About Us Advertise with us Be a Reporter E-Paper

Breaking Newsದೇಶಪ್ರಚಲಿತ

13000 ಕೋಟಿ ವೆಚ್ಚದ ತೆಲ್ಚರ್‌ ರಸಗೊಬ್ಬರ ಯೋಜನೆಗೆ ಮೋದಿ ಶಂಕುಸ್ಥಾಪನೆ

ಒಡಿಶಾದ ಝಾರ್ಸುಗುಡಾದಲ್ಲಿ ಹೊಸ ವಿಮಾನ ನಿಲ್ದಾಣ ಉದ್ಘಾಟನೆ

ಒಡಿಶಾ: 13000 ಕೋಟಿ ರೂಪಾಯಿ ವೆಚ್ಚದಲ್ಲಿ ತೆಲ್ಚರ್‌ ರಸಗೊಬ್ಬರ ಯೋಜನೆಯನ್ನು ಪುನರ್‌ ಆರಂಭಿಸಲಾಗುವುದು. ಅಲ್ಲದೇ ಕಲ್ಲಿದ್ದಲನ್ನು ಅನಿಲವಾಗಿ ಪರಿವರ್ತಿಸಿ, ಬೇವು ಲೇಪಿತ ಯೂರಿಯಾವನ್ನು ಪೋಷಕಾಂಶಯುಕ್ತವಾಗಿ ಮಾರ್ಪಡಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈ ಯೋಜನೆಯು ಇನ್ನೂ 36 ತಿಂಗಳಲ್ಲಿ ಕಾರ್ಯವನ್ನು ಆರಂಭಿಸಲಿದೆ. ಇದರಿಂದಾಗಿ ನೈಸರ್ಗಿಕ ಅನಿಲ, ರಸಗೊಬ್ಬರ ಆಮದು ನಿಯಂತ್ರಣವಾಗಲಿದೆ. ” ನಮ್ಮ ಉದ್ದೇಶ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಾಗಿದೆ” ಎಂದರು.

ಈ ಯೋಜನೆಯನ್ನು ಆಧುನಿಕ ತಂತ್ರಜ್ಞಾನ ಬಳಸಿ ಜಾರಿಗೊಳಿಸಲಾಗಿತ್ತದೆ. ಇದರಿಂದಾಗಿ ಕೇಂದ್ರ ಭಾರತಕ್ಕೆ ಉಪಯುಕ್ತವಾಗಲಿದೆ. 1.27 ಮಿಲಿಯನ್‌ ಟನ್‌ ಬೇವು ಲೇಪಿತ ಯೂರಿಯಾವನ್ನು ಉತ್ಪಾದಿಸಲಾಗುತ್ತದೆ. ಕಲ್ಲಿದ್ದಲನ್ನು ಅನಿಲವಾಗಿ ಪರಿವರ್ತಿಸಿ ಇದರಲ್ಲಿ ಬಳಸುವುದರಿಂದ ಉತ್ಪನ್ನದ ಇಳುವರಿ ಹೆಚ್ಚಾಗುತ್ತದೆ ಎಂದರು.

ದೇಶದಲ್ಲಿ ಮೊದಲ ಬಾರಿಗೆ ಕಲ್ಲಿದಲನ್ನು ಅನಿಲವಾಗಿ ಪರಿವರ್ತಿಸಲಾಗಿತ್ತಿದೆ. ಅಲ್ಲದೇ ಈ ಯೋಜನೆಯಿಂದಾಗಿ 4500 ಮಂದಿಗೆ ಉದ್ಯೋಗಾವಕಾಶಗಳು ದೊರೆಯಲಿದೆ. ” ನಾನು ಹೇಳಿರುವಂತೆ ಇನ್ನೂ 36 ತಿಂಗಳಲ್ಲಿ ಈ ಯೋಜನೆ ಕಾರ್ಯರಂಭವಾಗಲಿದೆ. ಯಾವುದೇ ಕಾರಣಕ್ಕೂ ವಿಳಂಬವಾಗುವುದಿಲ್ಲ” ಎಂದು ಹೇಳಿದರು.

ಈ ಯೋಜನೆ 2002ರಲ್ಲಿ ರೂಪುರೇಷೆಯನ್ನು ಸಿದ್ಧಪಡಿಸಲಾಗಿತ್ತು. ನಂತರ 2011ರಲ್ಲಿ ಮತ್ತೆ ಜಾರಿಗೊಳಿಸಲು ತೆಲ್ಚರ್‌ ರಸಗೊಬ್ಬರ ಲಿಮಿಟೆಡ್‌ ಅನ್ನು ಆರಂಭಿಸಲಾಗಿತ್ತು.

ಹೊಸ ವಿಮಾನ ನಿಲ್ದಾಣ ಉದ್ಘಾಟನೆ: ಒಡಿಶಾದ ಝಾರ್ಸುಗುಡಾದಲ್ಲಿ ಪ್ರಧಾನಿ ಮೋದಿ ಹೊಸ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರು. ಈ ಭಾಗದ ಜನರಿಗೆ ತುಂಬಾ ಉಪಯೋಗವಾಗಲಿದೆ. ಅಲ್ಲದೇ ಇದು ಒಡಿಶಾದ ಎರಡನೇ ವಿಮಾನ ನಿಲ್ದಾಣವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close