lakshmi-electricals

ಪಂಚ ವರ್ಷಗಳ ಗ್ರಾ.ಪಂ. ಅಭಿವೃದ್ಧಿ ಯೋಜನೆ ಸಿದ್ದ: ಸಿದ್ದರಾಮಯ್ಯ

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ ಐದು ವರ್ಷಗಳಿಗೆ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನ ಸೌಧ ಸಮಿತಿಯ ಕೊಠಡಿಯಲ್ಲಿ ನಡೆದ ಕರ್ನಾಟಕ ರಾಜ್ಯ ವಿಕೇಂದ್ರೀರಣ ಯೋಜನೆ ಹಾಗೂ ಅಭಿವೃದ್ದಿ ಸಮಿತಿಯ ಪ್ರಥಮ ಸಭೆಯಲ್ಲಿ ಮಾತನಾಡಿ, ಪಂಚಾಯಿತಿ ಅಭಿವೃದ್ಧಿಗಾಗಿ ಸಿದ್ದ ಪಡಿಸಿರುವ ಈ ಯೋಜನೆಯನ್ನು ತಾಲೂಕು ಹಾಗೂ ಜಿಲ್ಲಾ ಸಮಿತಿಗಳು ಪರಿಶೀಲಿಸಿ, ಸಂಯೋಜಿತ ವರದಿಯನ್ನು ರಾಜ್ಯ ಸಮಿತಿಗೆ ಸಲ್ಲಿಸಲ್ಲಿವೆ. ವರದಿಯನ್ನು ಸಮಿತಿ ಪರಿಶೀಲಿಸಿ, ಯೋಜನಾ ಇಲಾಖೆಗೆ ಸಲ್ಲಿಸಲಿದೆ. ತಳ ಹಂತದ ಶಿಫಾರಸ್ಸುಗಳನ್ನು ಮೇಲಿನ ಹಂತದ ಸಮಿತಿಗಳು ಬದಲಾಯಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.

ಇಡೀ ರಾಜ್ಯದ ಅಭಿವೃದ್ಧಿ ಯೋಜನೆ ಸಿದ್ಧಪಡಿಸಲು ತಳ ಹಂತದ ಗ್ರಾಮ ಸಭೆಯಿಂದ ಚರ್ಚೆ ನಡೆಸಿ ಸೂಕ್ತ ಶಿಫಾರಸ್ಸುಗಳನ್ನು ಮೇಲಿನ ಹಂತದವರೆಗೂ ಸಲ್ಲಿಸಲಾಗುವ ಹೊಸ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸಲಿದೆ. ಪಂಚಾಯತ್ ರಾಜ್ ಸಂಸ್ಥೆ ಹಾಗೂ ನಗರಾಡಳಿತ ವ್ಯಾಪ್ತಿಯ ಸಂಸ್ಥೆಗಳಿಗೆ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಅನುದಾನ, ಅಧಿಕಾರ ಮತ್ತು ಅನುಷ್ಠಾನಗೊಳಿಸುವ ಕಾರ್ಯ ವ್ಯವಸ್ಥೆಯನ್ನು ಒದಗಿಸಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನಾ ಸಮಿತಿಗೆ ತಾಲೂಕಿನ ಹೆಚ್ಚಿನ ಭಾಗ ಪ್ರತಿನಿಧಿಸುವ ವಿಧಾನಸಭಾ ಸದಸ್ಯರು ಹಾಗೂ ಜಿಲ್ಲಾ ಸಮಿತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿದ್ದು, ಗ್ರಾಮೀಣಾಭಿವೃದ್ಧಿಗೆ ಯೋಜನೆ ರೂಪಿಸುವ ಜವಾಬ್ದಾರಿಯನ್ನು ತಳಹಂತದ ಸಂಸ್ಥೆಗಳಿಗೆ ವಹಿಸಲಾಗಿದೆ.

ಸಮಾಜದಿಂದ ನಿರ್ಲಕ್ಷ್ಯಕ್ಕೆ ದುರ್ಬಲ ವರ್ಗದವರು ತಮ್ಮ ಸಮಸ್ಯೆಗಳನ್ನು ಚರ್ಚಿಸಲು ಅನುಕೂಲವಾಗುವಂತೆ ಸಭೆ ನಡೆಸಲು ಹಾಗೂ ದುರ್ಬಲ ವರ್ಗದವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸಲು ತಳಹಂತದಿಂದ ಯೋಜನೆ ರೂಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್. ಕೆ.ಪಾಟೀಲ್ ತಿಳಿಸಿದರು.

Leave a Reply

Your email address will not be published. Required fields are marked *

1 × 5 =

Monday, 27.03.2017

ಶ್ರೀದುರ್ಮುಖ ಉತ್ತರಾಯಣ ಋತು-ಶಿಶಿರ, ಮಾಸ- ಫಾಲ್ಗುಣ, ಪಕ್ಷ-ಕೃಷ್ಣ, ತಿಥಿ-ಚರ್ತುದಶಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾಭಾದ್ರಾ, ಯೋಗ-ಶುಕ್ಲ,  ಕರಣ-ಶಕುನಿ

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

 

Monday, 27.03.2017

ಶ್ರೀದುರ್ಮುಖ ಉತ್ತರಾಯಣ ಋತು-ಶಿಶಿರ, ಮಾಸ- ಫಾಲ್ಗುಣ, ಪಕ್ಷ-ಕೃಷ್ಣ, ತಿಥಿ-ಚರ್ತುದಶಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾಭಾದ್ರಾ, ಯೋಗ-ಶುಕ್ಲ,  ಕರಣ-ಶಕುನಿ

ರಾಹುಕಾಲಗುಳಿಕಕಾಲಯಮಗಂಡಕಾಲ
07.30-09.00 01.30-03.00 10.30-12.00

Read More

Back To Top