Sri Ganesh Tel

ಪ್ರಧಾನಿ ಮೋದಿ ಚಂದ್ರನನ್ನು ಭೂಮಿಗೆ ತರುವ ಭರವಸೆ ನೀಡುತ್ತಾರೆ: ರಾಹುಲ್

Posted In : ದೇಶ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್/ಬಿಜೆಪಿ ವಿರುದ್ಧ ಹರಿಹಾಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ಬಾರಿ ಮತ್ತೊಂದು ಅಂಥದ್ದೇ ಹೇಳಿಕೆ ನೀಡಿದ್ದಾರೆ. ವರ್ಷಾಂತ್ಯ ಗುಜರಾತ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರಕಾರದ ವಿರುದ್ಧ ಅಕ್ಷರಶಃ ಯುದ್ಧ ಸಾರಿರುವ ರಾಹುಲ್, ಮೋದಿ ಗುಜರಾತ್ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿದ್ದರು ಎಂದಿದ್ದಾರೆ.

2028ರಲ್ಲಿ ಚಂದ್ರನ ಮೇಲೆ ಮನೆ ಮಾಡುವೆನೆಂದು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 2030ರ ವೇಳೆಗೆ ಚಂದ್ರನನ್ನೇ ಭೂಮಿಗೆ ತರುತ್ತೇನೆ ಎಂದರೂ ಅಚ್ಚರಿಯಿಲ್ಲ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಗುಜರಾತ್‌ನ ಪ್ರತಿ ಯೊಬ್ಬರಿಗೂ ಚಂದ್ರನ ಅಂಗಳಕ್ಕೆ ಹೋಗಲು ಮೋದಿ ಒಂದೊಂದು ರಾಕೆಟ್ ಕೊಟ್ಟರು ಅಚ್ಚರಿಯಿಲ್ಲ ಎಂದು ರಾಹುಲ್ ಇದೇ ಸಂದರ್ಭ ಹೇಳಿದ್ದಾರೆ.

ಇದೇ ವೇಳೆ, ತಮ್ಮ ನೆಚ್ಚಿನ ವಿಷಯ ಬಡತನದ ಕುರಿತು ಮಾತನಾಡಿದ ರಾಹುಲ್, ಮೋದಿ ಕಳೆದ 22 ವರ್ಷಗಳಿಂದಲೂ ಅಧಿ ಕಾರದಲ್ಲಿದ್ದಾರೆ. ಆದರೆ 2022ರ ವೇಳೆಗೆ ಬಡತನ ನಿರ್ಮೂಲನೆ ಮಾಡುವುದಾಗಿ ಹೇಳಿದ್ದಾರೆ. ಅಮಿತ್ ಶಾ ಪುತ್ರ ಜೇರ ವ್ಯವ ಹಾರದಲ್ಲಿ ಲಾಭ ಮಾಡಿಕೊಳ್ಳುವುದು ಕೇವಲ ಅಮಿತ್ ಶಾ ಹಾಗೂ ಮೋದಿ ಮಾತ್ರ. ಅವರ ಪಾಲಿಗೆ ಅಚ್ಛೇದಿನ ಬಂದಿದೆ ಎಂದಿದ್ದಾರೆ.

ಗುಜರಾತ್‌ನ ನಾನಾ ವರ್ಗದ ಜನರೊಂದಿಗೆ ಸಮಾಲೋಚನೆ ನಡೆಸುತ್ತಿರುವ ರಾಹುಲ್ ಮನ್ ಕೀ ಬಾತ್‌ಗಿಂತ ಕಾಂಗ್ರೆಸ್ ಪ್ರತಿ ಯೊಬ್ಬರ ಟೀಕೆಯನ್ನು ಕೇಳಲಿಚ್ಛಿಸುತ್ತದೆ ಎಂದಿದ್ದಾರೆ.

Leave a Reply

Your email address will not be published. Required fields are marked *

3 × 1 =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top