About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಇಂದು ಪ್ರಧಾನಿ ಮೋದಿ-ಶಿಂಜೋ ಅಬೆ ಮಹತ್ವದ ಮಾತುಕತೆ

ಟೋಕಿಯೊ: ಭಾರತ ಹಾಗೂ ಜಪಾನ್ ನಡುವಿನ ವಾರ್ಷಿಕ ಶೃಂಗದಲ್ಲಿ ಭಾಗವಹಿಸಲು ಟೋಕಿಯೊಗೆ ಬಂದಿಳಿದಿರುವ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ ದೊರೆತಿದೆ.

”ಟೋಕಿಯೊಗೆ ಬಂದಿಳಿದಿದ್ದೇನೆ. ಈ ಭೇಟಿಯು ಭಾರತ ಮತ್ತು ಜಪಾನ್ ನಡುವಿನ ಬಲವಾದ ಸ್ನೇಹವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಪ್ರಧಾನಿ ಟ್ವೀಟ್ ಮಾಡಿದರು. ಅಕ್ಟೋಬರ್‌ 28 ಮತ್ತು 29ರಂದು ಶೃಂಗಸಭೆ ನಡೆಯಲಿದೆ.  ರಕ್ಷಣೆ, ಸಾರಿಗೆ, ಮೂಲಸೌಕರ್ಯ, ಸಹಕಾರ ಕುರಿತು ಮಾತುಕತೆ ನಡೆಯುವ ಸಾಧ್ಯತೆಯಿದೆ. ಮೋದಿ ಹಾಗೂ ಶಿಂಜೋ ಅಬೆ ನಡುವಿನ 12ನೇ ಭೇಟಿ ಇದಾಗಿದೆ. ಶೃಂಗದಲ್ಲಿ ಉಭಯ ದೇಶಗಳ ಅಭಿವೃದ್ಧಿಗೆ ಪೂರಕವಾದ ಮಹತ್ವದ ಚರ್ಚೆ ನಡೆಯಲಿದೆ.

ಭಾನುವಾರ ಯಮನಾಶಿಯಲ್ಲಿ ಶಿಂಜೋ ಅಬೆ ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ 29 ರಂದು ಟೋಕಿಯೋದಲ್ಲಿ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಭಾಷಣ ಮಾಡಲಿದ್ದಾರೆ. ಯಮನಾಶಿಯಲ್ಲಿ ಔತಣಕೂಟ ಪಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಮುಖಂಡ ಎಂಬ ಖ್ಯಾತಿಗೆ ಮೋದಿ ಪಾತ್ರರಾಗಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close