ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‌Photos: ತಂದೆ - ತಾಯಿಯ 50ನೇ ಮದುವೆ ವಾರ್ಷಿಕೋತ್ಸವದಲ್ಲಿ ಮಿಂಚಿದ ನಟ ರಕ್ಷಿತ್‌ ಶೆಟ್ಟಿ; ಫ್ಯಾನ್ಸ್‌ ಕಣ್ಣಿಗೆ ಬಿದ್ದ ʻಸಿಂಪಲ್‌ ಸ್ಟಾರ್‌ʼ

ಸ್ಯಾಂಡಲ್‌ವುಡ್‌ ನಟ ರಕ್ಷಿತ್ ಶೆಟ್ಟಿ ಅವರು ಕಳೆದ ಕೆಲವು ವರ್ಷಗಳಿಂದ ಬೆಳ್ಳಿಪರದೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರಾದರೂ, ಇದೀಗ ತಮ್ಮ ಕುಟುಂಬದ ವಿಶೇಷ ಸಂಭ್ರಮವೊಂದರಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ಅವರ ತಂದೆ ಶ್ರೀಧರ್ ಶೆಟ್ಟಿ ಮತ್ತು ತಾಯಿ ರಂಜನಾ ಶ್ರೀಧರ್ ಶೆಟ್ಟಿ ಅವರು ತಮ್ಮ ವೈವಾಹಿಕ ಜೀವನದ ಸುವರ್ಣ ಮಹೋತ್ಸವದ (50ನೇ ವಿವಾಹವಾರ್ಷಿಕೋತ್ಸವ) ಸಂಭ್ರಮದಲ್ಲಿದ್ದು, ಇಡೀ ಕುಟುಂಬ ಒಟ್ಟಾಗಿ ಈ ಸುದಿನವನ್ನು ಆಚರಿಸಿದೆ. ಈ ಹಿರಿಯ ಜೋಡಿಯ 50 ವರ್ಷಗಳ ತುಂಬು ದಾಂಪತ್ಯದ ಸವಿನೆನಪಿಗಾಗಿ ದೇವಸ್ಥಾನವೊಂದರಲ್ಲಿ ಸರಳ ಹಾಗೂ ಸುಂದರವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕುಟುಂಬ ಸಮೇತರಾಗಿ ಭಾಗವಹಿಸಿದ್ದ ಶೆಟ್ಟಿ ಕುಟುಂಬದವರು ವಿಶೇಷ ಪೂಜೆ, ಹೋಮ-ಹವನಗಳನ್ನು ನೆರವೇರಿಸುವ ಮೂಲಕ ತಂದೆ-ತಾಯಿಯ ಮದುವೆ ದಿನವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಿದ್ದಾರೆ. ಈ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ ನೋಡಿ.

ತಂದೆ-ತಾಯಿಯ 50ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ

-

Avinash GR
Avinash GR May 24, 2026 4:34 PM