಮಾಡಿ ತಮ್ಮ ಮಕ್ಕಳಿಗೆ ಸಾಲದ ಹೊರೆ ನೀಡಲಿಲ್ಲ. ತಮ್ಮ ಮಕ್ಕಳಿಗೆ ತಿಳಿಸಿಯೇ ಬೆಳೆಸಿದರು. ಆದರೆ ಮಕ್ಕಳು ಮಾತ್ರ ತನ್ನಪ್ಪ ತನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೆಂದೇ ಭಾವಿಸಿದರು. ಇದೇ ಗತಿ ಈಗ ಎನ್‌ಡಿಎ ಸರಕಾರದ್ದು. ಹಿಂದಿನ ಯುಪಿಎ ಸರಕಾರ ಓಲೈಕೆ ರಾಜಕಾರಣಕ್ಕಾಗಿ ಸಾಲ ಮಾಡಿ ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯನ್ನು ಏರಿಸಲು ಬಿಡಲಿಲ್ಲ. ಅದನ್ನು ತಿಳಿಯದ ಜನರು ಖುಷಿ ಪಟ್ಟರು. ಆದರೆ ಆ 2 ಲಕ್ಷ ಕೋಟಿ ಸಾಲವನ್ನು ತೀರಿಸಿದ ಮೋದಿಯು ಮತ್ತೊಮ್ಮೆ ಅದೇ ರೀತಿಯ ಸಾಲ ಮಾಡಿ ಓಲೈಕೆ ರಾಜಕಾರಣ ಮಾಡಲಿಲ್ಲ. ಮುಂದೆಯೇ ವಾಸ್ತವಾಂಶಗಳನ್ನಿಟ್ಟು ಸುಮ್ಮನಾಗಿದ್ದಾರೆ. ಈಗ ನೀವೇ ಯೋಚಿಸಿ ನಿಮಗೆ ಸಾಲಬೇಕೋ ಅಥವಾ ವಾಸ್ತವದ ಅರಿವು ಬೇಕೋ?

ಮಾತು ಮಾತಿಗೂ ಕಚ್ಚಾ ತೈಲದ ಬೆಲೆಯು 100 ಡಾಲರ್ ಗಡಿ ದಾಟಿದಾಗಲೂ ನಾವು ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಏರಿಸಲಿಲ್ಲವೆಂದು ಬಾಯಿ ಬಡಿದುಕೊಳ್ಳುವ ಇಂದಿನ ವಿರೋಧ ಪಕ್ಷಗಳು, ಅವರ ಆಡಳಿತಾವಧಿಯಲ್ಲಿ ಒಂದು ಡಾಲರ್‌ಗೆ ಕೇವಲ 45ರುಪಾಯಿಯನ್ನು ನೀಡಬೇಕಿತ್ತು. (2011ರ ಆಗಸ್‌ಟ್ ತಿಂಗಳ ಅಂಕಿಅಂಶ) ಅಂದರೆ ನಾವು ಕಚ್ಚಾ ತೈಲವನ್ನು ಆಮದು ಮಾಡಿಕೊಂಡಾಗ, ಕೊಡಬೇಕೇ ಹೊರತು ರೂಪಾಯಿಯಲ್ಲಲ್ಲ. ಈಗಿನ ಒಂದು ಡಾಲರ್‌ಗೆ 72ರುಪಾಯಿ ಆಗಿದೆ. ಹಾಗಿದ್ದರೆ ಈಗ ನಾವು ಅತಿ ಹೆಚ್ಚು ನೀಡಬೇಕಲ್ಲ.

2011ರ ಆಗಸ್‌ಟ್ನಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 112 ಡಾಲರ್‌ನಷ್ಟಿತ್ತು. ಅಂದರೆ ಅಂದಿನ ಡಿಸೇಲ್ ದರಕ್ಕೆ ತಾಳೆ ಮಾಡಿ ನೋಡಿದರೆ, 112ಗಿ45=5040 ರುಪಾಯಿಯಾಗುತ್ತದೆ. 2018ರ ಆಗಸ್ಟಿನಲ್ಲಿ ಒಂದು ಬ್ಯಾರಲ್‌ನ ಕಚ್ಚಾತೈಲದ ಬೆಲೆಯು 80 ಡಾಲರ್ ದಾಟಿದೆ. ಅಂದರೆ ಇಂದು ಒಂದು ಡಾಲರ್‌ಗೆ 72ರುಪಾಯಿ. ಈ ದರಕ್ಕೆ ತಾಳೆ ನೋಡಿದಾಗ, 80 ಡಾಲರ್ ಗಿ 72 ರುಪಾಯಿ= 5760 ರುಪಾಯಿ ಆಗುತ್ತದೆ. 2011ರಲ್ಲಿ ಕಚ್ಚಾ ತೈಲದ ಬೆಲೆಯು 112ಡಾಲರ್ ಇದ್ದರೂ, ಅಂದಿನ ಸರಕಾರವು ಒಂದು ಬ್ಯಾರಲ್‌ಗೆ 5040ರುಪಾಯಿ ನೀಡಬೇಕಿತ್ತು. ಇಂದು 80 ಡಾಲರ್‌ಗೆ ಇಳಿದಿದ್ದರೂ ಇಂದಿನ ಸರಕಾರವು 5760 ರುಪಾಯಿಯನ್ನು ಕೊಡಬೇಕು. ಅಂದರೆ ಸುಮಾರು 720ರುಪಾಯಿಯನ್ನು ಅಧಿಕ ಮೊತ್ತವನ್ನು ನೀಡಬೇಕಿದೆ. ಈ ಸತ್ಯವನ್ನು ಯಾವ ಮೀಡಿಯಾಗಳು, ಪ್ರತಿಪಕ್ಷದವರೂ ಹೇಳುವುದಿಲ್ಲ. ಯಾಕೆಂದರೆ, ಜನ ಸಾಮಾನ್ಯರಿಗೆ ಇದರ ಅರಿವು ಬಹಳ ಕಡಿಮೆಯಿದೆಯೆಂಬುದು ತಿಳಿದಿದೆ. ಒಂದು ವಿಷಯ ತಿಳಿದುಕೊಳ್ಳಬೇಕು ಅಂತರಾಷ್ಟ್ರೀಯ ಕರೆನ್ಸಿಯಾದ ಡಾಲರ್ ನಮ್ಮ ನಿಯಂತ್ರಣದಲ್ಲಿ ಸದ್ಯಕ್ಕಂತೂ ಇಲ್ಲವೇ ಇಲ್ಲ. ಅಮೆರಿಕ ದೇಶವು ತಾನು ದೊಡ್ಡಣ್ಣನಾದ ಮೇಲೆ ತನ್ನ ಕರೆನ್ಸಿಯನ್ನು ಪ್ರತಿಯೊಂದು ದಿನವೂ ಬಲಿಷ್ಠಗೊಳಿಸುವುದರಲ್ಲಿಯೇ ಇಂದಿಗೂ ಸಾಗುತ್ತಿದೆ. ಅದನ್ನು ತಪ್ಪೆಂದು ನಾವು ಹೇಳಲಾಗುವುದಿಲ್ಲ. ಯಾಕೆಂದರೆ ಅವರ ದೇಶವನ್ನು ಬಲಿಷ್ಠಗೊಳಿಸಿಕೊಳ್ಳುವದರಲ್ಲಿ ತಪ್ಪಿಲ್ಲ, ನಾವು ನಮ್ಮ ದೇಶವನ್ನು ಬಲಿಷ್ಠಗೊಳಿಸಿಕೊಂಡ ಹಾಗೆ, ಅವರೂ ಸಹ ಮಾಡುತ್ತಾರೆ.

ಈ ಪೆಟ್ರೋಲ್‌ನ ಬಗ್ಗೆ ಮತ್ತೊಂದು ಅಂತಾರಾಷ್ಟ್ರೀಯ ಸಮಸ್ಯೆಯನ್ನು ನಾವು ಅರ್ಥ ನಮ್ಮ ದೇದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ತೈಲಬಾವಿಗಳಿಲ್ಲ. ಏನಿದ್ದರೂ ನಾವು ಕೊಲ್ಲಿ ರಾಷ್ಟ್ರಗಳನ್ನೇ ಅತಿ ಹೆಚ್ಚು ಅವಲಂಭಿಸಿದ್ದೇವೆ. ಈ ಕೊಲ್ಲಿ ರಾಷ್ಟ್ರಗಳಿಗೆ ನಮ್ಮದು ವೀಕ್‌ನೆಸ್ ತಿಳಿದಿರುವುದರಿಂದ ಕೆಲವೊಮ್ಮೆ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿಬಿಡುತ್ತದೆ.. ಅಲ್ಲಿ ಯಾವಾಗ ಉತ್ಪಾದನೆ ಕಡಿಮೆಯಾಗುತ್ತದೆಯೋ ಪೆಟ್ರೋಲ್, ಡಿಸೇಲ್ ಬೆಲೆ ಪ್ರಪಂಚದಾದ್ಯಂತ ಬೇಡಿಕೆಯೂ ಹೆಚ್ಚಾಗುತ್ತ ಹೋಗುತ್ತದೆ. ಬೇಡಿಕೆ ಹೆಚ್ಚಾದ ಕೂಡಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯೂ ಏರಿಕೆಯಾಗುತ್ತದೆ. ಈಗ ನಡೆಯುತ್ತಿರುವ ಸಮಸ್ಯೆ ಇದೆ. ರಾಷ್ಟ್ರಗಳು ತಮ್ಮಲ್ಲಿನ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿವೆ. ಅದರಲ್ಲಿಯೂ ನಮ್ಮ ಮಿತ್ರ ರಾಷ್ಟ್ರವಾಗಿದ್ದ ಇರಾನ್ ಕೂಡ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಇರಾನ್ ಜಗತ್ತಿನಲ್ಲಿ ಅತಿಹೆಚ್ಚು ಕಚ್ಚಾ ತೈಲಾ ಉತ್ಪಾದಿಸುವ ರಾಷ್ಟ್ರಳಲ್ಲೊಂದು. ಭಾರತವೂ ಅತಿ ಹೆಚ್ಚು ಕಚ್ಚಾ ತೈಲವನ್ನು ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತದೆ. ಈ ನಡುವೆ ವಿಶ್ವದ ಹಿರಿಯಣ್ಣ ಅಮೆರಿಕ ಹಾಗೂ ಇರಾನ್‌ನ ನಡುವೆ ಹಲವಾರು ದಶಕಗಳಿಂದ ಪರಮಾಣು ಅಣ್ವಸ್ತ್ರ ವಿಚಾರದಲ್ಲಿ ಶೀತಲ ಸಮರವೊಂದು ನಡೆಯುತ್ತಲೇ ಇದೆ. ಈ ತಣ್ಣಗಾಗಿದ್ದ ಈ ಸಮರ ಈಗ ಮತ್ತೆ ಶುರುವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್‌ಡ್ ಟ್ರಂಪ್ ಇರಾನ್‌ನ ಜತೆಗೆ ವಾಣಿಜ್ಯ ಸಂಬಂಧ ಹೊಂದಿರುವ ರಾಷ್ಟ್ರಗಳು ಅಮೆರಿಕ ದೇಶದೊಡಗಿನ ವ್ಯಾಪಾರ ಸಂಬಂಧವನ್ನು ನಿಲ್ಲಿಸುವಂತೆ ನಿರ್ಬಂಧ ಹೇರಲು ಮುಂದಾಗಿದ್ದಾರೆ. ಈ ನಿರ್ಬಂಧವನ್ನು ಹೇರಲು ಟ್ರಂಪ್‌ನ ಈ ನಿರ್ಧಾರದಿಂದ ಇಡೀ ಜಗತ್ತೇ ಅಲುಗಾಡಿದೆ.

ಅಮೆರಿಕದ ಜತೆಗೆ ಅತಿಹೆಚ್ಚು ರಫ್ತು ಮಾಡುವ ದೇಶಗಳಾದ, ಭಾರತ, ಚೀನಾ, ಟರ್ಕಿ, ಐರೋಪ್ಯ ಒಕ್ಕೂಟ ಎಲ್ಲರಿಗೂ ಒಂದು ರೀತಿಯ ಬಿಸಿ ತುಪ್ಪವಾಗಿ ಒಂದೆಡೆ ಅಮೆರಿಕದೊಂದಿಗಿನ ಸಂಬಂಧ ಕಳೆದುಕೊಂಡರು ಆಯಾ ದೇಶದ ಉದ್ದಿಮೆ ಹಾಗೂ ಕೆಲಸಗಳ ಮೇಲೆ ಭಾರೀ ಹೊಡೆತ ಬೀಳುತ್ತದೆ. ಮತ್ತೊಂದೆಡೆ ಇರಾನ್‌ನ ಜತೆ ಹೋಗದಿದ್ದರೆ, ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತದೆ. ಎರಡರಿಂದಲೂ ದೇಶಕ್ಕೆ ಆಗುವ ನಷ್ಟವನ್ನು ಊಹಿಸಲು ಸಾಧ್ಯವಿಲ್ಲ. ಭಾರತವೂ ಅಷ್ಟೇ. ಈಗ ಅಮೆರಿಕವನ್ನು ಬಿಡುವ ಹಾಗಿಲ್ಲ, ಅತ್ತ ಇರಾನ್ ದೇಶವನ್ನು ಸಹ ಬಿಡುವ ಹಾಗಿಲ್ಲ. ಅತ್ತ ದರಿ ಇತ್ತ ಪುಲಿ ಎಂಬಂತೆ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದೇವೆ. ಎಲ್ಲಾ ಕಾರಣಗಳಿಂದಲೇ ಇಂದು ಒಂದು ಡಾಲರಿಗೆ 72ರುಪಾಯಿಯನ್ನು ಕೊಡುವಂತಹ ಪರಿಸ್ಥಿತಿ ಬಂದಿದೆ.

1947ರಲ್ಲಿ ಭಾರತ ಹಾಗೂ ಅಮೆರಿಕವು ಎಲ್ಲ ರೀತಿಯಲ್ಲಿಯೂ ಒಂದೇ ರೀತಿಯ ಬೆಳವಣಿಗೆಯಲ್ಲಿದ್ದವು. ಅಂದು ಒಂದು ಡಾಲರ್‌ಗೆ ಒಂದು ರುಪಾಯಿ ಇತ್ತು. 2014ರಲ್ಲಿ ಒಂದು ಡಾಲರ್‌ಗೆ 63ರುಪಾಯಿಗೆ ತಲುಪಿತ್ತು. ಇಂದು ಕೇಂದ್ರ ಸರಕಾರದ ಕಡೆ ಬೆರಳು ಮಾಡಿ ತೋರಿಸುವ ಕಾಂಗ್ರೆಸ್‌ನ ನಾಯಕರು ತಾವೇ ಇಷ್ಟು ಸುದೀರ್ಘ ವರ್ಷಗಳ ಕಾಲ ದೇಶವನ್ನಾಳಿದ್ದು ಎಂಬುದನ್ನು ಮರೆತಿದ್ದಾರೆ. ಇವರ ಆರ್ಥಿಕ ನೀತಿಯಿಂದಲೇ ನಮಗೆ ಈ ರೀತಿಯ ಪರಿಸ್ಥಿತಿ ಬಂದಿದ್ದು. ಇವರ ಆಡಳಿತವೊಂದು ಸರಿಯಾದ ರೀತಿಯಲ್ಲಿ ನಡೆದಿದ್ದರೆ, ನಮಗ್ಯಾಕೆ ಇಂದು ಈ ಪರಿಸ್ಥಿತಿ ಎದುರಾಗುತ್ತಿತ್ತು. ಇನ್ನು ತೆರಿಗೆಯ ವಿಚಾರಕ್ಕೆ ಬರುವುದಾದರೆ, ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ಒಟ್ಟಾರೆ ಶೇ. 45ರಷ್ಟು ತೆರಿಗೆಯನ್ನು ಕೇಂದ್ರ ಹಾಗೂ ರಾಜ್ಯಗಳೆರಡೂ ವಿಧಿಸುತ್ತವೆ. ಇದರಲ್ಲಿ ಶೇ.33ರಷ್ಟು ತೆರಿಗೆಯು ರಾಜ್ಯಗಳ ಪಾಲಾಗುತ್ತವೆ. ಉಳಿದ ಉಳಿದ ಶೇ. 12ರಷ್ಟು ಮಾತ್ರ ಕೇಂದ್ರದ ಪಾಲಾಗುತ್ತದೆ. ಹಾಗಾದರೆ ತೆರಿಗೆ ಇಳಿಕೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕಿರುವುದು ಸರಕಾರಗಳೇ ಹೊರತು ಕೇಂದ್ರಸರಕಾರವಲ್ಲ. ಇಷ್ಟೆಲ್ಲ ಮಾತಾಡುವ ರಾಹುಲ್ ಗಾಂಧಿಯು ತನಗೆ ನೈತಿಕತೆ ಇದ್ದರೆ, ತಮ್ಮದೇ ಸರಕಾರವಿರುವ ಕರ್ನಾಟಕ, ಪಂಜಾಬ್ ಹಾಗೂ ಮಿಜೋರಾಂನಲ್ಲಿ ಎಷ್ಟು ತೆರಿಗೆ ಇಳಿಸಲು ತಯಾರಿದ್ದಾರೆ ಎಂದು ತಿಳಿಸಲಿ ನೋಡೋಣ?

ಇನ್ನು ಮಹಾಘಟಬಂಧನದ ಟೊಳ್ಳು ನಾಯಕರುಗಳಾದ ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಕುಮಾರಸ್ವಾಮಿ, ಪಿಣರಾಯಿ, ಸ್ಟಾಲಿನ್, ತಮ್ಮ ಆಡಳಿತವಿರುವ ರಾಜ್ಯದಲ್ಲಿ ಎಷ್ಟು ತೆರಿಗೆಯನ್ನು ಜನಸಾಮಾನ್ಯರಿಗಾಗಿ ಇಳಿಸಲು ತಯಾರಿದ್ದಾರೆ ಹೇಳಲಿ ನೋಡೋಣ? ಇಲ್ಲವೇ ಇಲ್ಲ ಬಿಡಿ. ಇವರ್ಯಾರು ತೆರಿಗೆ ಯಾಕೆಂದರೆ ಹಲವಾರು ವರ್ಷಗಳಿಂದ ಇವರೇ ತೋಡಿಕೊಂಡಿರುವ ಹಳ್ಳದಲ್ಲಿ ಬೀಳಲು ತಯಾರಿಲ್ಲ.

ಇನ್ನು ನಮ್ಮ ರಾಜ್ಯದ ಸಮ್ಮಿಶ್ರ ಸರಕಾರವೂ ಇನ್ನೊಂದು ದಿಕ್ಕು. ರಾಜ್ಯದ ಆರ್ಥಿಕ ಪರಿಸ್ಥಿತಿಯೂ ಕೆಂಗೆಟ್ಟಿದೆಯೆಂದು ಗೊತ್ತಿದ್ದರೂ, ರೈತರ ಸಾಲವನ್ನು ಮನ್ನಾ ಮಾಡುತ್ತೇನೆಂಬ ಭರವಸೆ ನೀಡಿ, ನೀಡಿದ ಭರವಸೆಯನ್ನು ಈಡೇರಿಸಲಾಗದೇ ಕೊನೆಗೆ ವಿಧಿಯಿಲ್ಲದೇ ಪೆಟ್ರೋಲ್, ಡಿಸೇಲ್ ಮೇಲೆ ಇನ್ನೂ ಹೆಚ್ಚಿನ ತೆರಿಗೆಯನ್ನೇರಿ ಅದರಿಂದ ಬಂದ ಹಣವನ್ನು ಸಾಲಮನ್ನಾಕ್ಕೆ ಉಪಯೋಗಿಸಿಕೊಂಡ ಕೀರ್ತಿ ನಮ್ಮ ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲುತ್ತದೆ. ಒಂದು ಕೈಯಿಂದ ಇನ್ನೊಂದು ಕೈಯಲ್ಲಿ ನೀಡಲು ಇವರೇ ಬೇಕಾ? ಅದರಲ್ಲಿಯೂ ವಿಶೇಷವೆಂದರೆ, ರೈತರು ಕೂಡ ಒಂದೆಡೆ ತಮ್ಮ ಗಾಡಿಗೆ ಹಾಕಿಸಿದ ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ತೆರಿಗೆಯನ್ನು ನೀಡಿ ಮತ್ತದೇ ಹಣವನ್ನು ಸರಕಾರ ಸಾಲ ಮನ್ನಾ ರೀತಿಯ ಐಡಿಯಾಗಳು ನೋಡಿ, ಈಗಾಗಲೇ ದಿನೇದಿನೆ ನಿಮ್ಮ ಮೇಲಿನ ಸಾಲದ ಹೊರೆಯು ಏರುತ್ತಲೇ ಇದೆ. ಆದರೆ ಅದನ್ನು ತೀರಿಸುವ ಪರಿಯನ್ನು ಯಾರೂ ಸಹ ಯೋಚಿಸುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ, ಮುಂದೊಂದು ದಿನ ನಾವೆಲ್ಲರೂ ಬೀದಿಗೆ ದಿನವೂ ದೂರವಿಲ್ಲ.

ಆದಾಯಕ್ಕೆ ತಕ್ಕಂತೆ ಜೀವನವೆಂಬುದೇ ಎಲ್ಲ ರಾಜ್ಯಗಳೂ ತಮ್ಮ ಆದಾಯಕ್ಕೆ ತಕ್ಕಂತೆ ಆಡಳಿತವನ್ನು ರೂಪಿಸಿಕೊಂಡುಬಿಟ್ಟಿದ್ದವು. ಹಲವಾರು ರಾಜ್ಯಗಳಲ್ಲಿ ಆದಾಯಕ್ಕಿಂತಲೂ ಖರ್ಚೇ ಜಾಸ್ತಿಯಾಗಿ ಸಾಲವನ್ನಾದರೂ ಮಾಡಿ ರಾಜ್ಯವನ್ನು ನಡೆಸುವಂತ ಪರಿಸ್ಥಿತಿಗಳು ಎದುರಾದವು. ಪರಿಸ್ಥಿತಿಯು ಹೀಗೆಯೇ ಮುಂದುವರಿದು ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ಒಡಿಸ್ಸಾ, .ಬಂಗಾಳ, ರಾಜಸ್ಥಾನ, ಉತ್ತರಪ್ರದೇಶ, ಹರಿಯಾಣ ಹಾಗೂ ಜಮ್ಮು ಕಾಶ್ಮೀರದಂತಹ ರಾಜ್ಯಗಳು ಸಾಲದಲ್ಲಿ ದಿನೇ ದಿನೇ ಏರಿಕೆಯಾಗುತ್ತ ಹೋಯಿತು. ಹಿಂದಿನ ಸರಕಾರದ ಯೋಜನೆಯನ್ನು ಮುಂದುವರಿಸಬೇಕು ಜತೆಗೆ ನೂತನ ಯೋಜನೆಗಳನ್ನು ಸಹ ಅನುಷ್ಠಾನಗೊಳಿಸಬೇಕೆಂಬ ಈ ಎರಡೂ ಮಾಡಬೇಕೆಂದರೆ ಹಣ ಬೇಕು, ಹಣವೂ ಎಲ್ಲಿಂದ ಬರುತ್ತಿದೆ ಮತ್ತದೇ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಮತ್ತು ಸಾಲ ಮಾಡಿ ಜನರಿಗೆ ತುಪ್ಪ ತಿನ್ನಿಸುವ ಬದಲು ಜನರಿಗೆ ವಸ್ತು ಸ್ಥಿತಿಯನ್ನು ಅರ್ಥ ಮಾಡಿಸಿ ಇದೇ ನಿಜಾಂಶ ಬೆಲೆ ಇಳಿಸಲು ಸಾಧ್ಯವಿಲ್ಲ ಮೊದಲು ಇರುವ ಸಾಲ ತೀರಿಸೋಣ ನಿಮ್ಮ ಜನಪ್ರಿಯ ಯೋಜನೆಗಳನ್ನು ಸದ್ಯದ ಮಟ್ಟಿಗೆ ಕಡಿಮೆ ಮಾಡಿ, ಒಂದು ಸುಸಜ್ಜಿತ ರಾಜ್ಯ ನಿರ್ಮಾಣ ಮಾಡಬೇಕೆಂಬ ಸತ್ಯವನ್ನು ಯಾರೂ ಹೇಲೇ ಇಲ್ಲ. ಎಲ್ಲರಿಗೂ ಬೇಕಿರುವುದು ಅಧಿಕಾರವೊಂದೇ. ತಮ್ಮ ಪಕ್ಷವು ಅಧಿಕಾರಕ್ಕೆ ಬರಬೇಕು, ಅದಕ್ಕಾಗಿ ಜನರಿಗೆ ಓಲೈಕೆ ರಾಜಕಾರಣವನ್ನು ಮಾಡಿ ಕೈಯಲ್ಲಿ ಹಣವಿಲ್ಲದಿದ್ದರೂ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿ, ಅಧಿಕಾರ ಹಿಡಿದು ಸಾಲ ಮಾಡಿ ತುಪ್ಪ ತಿನ್ನಿಸುವುದು. ಈಗಾಗಲೇ ಹಿಂದಿನ ಸರಕಾರಗಳು ಮಾಡಿಕೊಂಡಿರುವ ಯೋಜನೆಗಳನ್ನು ನಿಲ್ಲಿಸಿದರೆ, ಜನರಿಗೆ ಬೇರೆಯದೇ ಸಂದೇಶ ರವಾನೆಯಾಗುತ್ತದೆ. ಇನ್ನು ನಿಲ್ಲಿಸದೇ ಇದ್ದರೆ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಇಳಿಸಲಾಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಹೇಗೆ ಇಂದಿನ ಸರಕಾರಗಳು ತೆರಿಗೆ ಇಳಿಕೆ ಮಾಡುತ್ತವೆ ಯೋಚಿಸಿ. ಅದಕ್ಕಾಗಿಯೇ ಮೋದಿಯ ಸಕಾರವು ಜಿಎಸ್‌ಟಿಯನ್ನು ಜಾರಿಗೆ ತಂದು ಸರಕಾರಗಳು ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆಯನ್ನು ನಂಬಿಕೊಂಡು ಇರಬಾರದೆಂದು ತೆರಿಗೆ ವ್ಯಾಪ್ತಿಯನ್ನು ಇತರೇ ವಸ್ತುಗಳಿಗೂ ವಿಸ್ತರಿಸಿ ನೂತನ ತೆರಿಗೆದಾರರನ್ನು ಜಿಎಸ್‌ಟಿ ಯ ವ್ಯಾಪ್ತಿಗೆ ತರುತ್ತಿರುವುದು.

ತೆರಿಗೆಯ ವ್ಯಾಪ್ತಿ ವಿಸ್ತಾರವಾದ ಮೇಲೆ ಮಾತ್ರ ರಾಜ್ಯ ಸರಕಾರ ಇವೆಲ್ಲವೂ ಸುಸೂತ್ರವಾಗಿ ಆದರೆ ಕನಿಷ್ಠವೆಂದರೂ ಮುಂದಿನ ಐದು ವರ್ಷಗಳ ನಂತರ ಹಂತ ಹಂತವಾಗಿ ಪೆಟ್ರೋಲ್, ಡಿಸೇಲ್‌ನ್ನು ವ್ಯಾಪ್ತಿಗೆ ತರಲು ಸಾಧ್ಯ. ಈಗ ರಾಜ್ಯಸರಕಾರಗಳಿಗೆ ಸಿಗುತ್ತಿರುವ ಶೇ.33ರಷ್ಟು ತೆರಿಗೆಯಿಂದಲೇ ಎಷ್ಟು ಸಾಲವನ್ನು ಮಾಡಿದ್ದಾರೆಂಬುದು ನಿಮಗೆ ಗೊತ್ತು. ಇನ್ನು ಜಿಎಸ್‌ಟಿ ವ್ಯಾಪ್ತಿಗೆ ಈಗಲೇ ತಂದರೇ ಶೇ.20ರಷ್ಟು ಮಾತ್ರ ತೆರಿಗೆ

ವಿಧಿಸಲಾಗುತ್ತದೆ. ಆಗ ಇನ್ನೆಷ್ಟು ಸಾಲ ಮಾಡಿ ನಮ್ಮ ತಲೆಯ ಮೇಲೆ ಬಂಡೆಯನ್ನು ಎಳೆಯಬಹುದೆಂದು ಊಹಿಸಿನೋಡಿ. ಈಗ ನಿಮಗೆ ಬರುತ್ತಿರುವ ಸಂಬಳವೂ ಹಠಾತ್ತನೇ ಅರ್ಧಕ್ಕೆ ಇಳಿದರೆ ನಿಮ್ಮ ಜೀವನದ ಪರಿಸ್ಥಿತಿಯು ಏನಾಗಬೇಡ ಅಲ್ಲವೇ? ಅದೇ ಪರಿಸ್ಥಿತಿಯೇ ಸರಕಾರದ್ದು. ಯಾರೋ ಹಿಂದೆ ಸಾಲದ ಹೊರೆಯನ್ನು ಈಗ ಹೊತ್ತು ಆಡಳಿತ ನಡೆಸುವುದು ಅಷ್ಟು ಸುಲಭವಲ್ಲ. ಈಗ ಹೊರಬಿದ್ದಿರುವ ನಿಜಾಂಶವನ್ನು ಹಿಂದಿನ ಕಾಂಗ್ರೆಸ್ ಸರಕಾರವು ಜನರ ಮುಂದೆ ಇಟ್ಟಿದ್ದರೆ, ಈ ಪರಿಸ್ಥಿತಿಯೂ ನಮಗೆ ಬರುತ್ತಿರಲಿಲ್ಲ. ನರೇಂದ್ರ ಮೋದಿಯೂ ಈ ಹಿಂದಿನವರು ಮಾಡಿದ ರೀತಿ ಸಬ್ಸಿಡಿ ನೀಡುತ್ತೇನೆಂದು ಭರವಸೆ ನೀಡಿ, ಜನರಿಗೆ ಪೆಟ್ರೋಲ್,ಡಿಸೇಲ್ ಬೆಲೆಯನ್ನು ಕಡಿಮೆ ಮಡಿ ವೋಟ್ ಬ್ಯಾಂಕ್‌ನ್ನು ಹೆಚ್ಚಿಸಿಕೊಳ್ಳುವುದು ದೊಡ್ಡ ವಿಷಯವಲ್ಲ. ಯಾರೋ ಮುಂದಿನ ಹತ್ತು ವರ್ಷಗಳ ನಂತರ ಬಂದು ಸರಕಾರವು ಸಾಲ ಎಂದು ತಾನೂ ಸಹ ಇಂದು ಅದೇ ಕೆಲಸ ಮಾಡಿ ಸಾಲದಲ್ಲಿ ಸರಕಾರ ನಡೆಸಿದರೆ ಏನಾಗುತ್ತದೆ ಯೋಚನೆ ಮಾಡಿ? ಒಂದಂತೂ ಅರ್ಥಮಾಡಿಕೊಳ್ಳಬೇಕು. ಈಗ ನಮ್ಮ ಮುಂದಿರುವುದು ನಿಜಾಂಶ ಇದೇ ರಿಯಾಯಿತಿ ಹಿಂದಿನವರು ಮುಚ್ಚಿಟ್ಟಿದ್ದರು. ಮೋದಿಯು ಮುಚ್ಚಿಡುತ್ತಿಲ್ಲ. ಇದು ಸದ್ಯಕ್ಕೆ ತಾತ್ಕಾಲಿಕ ಅಷ್ಟೇ. ಮುಂದಿನ ದಿನಗಳಲ್ಲಿ ಸಮಸ್ಯೆಗಳು ಸರಿಹೋಗುತ್ತವೆ. ಆಗ ಮಾತ್ರ ಯಾರೂ ಸಹ ಮಾತನಾಡುವುದಿಲ್ಲ.

ಈಗ ಯೋಚಿಸಿ ನಿಜ ಸ್ವಲ್ಪ ಕಹಿಯಾದರೂ ಒಳ್ಳೆಯದು. ನಮಗೆ ನಿಜಾಂಶ ಬೇಕೋ ಅಥವಾ ಸಾಲ ಪೆಟ್ರೋಲ್, ಡಿಸೇಲ್ ಬೆಲೆ ಇಳಿಸಿಕೊಳ್ಳಬೇಕೋ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು.