Wedding Fashion 2025: ವಧುವಿನ ಟ್ರೆಡಿಷನಲ್ ಸಿಂಗಾರಕ್ಕೆ ಜತೆಯಾಗುವ ಬಿಂದಿಗಳಿವು
Bridal Makeup Tips: ಮದುವೆಯಾಗುವ ವಧುವಿನ ಟ್ರೆಡಿಷನಲ್ ಸಿಂಗಾರಕ್ಕೆ ನಾನಾ ಬಗೆಯ ಬಿಂದಿಗಳು ಸಾಥ್ ನೀಡುತ್ತದೆ. ಯಾವ್ಯಾವ ಬಗೆಯವನ್ನು ಹೇಗೆಲ್ಲಾ ಸ್ಟೈಲಿಂಗ್ ಮಾಡಬಹುದು? ಎಂಬುದರ ಕುರಿತು ಬ್ಯೂಟಿ ಎಕ್ಸ್ಪರ್ಟ್ಸ್ ತಿಳಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ.
ಸಾಂದರ್ಭಿಕ ಚಿತ್ರ (ಚಿತ್ರಕೃಪೆ: ಪಿಕ್ಸೆಲ್) -
ಮದುವೆಯಾಗುತ್ತಿರುವ ವಧುವಿನ ಟ್ರೆಡಿಷನಲ್ ಲುಕ್ಗೆ ನಾನಾ ಬಗೆಯ ಬಿಂದಿಗಳು ಸಾಥ್ ನೀಡುತ್ತಿವೆ. ವಧುವಿನ ಹಣೆಯ ಅಗಲಕ್ಕೆ ಅನುಗುಣವಾಗಿ ಬಿಂದಿ ಹಚ್ಚಿಕೊಳ್ಳುವುದು ಸೂಕ್ತ. ಉದಾಹರಣೆಗೆ, ಚಿಕ್ಕ ಹಣೆಗೆ ತುಂಬಾ ಅಗಲವಾದ ಬಿಂದಿ ಸೂಟ್ ಆಗದು. ಆಗ ನೋಡಲು ಬಿಂದಿ ಮಾತ್ರ ಕಾಣುತ್ತದೆ. ಹಾಗೆಯೇ ಅಗಲವಾದ ಹಣೆಗೆ ಚುಕ್ಕಿಯಂತಹ ಬಿಂದಿ ನಾಟ್ ಓಕೆ.
ಮಹೂರ್ತಕ್ಕೆ ಕೆಂಪು ಬಿಂದಿ
ಮದುವೆಯ ಮಹೂರ್ತಕ್ಕೆ ಮಾತ್ರ ಆದಷ್ಟೂ ಕೆಂಪು, ಮರೂನ್ ವರ್ಣದ ಬಿಂದಿಗಳನ್ನು ಬಳಸಲಾಗುತ್ತದೆ. ಇದು ನಮ್ಮ ಸಂಪ್ರದಾಯ. ಕಪ್ಪು ಬಿಂದಿಯನ್ನು ಮದುವೆ ಸಂದರ್ಭದಲ್ಲಿ ಬಳಸುವುದಿಲ್ಲ. ಕೆಂಪು ಬಿಂದಿ ಶುಭ ಶಕುನವೆನ್ನಲಾಗುತ್ತದೆ.
ಬಂಗಾಲಿ ಬಿಂದಿಯ ಜಾದೂ
ಟ್ರೆಡಿಷನಲ್ ಲುಕ್ ನೀಡಲು ವಧು ತಮಗಿಷ್ಟವಾದ ಬಂಗಾಲಿ ಬಿಂದಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ನೋಡಲು ಲಕ್ಷಣವಾಗಿಯೂ ಕಾಣುತ್ತದೆ. ಮದುವೆಯ ಫೋಟೋಗಳಲ್ಲೂ ಚೆನ್ನಾಗಿ ಕಾಣುತ್ತದೆ.
ಉಡುವ ಸೀರೆ ಹಾಗೂ ಡಿಸೈನರ್ವೇರ್ಗೆ ತಕ್ಕಂತಿರಲಿ
ವಧುವಿನ ಸೀರೆ ಹಾಗೂ ಉಡುಪುಗಳಿಗೆ ತಕ್ಕಂತೆ ಬಿಂದಿ ಆಯ್ಕೆ ಮಾಡುವುದು ಸೂಕ್ತ. ಸೀರೆಯಾದಲ್ಲಿ, ಆದಷ್ಟೂ ಡಿಸೈನರ್ ಬಿಂದಿಗಿಂತ ಸಾದಾ ಬಿಂದಿ ಚೆನ್ನಾಗಿ ಕಾಣಿಸುತ್ತದೆ. ಇನ್ನು ಲೆಹೆಂಗಾಗಳಿಗೆ ಡಿಸೈನರ್ ಬಿಂದಿಗಳು ಚೆನ್ನಾಗಿ ಕಾಣಿಸುತ್ತವೆ.
ಮ್ಯಾಚಿಂಗ್ ಮಾಡಿ ನೋಡಿ
ಮದುವೆಯಲ್ಲಿ ವಧು ಬಹುತೇಕ ಎದ್ದು ಕಾಣುವಂತಹ ಇಲ್ಲವೇ ಡಾರ್ಕ್ ಶೇಡ್ನ ಸೀರೆ ಧರಿಸುವುದು ಹೆಚ್ಚು. ಅದಕ್ಕೆ ಹೊಂದುವಂತದ್ದನ್ನು ಚೂಸ್ ಮಾಡಬಹುದು. ಕೆಲವಕ್ಕೆ ಕಾಂಟ್ರಾಸ್ಟ್ ವರ್ಣದ ಬಿಂದಿ ಕೂಡ ಇರಿಸಬಹುದು.
ಸ್ಕಿನ್ ಟೋನ್ಗೆ ತಕ್ಕಂತೆ ಬಿಂದಿ ಕಲರ್
ಇನ್ನು, ವಧುವಿನ ಚರ್ಮದ ಕಲರ್ನ ಆಧಾರದ ಮೇಲೆ ಬಿಂದಿ ಆಯ್ಕೆ ಮಾಡುವುದು ಉತ್ತಮ. ಆಗಷ್ಟೇ ಅದು ಎದ್ದು ಕಾಣಿಸುವುದು.