About Us Advertise with us Be a Reporter E-Paper

Breaking Newsದೇಶಪ್ರಚಲಿತ

ಎಲ್‌.ಕೆ.ಆಡ್ವಾಣಿಗೆ ಶುಭಾಶಯ ಕೋರಿದ ಮೋದಿ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಬಿಜೆಪಿ ನಾಯಕ ಲಾಲಕೃಷ್ಣ ಆಡ್ವಾಣಿ ಅವರಿಗೆ 91ನೇ ಹುಟ್ಟುಹಬ್ಬದ ಶುಭಾಶಯ  ತಿಳಿಸಿದ್ದಾರೆ.

ಟ್ವೀಟ್ ಮಾಡಿರುವ ಅವರು, ಭಾರತೀಯ ರಾಜಕಾರಣದಲ್ಲಿ ಎಲ್‌ ಕೆ ಅಡ್ವಾಣಿ ಅವರ ಪ್ರಭಾವ ಅಪಾರವಾದುದು. ಯಾವುದೇ ಸ್ವಾರ್ಥವಿಲ್ಲದೆ ಮತ್ತು ಶ್ರದ್ಧೆಯಿಂದ ಅವರು ಬಿಜೆಪಿ ಪಕ್ಷವನ್ನು ಕಟ್ಟಿದ್ದಾರೆ. ಕಾರ್ಯಕರ್ತರನ್ನು ಅದ್ಭುತವಾಗಿ ಹುರಿದುಂಬಿಸಿದ ಕೀರ್ತಿ ಅವರದ್ದು. ನಮ್ಮ ಪ್ರೀತಿಯ ಆಡ್ವಾಣಿ ಅವರಿಗೆ ದೇವರು ಒಳ್ಳೆಯ ಆರೋಗ್ಯ ಮತ್ತು ದೀರ್ಘಾವಧಿಯ ಜೀವನವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಆಡ್ವಾಣಿ ಅವರಿಗೆ ಪ್ರಧಾನಿ ಮೋದಿ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಹಾರೈಸಿದ್ದಾರೆ. ಆಡ್ವಾಣಿ 1927ರ ನ.8ರಂದು ಈಗಿನ ಪಾಕಿಸ್ಥಾನದ ಕರಾಚಿಯಲ್ಲಿ ಜನಿಸಿದ್ದರು. ಅವರು ಬಿಜೆಪಿಯ ಸಹ ಸ್ಥಾಪಕರು.

Tags

Related Articles

Leave a Reply

Your email address will not be published. Required fields are marked *

Language
Close