About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಚಲಿಸುತ್ತಿರುವ ವಿಮಾನದ ಜತೆ ಕಿಕಿ ಡ್ಯಾನ್ಸ್..! (ವಿಡಿಯೊ)

ಮೆಕ್ಸಿಕೊ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕಿಕಿ ಚಾಲೆಂಜ್ ನ್ನು ಪೈಲೆಟ್ ಹಾಗೂ ಸಹಾಯಕಿ ವಿಭಿನ್ನವಾಗಿ ಪ್ರಯತ್ನಿಸುವ ಮೂಲಕ ಸುದ್ದಿಯಾಗಿದ್ದಾರೆ.

ಕೆಲವರು ಕಾರಿನಿಂದ ಇಳಿದು ಕಿಕಿ ಡ್ಯಾನ್ಸ್ ಮಾಡಿದ್ರೆ, ಇದು ಅಪಾಯಕಾರಿ ಎಂದೆಲ್ಲಾ ತಿಳಿದ ಕೆಲವರು ವಿಭಿನ್ನವಾಗಿ, ತಮಾಷೆಯಾಗಿಯೂ ಕಿಕಿ ಡ್ಯಾನ್ಸ್ ಮಾಡಿದ್ದರು. ಆದರೆ ಮೆಕ್ಸಿಕೋದಲ್ಲಿ ವಿಮಾನ ಪೈಲೆಟ್, ಸಹಾಯಕಿ ಫ್ಲೈಟ್ ನಿಂದ ಕೆಳಗಿಳಿದು ಕಿಕಿ ಡ್ಯಾನ್ಸ್ ಮಾಡಿದ್ದಾರೆ. ಫ್ಲೈಟ್​ ಅಟೆಂಡೆಂಟ್​ ಜತೆ ಚಲಿಸುತ್ತಿರುವ ವಿಮಾನದಿಂದ ಕೆಳಗಿಳಿದ ಪೈಲಟ್​ ​ ಅಲೆಜಾಂದ್ರ ಮಾನ್​ರಿಕ್ವೆಸ್​ ಮಾಡಿರುವ ಕಿಕಿ ಡ್ಯಾನ್ಸ್​​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇನ್ನು ಇವರಿಬ್ಬರ ಈ ವಿಡಿಯೊಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ‘ಇದೊಂದು ಅಪಾಯಕಾರಿ ಡ್ಯಾನ್ಯ್ ಯಾರೂ ಪ್ರಯತ್ನಿಸಬೇಡಿ’ ಎಂದೆಲ್ಲಾ ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಪೈಲಟ್​ ಪರವಾನಗಿ ಇನ್ನೂ ರದ್ದಾಗಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close