ಪರ್ವತ ಪ್ರದೇಶದಲ್ಲಿ ವಿಮಾನ ಅಪಘಾತ: 11 ಸಾವು

Posted In : ವಿದೇಶ

ಟೆಹರಾನ್: ಟರ್ಕಿಯ ಖಾಸಗಿ ಜೆಟ್ ವಿಮಾನ ಇರಾನ್ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ವಿದ್ಯಾರ್ಥಿನಿಯರೂ ಸೇರಿ ದಂತೆ ವಿಮಾನದಲ್ಲಿದ್ದ 11 ಮಂದಿ ಮೃತಪಟ್ಟರು.

ಯುನೈಟೆಡ್ ಅರಬ್ ಎಮಿರೆಟ್ಸ್ ನಿಂದ ಟರ್ಕಿ ರಾಜಧಾನಿ ಇಸ್ತಾನ್‍ಬುಲ್‍ಗೆ ವಿದ್ಯಾರ್ಥಿನಿಯರ ತಂಡವನ್ನು ಒಯ್ಯುತ್ತಿದ್ದ ವಿಮಾನ ಶೆಹ್ರ್ ಇ-ಕೋಢ್ ಬಳಿ ಪರ್ವತಕ್ಕೆ ಅಪ್ಪಳಿಸಿ ಸ್ಫೋಟಗೊಂಡಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ದುಬೈನಲ್ಲಿ ಬ್ಯಾಚುಲರೇಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ವಿದ್ಯಾರ್ಥಿನಿಯರ ಸಮೂಹ ವಿಮಾನದಲ್ಲಿ ಹಿಂದಿರು ಗುತ್ತಿದ್ದ ವೇಳೆ ಘಟನೆ ನಡೆದಿದೆ. ಬೆಟ್ಟಕ್ಕೆ ಡಿಕ್ಕಿ ಹೊಡೆದು ವಿಮಾನ ಸ್ಪೋಟಗೊಳ್ಳುವುದಕ್ಕೆ ಮುನ್ನ ಬೆಂಕಿ ಕಾಣಿಸಿಕೊಂಡಿತು ಎಂದು ಗ್ರಾಮಸ್ಥರು ಹೇಳಿದ್ದಾರೆ. ಜೊಗ್ರೋಸ್ ಪರ್ವತಕ್ಕೆ ಸ್ಥಳೀಯರು ಧಾವಿಸಿದಾಗ ಅಲ್ಲಿ ಸುಟ್ಟು ಕರಕಲಾಗಿದ್ದ 11 ಮೃತ ದೇಹಗಳು ಪತ್ತೆಯಾದವು.

Leave a Reply

Your email address will not be published. Required fields are marked *

one × five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top