About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಸಖತ್ ವೈರಲ್ ಆಗಿದೆ ಮುತ್ತಿನ ನಗರಿಯ ಟ್ರಾಫಿಕ್ ಜಾಮ್ ಫೋಟೋ..!

ಹೈದರಾಬಾದ್: ಸಿಲಿಕಾನ್ ಸಿಟಿ ಬೆಂಗಳೂರಿನು ಟ್ರಾಫಿಕ್ ವಿಚಾರದಲ್ಲಿ ದೂರುವವರು ಈ ಸ್ಟೋರಿಯನ್ನೊಮ್ಮೆ ಓದಲೇಬೇಕು. ಅಬ್ಬಬ್ಬಾ.. ಏನು ಟ್ರಾಫಿಕ್ ಗುರೂ..! ಮುತ್ತಿನನಗರಿ ಹೈದರಾಬಾದ್‍ನಲ್ಲಿ ಆದ ಟ್ರಾಫಿಕ್ ಜಾಮ್ ಚಿತ್ರಣ ನೋಡಿದರೆ ನೀವು ಬೆರಗಾಗುವುದು ಗ್ಯಾರಂಟಿ.

ಹೌದು, ಹೈದರಾಬಾದ್‍ನಲ್ಲಿ ಪ್ರಖ್ಯಾತ ಸ್ವೀಡನ್ ಪೀಠೋಪಕರಣ ಘಟಕವನ್ನು ಆರಂಭಿಸಲಾಗಿದೆ. ಇದು ಭಾರತದಲ್ಲೇ ಅತಿ ದೊಡ್ಡ ಬಹು ಅಂತಸ್ತಿನ ಸ್ಟೋರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜನ ಮರುಳೋ.. ಜಾತ್ರೆ ಮರುಳೋ ಎಂಬಂತೆ ಇದನ್ನ ವೀಕ್ಷಿಸಲು ಸಾಗಾರೋಪಾದಿಯಲ್ಲಿ ಜನರ ದಂಡೇ ಹರಿದು ಬಂದಿತ್ತು. ಪರಿಣಾಮ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸದ್ಯ ಈ ಟ್ರಾಫಿಕ್ ಜಾಮ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಈ ಫೋಟೋಗೆ ಪ್ರತಿಕ್ರಿಯಿಸಿರುವ ಹಲವರು, ‘ಹೈದರಾಬಾದ್‍ನ ಜನರೇ ಇದೊಂದು ಪ್ರದರ್ಶನವಲ್ಲ, ‘ಐಕೆಇಎ’ ಇದೊಂದು ಸ್ಟೋರ್ ಅಷ್ಟೇ’ ಎಂದೆಲ್ಲ ಟ್ವೀಟ್ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close