About Us Advertise with us Be a Reporter E-Paper

ಯಾತ್ರಾಯಾತ್ರಾ panel2

ಮನಸೂರೆಗೊಳಿಸುವ ಲೂರೆ

ಬಿ.ಪಿ. ಶಿವಮೂರ್ತಿ

ಆ ದಿನ ಬೆಳಗ್ಗೆ ವಾಷಿಂಗ್ಟನ್ ಡಿಸಿಯಿಂದ 150 ಕಿ.ಮೀ. ದೂರದಲ್ಲಿರುವ ಶನಂಡೋವ ಕಣಿವೆಯ ಅಪ್ಪಲಾಚಿಯನ್ ಗುಡ್ಡದ ಮೇಲಿರುವ ಲೂರೆ ಎಂಬ ಸ್ಥಳಕ್ಕೆ ಹೋಗಿದ್ದೆವು. ಅಲ್ಲಿ ಒಂದು ಸುಂದರ ಕಟ್ಟಡ. ಅದರಲ್ಲಿ ಶೌಚಾಲಯ, ಉಪಾಹಾರ ಗೃಹ, ಅಂಗಡಿ ಮತ್ತು ಒಂದು ಕೌಂಟರ್ ಮಾತ್ರ ಇದ್ದವು. ಇಲ್ಲಿ ನೋಡಲು ಏನಿದೆ ಎಂಬುದೇ ನಮಗೆ ಅರ್ಥವಾಗಲಿಲ್ಲ. ಟಿಕೆಟ್ ಕೊಂಡು, ಆ ಕಟ್ಟಡದೊಳಗೇ ಇದ್ದ ಒಂದು ಬಾಗಿಲ ಬಳಿ ನಾನು, ಪತ್ನಿ ಮತ್ತು ನನ್ನ ಮಗ ಹೋದೆವು. ಅಲ್ಲಿ ಒಬ್ಬ ಮಹಿಳಾ ಗೈಡ್ ಮತ್ತು ಒಂದಷ್ಟು ಪ್ರವಾಸಿ ಗರು ಇದ್ದರು. ಆಕೆ, 40ಜನರ ನಮ್ಮ ತಂಡವನ್ನು ಆ ಬಾಗಿಲ ಮೂಲಕ ಕರೆದುಕೊಂಡು ಹೊರಟಳು.

ನಾವು ಬಾಗಿಲು ದಾಟುತ್ತಿದ್ದಂತೆೆುೀ ಮುಂದೆ, ಕೆಳಕ್ಕಿಳಿಯಲು ಸಿಮೆಂಟಿನಿಂದ ಮಾಡಿದ ಮೆಟ್ಟಲುಗಳಿದ್ದವು. ಹತ್ತಾರು ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆಯೇ, ಒಂದು ವಿಶಾಲವಾದ ಮತ್ತು ತಂಪಾದ ಭೂಗರ್ಭ ಗುಹೆಗೆ ಬಂದಿದ್ದೆವು. ಅಲ್ಲಿ ಖನಿಜ ರಚನೆಗಳ (ಸ್ಪೆಯೋಥೆಂ) ಅದ್ಭುತ ಸುಂದರ ದೃಶ್ಯ ವೈಭವದ ಪ್ರಪಂಚವೇ ನಮ್ಮೆದುರು ತೆರೆದುಕೊಂಡಿತ್ತು. ಬಿಳಿ, ಕಂದು, ನೀಲಿ, ಹಸಿರು, ಕಪ್ಪು ಬಣ್ಣಗಳ ವೈವಿಧ್ಯಮಯ, ನೂರಾರು ಖನಿಜ ರಚನೆ ಗಳಿರುವ ಅದ್ಭುತ ಲೋಕಕ್ಕೇ ಕಾಲಿಟ್ಟಿದ್ದೆವು. ನೆಲದಿಂದ ಮೇಲ ಕ್ಕೆದ್ದಿರುವ (ಸ್ಟಾಲಗ್ಮೈಟ್‌ಸ್) ನೂರಾರು ವಿವಿಧ ಆಕಾರದ, ವಿವಿಧ ಆಳತೆಯ ಸ್ಥಂಭಾಕಾರಗಳು, ಮೊಟ್ಟೆಯಾಕಾರಗಳು, ಮೇಲ್ಚಾವಣಿ ಯಿಂದ ನೇತಾಡುವ ಪೆಂಡೆಂಟಾಕೃತಿಗಳು, ಕಂಬ ಗಳು, ನೆಲದಿಂದ ಚಾವಣಿಯವರೆಗೂ ನಿಂತಿರುವ ವಿವಿಧ ಅಳತೆಗಳ ಸ್ಥಂಭಗಳು, ಗುಹೆಯ ಗೋಡೆಗಳಲ್ಲಿ ನೆರಿಗೆಗಳನ್ನು ಹೊಂದಿರುವ ಮುಖಪರದೆ ಅಥವಾ ಬುರ್ಖಾದಂಥ ರಚನೆಗಳು, ಗುಡಾರ (ಟೆಂಟ್)ದಂಥ ರಚನೆಗಳು ಮೊದಲಾದುವು. ಈ ರಚನೆಗಳನ್ನು ನೋಡುತ್ತಿದ್ದರೆ, ಪ್ರಕೃತಿಯ ಕಲಾ ಕೌಶಲ್ಯದ ಕೈಚಳಕಕ್ಕೆ ಮನಸ್ಸು ಮೂಕವಾಗುತ್ತದೆ. ಈ ಗುಹೆಗಳು 64ಎಕರೆಯಷ್ಟು ವಿಸ್ತಾರ ವಾಗಿದ್ದು, ಇವುಗಳ ಎತ್ತರ ಹತ್ತಾರು ಅಡಿಗಳಿಂದ 260ಅಡಿವರೆಗೂ ಇದೆ. ಈ ಗುಹೆಯಲ್ಲಿರುವ ಖನಿಜ ರಚನೆಗಳ ಆಕಾರಗಳಿಗನು ಗುಣವಾಗಿ ಕೆಲವಕ್ಕೆ ಸೂಕ್ತ ಮಾಡಿದ್ದಾರೆ.

60 ಅಡಿ ಉದ್ದದ ಹಜಾರದಲ್ಲಿ, ನೆಲದಿಂದ ಚಾವಣಿಯವರೆಗೂ ಬೆಳೆದಿರುವ ಒಂದು 47ಅಡಿ ಎತ್ತರ ಮತ್ತು ಇನ್ನೊಂದು 25ಅಡಿ ಎತ್ತರದ ಅಚ್ಚ ಬಿಳಿಯ ಬಣ್ಣದ ಜೋಡಿ ಕಂಬಗಳಿರುವ ಸ್ಥಳಕ್ಕೆ ‘ಜೋಡಿ ಕಂಬಗಳ ಹಜಾರ’ಎಂದೂ, ಒಂದರಿಂದ ಅನೇಕ ಅಡಿಗಳ ಉದ್ದದ ಕೆಲವು ಅಂಗುಲಗಳಿಂದ ಮೂರು ಅಡಿವರೆಗೂ ಗಾತ್ರ ದಲ್ಲಿದ್ದು, ಮೇಲ್ಚಾವಣಿಯಿಂದ ನೇತಾಡುವ ಕಂಬದಂಥ ರಚನೆ ಗಳು, ಅದೇ ಅಳತೆಯಲ್ಲಿ ನೆಲದಿಂದ ಮೇಲಕ್ಕೆದ್ದಿರುವ ಸ್ಥಂಭಾಕೃತಿ ಗಳಿಗೆ ‘ಟೋಟಂ ಪೋಲ್‌ಸ್’ (ಸುಂದರ ಕೆತ್ತನೆಗಳಿರುವ ಎಂದೂ, ಕರೆದ ಮೊಟ್ಟೆಗಳಾಕಾರದ ರಚನೆಗಳಿಗೆ ‘ಫ್ರೆûಡ್ ಎಗ್‌ಸ್’ ಎಂದೂ, ಹೆಪ್ಪುಗಟ್ಟಿದ ಚಿಲುಮೆಯಾಕಾರದ ರಚನೆಗಳಿಗೆ ‘ಪ್ರೋಜನ್ ಪೌಂಟೈನ್’ ಎಂದೂ, ಗೋಡೆಗಳಲ್ಲಿ ಮೂಡಿರುವ ನೆರಿಗೆಗಳನ್ನು ಹೊಂದಿದ ಮುಖ ಪರದೆಯಾಕಾರದ ಡ್ರೇಪರಿ ರಚನೆಗಳಿಗೆ ‘ಟೈಟಾನ್‌ಸ್ ವೈಲ್’ ಎಂದೂ, ಇವೇ ರಚನೆಗಳು ಗುಡಾರದಾಕಾರದಲ್ಲಿರುವಕ್ಕೆ ‘ಸಾರಸೇನ್‌ಸ್ ಟೆಂಟ್’ ಎಂದೂ ಹೆಸರುಗಳನ್ನಿಟ್ಟಿದ್ದಾರೆ.

ಖನಿಜ ರಚನೆಗಳು ರೂಪುಗೊಳ್ಳುವ ಬಗೆ

ಖನಿಜ ರಚನೆಗಳ ಮೂಲವಸ್ತು ಸುಣ್ಣದ ಕಲ್ಲು. ಲೂರೇ ಗುಹೆ ಗಳನ್ನು ಆವರಿಸಿಕೊಂಡಿರುವ ಗೋಡೆಗಳು ಮತ್ತು ಮೇಲ್ಚಾವಣಿಗಳ ಭೂ ಹೇರಳವಾಗಿ ಸುಣ್ಣದ ಕಲ್ಲಿನ ದಾಸ್ತಾನಿದೆ ಅಲ್ಲದೆ, ಕೆಲವು ಕಡೆ, ಈ ಸುಣ್ಣದ ಕಲ್ಲಿನೊಡನೆ ಅಲ್ಪ ಪ್ರಮಾಣದಲ್ಲಿ ಕಬ್ಬಿಣ, ತಾಮ್ರ ಮತ್ತು ಮ್ಯಾಂಗನೀಸ್ ಅದುರಿನ ನಿಕ್ಷೇಪಗಳೂ ಸೇರಿಕೊಂಡಿವೆ. ಮಳೆಯ ನೀರು ಇಂಗಿ ಈ ಭೂಭಾಗದಲ್ಲಿರುವ ಸುಣ್ಣದ ಕಲ್ಲಿ ನ ಸಂಪರ್ಕಕ್ಕೆ ಬಂದಾಗ ಅದರೊಡನೆ ರಾಸಾಯನಿಕ ಕ್ರಿಯೆ ನಡೆದು ಸುಣ್ಣ ದ ದ್ರಾವಣ ಉತ್ಪತ್ತಿಯಾಗುತ್ತದೆ. ಈ ಸುಣ್ಣದ ದ್ರಾವಣ ಗುಹೆಯ ಮೇಲ್ಚಾವಣಿ ಮತ್ತು ಗೋಡೆಗಳಿಂದ ತೊಟ್ಟಿಕ್ಕತೊಡಗುತ್ತದೆ. ಹೀಗೆ ತೊಟ್ಟಿಕ್ಕುವ ಹನಿಗಳ ಸುಣ್ಣದ ನೀರಿನ ಅಂಶ ಕಡಿಮೆ ಇದ್ದರೆ ಚಾವಣಿಯಿಂದ ಹೊರ ಬರುತ್ತಿದ್ದಂತೆಯೇ ಘನೀಕೃತಗೊಂಡು ಬೆಳೆಯುತ್ತಾ ನೇತಾಡುವ ರಚನೆಗಳುಂಟಾಗುತ್ತವೆ. ಸುಣ್ಣದ ದ್ರಾವಣದಲ್ಲಿ ನೀರಿನ ಅಂಶ ಸ್ವಲ್ಪ ಹೆಚ್ಚಿದ್ದರೆ, ತೊಟ್ಟಿಕ್ಕುವ ಹನಿಗಳು ಗುಹೆ ಯ ನೆಲದ ಮೇಲೆ ಬಿದ್ದು, ಘನೀಕೃತಗೊಂಡು ನೆಲದ ಮೇಲಿಂದ ಬೆಳೆಯುವ ರಚನೆಗಳುಂಟಾಗುತ್ತವೆ. ಹಾಗೇ ಗೋಡೆಗಳಿಂದ ತೊಟ್ಟಿಕ್ಕುವ ಸುಣ್ಣದ ದ್ರಾವಣದಿಂದ ನೆರಿಗೆ ಹೊಂದಿದ ಮುಖ ಪರದೆಯ ಡ್ರೇಪರುಗಳುಂಟಾಗುತ್ತವೆ. ಮಳೆಯ ನೀರು ಕಬ್ಬಿಣದ ಅಂಶವಿರುವ ಸುಣ್ಣದ ಕಲ್ಲಿನ ಸಂಪರ್ಕಕ್ಕೆ ಬಂದಾಗ ಉತ್ಪತ್ತಿಯಾಗುವ ದ್ರಾವಣದಿಂದ ರಚನೆಗಳು ಕಂದು ಬಣ್ಣದವೂ, ತಾಮ್ರದ ಅಂಶವಿರುವ ಸುಣ್ಣದ ಕಲ್ಲಿನ ಸಂಪರ್ಕಕ್ಕೆ ಬಂದಾಗ ಉತ್ಪತ್ತಿಯಾಗುವ ದ್ರಾವಣದಿಂದ ಉಂಟಾಗುವ ರಚನೆಗಳು ಹಸಿರು/ನೀಲಿ ಬಣ್ಣದವೂ, ಮ್ಯಾಂಗನೀಸ್ ಅಂಶವಿರುವ ಸುಣ್ಣದ ಕಲ್ಲಿನ ಸಂಪರ್ಕಕ್ಕೆ ಬಂದಾಗ ಉತ್ಪತ್ತಿಯಾಗುವ ದ್ರಾವಣದಿಂದ ರೂಪುಗೊಳ್ಳುವ ರಚನೆಗಳು ಕಪ್ಪು ಬಣ್ಣದವೂ ಆಗಿರುತ್ತವೆ.

ಈ ಖನಿಜ ರಚನೆಗಳ ಉತ್ಪತ್ತಿ ನಿಧಾನ ಅಂದರೆ ತುಂಬಾ ನಿಧಾನ. ಈಗ ಸುಮಾರು 40ಕೋಟಿ ವರ್ಷಗಳಿಂದ ಈ ರಚನೆಗಳು ರೂಪುಗೊಳ್ಳುತ್ತಿರಬಹುದೆಂದು ಅಂದಾಜಿಸಿದ್ದಾರೆ. ಇವು ಜೀವಂತ ಗುಹೆಗಳಾಗಿರುವುದರಿಂದ, ಈಗಲೂ 120ವರ್ಷಗಳಿಗೆ ಘನ ಅಂಗುಲದಂತೆ ಈ ರಚನೆಗಳು ರೂಪುಗೊಳ್ಳುತ್ತಲೇ ಇವೆ ಯಂತೆ. ಈ ಗುಹೆಗಳಲ್ಲಿ ಕೆಲವು ಕಡೆ ಸ್ಫಟಿಕದಷ್ಟು ನಿರ್ಮಲವಾದ ಪುಟ್ಟ ನೀರಿನ ಕೊಳಗಳಿದ್ದು. ಅವುಗಳ ನೀರಿನಲ್ಲಿ ಖನಿಜ ರಚನೆಗಳ ಪ್ರತಿಬಿಂಬಗಳು ಕನ್ನಡಿಯಲ್ಲಿ ಕಂಡಷ್ಟು ಸ್ಪಷ್ಟವಾಗಿ ಕಾಣುತ್ತಿದ್ದವು.

ಸ್ಟಾಲಕ್ ಪೈಪ್ ಆರ್ಗನ್ ಸಂಗೀತ ವಾದ್ಯ

ಲೂರೆ ಗುಹೆಯ ಇನ್ನೊಂದು ಆಕರ್ಷಣೆಯೆಂದರೆ, ವಿವಿಧ ಗಾತ್ರ, ಉದ್ದಗಳ ನೇತಾಡುವ ಖನಿಜ ರಚನೆ (ಸ್ಟಾಲಕ್ಟೈಟ್‌ಸ್) ಗಳನ್ನು ಒಂದು ಸಣ್ಣ ಸುತ್ತಿಗೆಯಿಂದ ಬಡಿದರೆ ನಾನಾ ಶಬ್ದಗಳು ವುದನ್ನು ತಿಳಿದು, ಸ್ಪ್ರಿಂಕಲ್ ಎಂಬುವನು, ಮೂರು ವರ್ಷಕಾಲ ಶ್ರಮಿಸಿ ಲೂರೆ ಗುಹೆಯಲ್ಲಿ ತಯಾರಿಸಿರುವ ಸ್ಟಾಲಕ್ ಪೈಪ್ ಆರ್ಗನ್ ಎಂಬ ಸಂಗೀತ ವಾದ್ಯ. ಮೂರೂವರೆ ಎಕರೆಯಲ್ಲಿ ಹರಡಿರುವ 37ವಿವಿಧ ಅಳತೆಯ ಸ್ಟಾಲಕ್ಟೈಟ್‌ಗಳಿಗೆ ಚಿಕ್ಕ ಚಿಕ್ಕ ರಬ್ಬರ್ ಸುತ್ತಿಗೆಗಳು ಹೊಡೆದಾಗ ವಿವಿಧ ರೀತಿಯ ಶಬ್ದಗಳು ಹೊರಡುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ಸುತ್ತಿಗೆಗಳನ್ನು ಒಂದು ವಿದ್ಯುತ್ ಕೀ ಬೋರ್ಡಿಗೆ ಸಂಪರ್ಕಿಸಿ, ಸೂಕ್ತ ಕೀಗಳನ್ನು ಒತ್ತಿ ಈ ವಾದ್ಯ ನುಡಿಸಬಹುದು. ನಮ್ಮ ಗೈಡು ನಮಗೆ ಮೂಲಕ ವಾದ್ಯ ನುಡಿಸಿ ತೋರಿಸಿದಳು. ಆ ಸಂಗೀತ ಕೇಳಲು ತುಂಬಾ ಮಧುರವಾಗಿತ್ತು.

ಗುಹೆಗಳ ವೀಕ್ಷಣಾ ವ್ಯವಸ್ಥೆ

ಈ ಗುಹೆಗಳ ಒಳಗೆಲ್ಲಾ ಓಡಾಡಿ ನೋಡಲು, ಗಟ್ಟಿ ಇಟ್ಟಿಗೆಗಳ 3-4ಅಡಿ ಅಗಲದ ಅಚ್ಚುಕಟ್ಟಾದ ಸುಮಾರು 2ಕಿ.ಮೀ. ಉದ್ದದ ದಾರಿ ಮಾಡಿದ್ದಾರೆ. ಈ ದಾರಿಯ ಅಂಚಿಗೆ ಉಕ್ಕಿನ ಸರಳುಗಳ ಕಟಕಟೆಯನ್ನೂ ನಿರ್ಮಿಸಿದ್ದಾರೆ. ಬೆಳಕಿಗಾಗಿ ಗುಹೆಯೊಳಗಡೆ ಅಲ್ಲಲ್ಲಿ ಪ್ರಖರ ವಿದ್ಯುದ್ದೀಪಗಳನ್ನು ಇಟ್ಟಿದ್ದಾರೆ. ಈ ದೀಪಗಳ ಬೆಳಕು ನಾವು ನೋಡಬೇಕಿರುವ ಸ್ಥಳಕ್ಕೇ ಬೀಳುವಂತೆ ಫೋಕಸ್ ನಾವು ಓಡಾಡುವ ದಾರಿಯಲ್ಲಿ ಮಂದವಾದ ಬೆಳಕು ಮಾತ್ರ ಇರುವಂತೆ ವ್ಯವಸ್ಥೆ ಮಾಡಿದ್ದಾರೆ. ದೀಪಗಳಿಗೆ ಸಂಪರ್ಕಿ ಸುವ ವಿದ್ಯುತ್ ತಂತಿಗಳು ಹೊರಗೆಲ್ಲೂ ಕಾಣದಂತೆ ಎಚ್ಚರ ವಹಿಸಿದ್ದಾರೆ. ವಿದ್ಯುದ್ದೀಪಗಳ ಹೊರ ಕವಚಗಳಿಗೆ ಗುಹೆಯ ಮಣ್ಣನ್ನೇ ಬಳಿದು, ಗುಹೆಗಳ ಸೌಂದರ್ಯ ಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಈ ಗುಹೆಗಳಲ್ಲಿ ಎಲ್ಲಾ ಕಡೆಯೂ ವರ್ಷದ ಎಲ್ಲಾ ದಿನವೂ ಉಷ್ಣತೆ 12ಡಿಗ್ರಿ ಸೆಂ. ಇರುತ್ತದಂತೆ. ಇವು ನಿಸರ್ಗ ನಿರ್ಮಿತ ಹವಾ ನಿಯಂತ್ರಿತ ಗುಹೆಗಳು. ಗುಹೆ ಗಾಳಿಯ ಕಲ್ಮಶಗಳನ್ನೆಲ್ಲ ಗುಹೆಯ ಸುಣ್ಣದ ಕಲ್ಲು ಹೀರಿಕೊಳ್ಳುವುದರಿಂದ ಇಲ್ಲಿಯ ಗಾಳಿ ತುಂಬಾ ಶುದ್ಧವಾಗಿರುತ್ತದಂತೆ.

Tags

Related Articles

Leave a Reply

Your email address will not be published. Required fields are marked *

Language
Close