About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಪ್ರಧಾನಿ ಮೋದಿಗೆ ಒಲಿದು ಬಂದ ಫಿಲಿಪ್‌ ಕೊಟ್ಲರ್‌ ಅಧ್ಯಕ್ಷೀಯ ಗೌರವ

ದೆಹಲಿ: ರಾಷ್ಟ್ರವನ್ನು ಮುನ್ನಡೆಸುವಲ್ಲಿ ಅದ್ವಿತೀಯ ಸಾಧನೆ ಮಾಡಿದ ನಾಯಕರಿಗೆ ಕೊಡಮಾಡುವ ಫಿಲಿಪ್‌ ಕೊಟ್ಲರ್‌ ಪ್ರಶಸ್ತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಜನರಾಗಿದ್ದಾರೆ.

ಪ್ರಶಸ್ತಿ ನೀಡುವ ಸಂದರ್ಭ ನೀಡಲಾದ ವಿವರಣೆಯಲ್ಲಿ, “ಭಾರತದ ಅಭಿವೃದ್ಧಿಗೆ ಮೋದಿ ಅವರ ಅದ್ವಿತೀಯ ನಿಸ್ವಾರ್ಥ ಸೇವೆ, ಅವಿರತ ಪರಿಶ್ರಮಗಳ ಪರಿಣಾಮ ದೇಶವು ಅಸಾಧಾರಣ ಮಟ್ಟದ ಆರ್ಥಿಕ, ಸಾಮಾಜಿಕ ಹಾಗು ತಾಂತ್ರಿಕ ಅಭಿವೃದ್ಧಿಗಳನ್ನು ಸಾಧಿಸುತ್ತಾ ಬಂದಿದೆ” ಎಂದು ತಿಳಿಸಲಾಗಿದೆ.

“ಮೋದಿರ ದೂರದೃಷ್ಟಿಯ ನಾಯಕತ್ವದ ಕಾರಣ ದೇಶದಲ್ಲಿ ಡಿಜಿಟಲ್‌ ಕ್ರಾಂತಿಯಾಗಿ, ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ, ಆಧಾರ್‌ಗಳ ಮೂಲಕ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳು, ಆರ್ಥಿಕ ಒಳಗೊಳ್ಳುವಿಕೆ ಅಲ್ಲದೇ, ಮೌಲ್ಯಾಧರಿತ ಉತ್ಪಾದನೆ ಹಾಗು ಅನ್ವೇಷಣೆಯ ಕೇಂದ್ರವಾಗಿರುವ ಭಾರತವು ಮಾಹಿತಿ ತಂತ್ರಜ್ಞಾನ ಹಾಗು ಫೈನಾನ್ಸ್‌ಗಳ ವಿಚಾರದಲ್ಲಿ ಭಾರತವು ಜಾಗತಿಕ ಕೇಂದ್ರವಾಗಿ ಮಾರ್ಪಟ್ಟಿದೆ” ಎಂದು ಪ್ರಶಸ್ತಿ ಪತ್ರದಲ್ಲಿ ತಿಳಿಸಲಾಗಿದೆ.

ಮೇಕ್‌ ಇ‌ನ್‌ ಇಂಡಿಯಾ, ಸ್ಟಾರ್ಟ್‌ ಅಪ್ ಇಂಡಿಯಾ, ಡಿಜಿಟಲ್‌ ಇಂಡಿಯಾ ಹಾಗು ಸ್ವಚ್ಛ ಭಾರತದಂಥ ಕಾರ್ಯಕ್ರಮಗಳ ಕಾರಣ ಭಾರತವು ಉದ್ಯಮ ನಡೆಸಲು ಜಗತ್ತಿನ ಅತ್ಯಂತ ನಂಬಿಕಸ್ಥ ದೇಶವಾಗಿದೆ ಎನ್ನಲಾಗಿದೆ.

 

Tags

Related Articles

Leave a Reply

Your email address will not be published. Required fields are marked *

Language
Close