ವಿಶ್ವವಾಣಿ

ರಜನಿಕಾಂತ್ ‘ಪೆಟ್ಟಾ’ ಮೋಷನ್ ಪೋಸ್ಟರ್ ರಿಲೀಸ್

‘ಕಾಲಾ’ ಸಿನಿಮಾದ ನಂತರ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯದಲ್ಲಿ ಸಕ್ರಿಯವಾಗಲಿದ್ದಾರೆ, ಸಿನಿಮಾದಿಂದ ದೂರವುಳಿಯಲಿದ್ದಾರೆ ಎಂಬ ಅಂತೆಕಂತೆಗಳಿಗೆ ಈಗ ಫುಲ್‌ಸ್ಟಾಪ್ ಬಿದ್ದಿದೆ.

ಹೌದು. ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆೆ ಚರ್ಚೆಗಳು ನಡೆಯುತ್ತಿರುವಂತೆ, ಅವರ ಅಭಿನಯದ ಮುಂದಿನ ಚಿತ್ರದ ಟೈಟಲ್ ಮತ್ತು ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಅಂದಹಾಗೆ, ರಜನಿಕಾಂತ್ ಅಭಿನಯದ ಮುಂದಿನ ಹೊಸ ಚಿತ್ರದ ಹೆಸರು ‘ಪೆಟ್ಟಾ’. ತಮಿಳಿನ ಭರವಸೆಯ ಯುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಈ ಚಿತ್ರಕ್ಕೆೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಕಳೆದ ಶುಕ್ರವಾರ ‘ಪೆಟ್ಟಾ’ ಚಿತ್ರದ ಮೋಷನ್ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಚಿತ್ರದ ಪೋಸ್ಟರ್ ನೋಡಿದ್ರೆೆ, ಇದು ಗ್ಯಾಂಗ್‌ಸ್ಟರ್ ಕಥೆಯಿರುವ, ಆ್ಯಕ್ಷನ್ ಡ್ರಾಮಾ ಎಂಬಂತೆ ಭಾಸವಾಗುತ್ತೆೆ.

ಅಭಿಮಾನಿಗಳು ರಜನಿಯನ್ನ ಹೇಗೆಲ್ಲಾ ನೋಡಲು ಇಷ್ಟಪಡುತ್ತಾರೋ, ಆ ಎಲ್ಲಾ ಅಂಶಗಳು ‘ಪೆಟ್ಟಾ’ದಲ್ಲಿ ಇರಲಿವೆ ಎಂಬುದನ್ನು ಸಿನಿಮಾದ ಪೋಸ್ಟರ್ ಹೇಳುವಂತಿದೆ. ಇನ್ನು ಡಾರ್ಜಿಲಿಂಗ್ ಹಾಗೂ ಡೆಹರಾಡೂನ್ ಮೊದಲಾದೆಡೆ ಕಳೆದ ಮೂರು ತಿಂಗಳುಗಳಿಂದ ‘ಪೆಟ್ಟಾ’ ಚಿತ್ರೀಕರಣ ಭರದಿಂದ ಸಾಗುತ್ತಿದೆ. ರಜನಿಕಾಂತ್ ಅವರೊಂದಿಗೆ ವಿಜಯ್ ಸೇತುಪತಿ, ನವಾಜ್ಜುದ್ದೀನ್ ಸಿದ್ಧಿಕಿ, ಗುರು ಸೋಮಸುಂದರಮ್, ಸಿಮ್ರಾನ್, ತ್ರಿಷಾ ಸೇರಿದಂತೆ ದೊಡ್ಡ ತಾರಾಬಳಗವಿದೆ. ಪ್ರಖ್ಯಾತ ಸ್ಟಂಟ್ ಮಾಸ್ಟರ್ ಪೀಟರ್ ಹೆನ್ ‘ಪೆಟ್ಟಾ’ಗಾಗಿ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ. ಮುಂದಿನ ವರ್ಷದ ಏಪ್ರಿಲ್ ವೇಳೆಗೆ ‘ಪೆಟ್ಟಾ’ ಬಿಡುಗಡೆ ಆಗುವ ಸಾಧ್ಯತೆಗಳಿವೆ.