About Us Advertise with us Be a Reporter E-Paper

Breaking Newsದೇಶಪ್ರಚಲಿತ

ಇಡೀ ದೇಶ ಕಣ್ಣು ಬಿಜೆಪಿಯತ್ತ ನೆಟ್ಟಿದೆ: ಮೋದಿ

ದೆಹಲಿ: ಇಡೀ ದೇಶ ಬಿಜೆಪಿಯತ್ತ ಕಣ್ಣು ನೆಟ್ಟಿದೆ. ಸರ್ಕಾರ ಮೇಲೆ ಒಂದೂ ಭ್ರಷ್ಟಾಚಾರದ ಆರೋಪ ಇರದಿರುವುದು ಇತಿಹಾಸ. ನಾವು ಗರ್ವ ಪಡಬೇಕು ಎಂದು ಪಿಎಂ ಮೋದಿ ಎಂದು ಹೇಳಿದರು.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಸಮರ್ಪಣಾ ಭಾವದ ಸೇವೆಯಿಂದ ಪಕ್ಷದ ಬೃಹತ್​ ಮರವಾಗಿದೆ. ಸ್ವಾಮಿ ವಿವೇಕಾನಂದರ ಜನುಮ ದಿನದಂದೇ ನಾವು ಸೇರಿರುವುದು ಅದೃಷ್ಟ ಎಂದರು.

ಭಾರತವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದ ಪಕ್ಷ ಅದು ಬಿಜೆಪಿ ಎಂದು ಹೇಳಿದರು.  ಭಾರತ 2004- 14 ರಲ್ಲಿ  ಭ್ರಷ್ಟಾಚಾರದಿಂದ ತುಂಬಿ ತುಳುಕಿತ್ತು. ಭಾರತಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ಆರೋಪಿಸಿದರು.  ಸರ್ದಾರ್​ ವಲ್ಲಭಭಾಯ್​ ಪಟೇಲ್​  ​ ಮೊದಲ ಪ್ರಧಾನಿ ಆಗಬೇಕಿತ್ತು  ಎಂದು  ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮ  ಸಂವಿಧಾನದಲ್ಲಿ ಬಡವರಿಗೆ ಮೀಸಲು ನೀಡಲು ಅವಕಾಶ ಕಲ್ಪಿಸಲಾಗಿದೆ.  ಅದರಂತೆ ನಮ್ಮ ಸರ್ಕಾರದ ಮೂಲಕ ಸಾಮಾಜಿಕ ನ್ಯಾಯ ನೀಡಲು ಸಾಮಾನ್ಯ ವರ್ಗದ ಬಡವರಿಗೂ ಮೀಸಲು ಕಲ್ಪಿಸಲಾಗಿದೆ.  ಮೀಸಲು ನಿಮ್ಮ ಹಕ್ಕು.  ಬಿಜೆಪಿ ಸರ್ಕಾರ ಅದನ್ನು ನಿಮಗೆ ನೀಡಿದೆ.  ಶಿಕ್ಷಣ ಹಾಗೂ ನೌಕರಿಯಲ್ಲಿ ಮೇಲ್ವರ್ಗದ ಬಡವರಿಗೆ ಮೀಸಲು ಕಲ್ಪಿಸಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಸಮಾಜದ ಯಾವ ಬಡವನು ಸಹ  ಸರ್ಕಾರದ ಸವಲತ್ತಿನಿಂದ ವಂಚಿತ ಆಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಯುವಕರಿಗೆ ಅನೇಕ ಸವಲತ್ತುಗಳನ್ನ ಒದಗಿಸಲು ಸರ್ಕಾರ ಶ್ರಮಿಸಿದೆ. ಅವರಿಗೆ ಸೂಕ್ತ ಉದ್ಯೋಗ ನೀಡಲು ನಾವು ಬದ್ಧವಾಗಿದ್ದೇವೆ. ದೇಶದ ಯುವಕರಿಗೆ ನ್ಯೂ ಇಂಡಿಯಾ ಮೂಲಕ ಆತ್ಮವಿಶ್ವಾಸ ತುಂಬಿದ್ದೇವೆ. ಯುವ ಜನತೆಯೊಂದಿಗೆ ನಮ್ಮ ಸರ್ಕಾರ ನಿಂತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಯುವಕರು ಮಿಂಚುತ್ತಿದ್ದಾರೆ ಎಂದು ಬಣ್ಣಿಸಿದರು.

ದೇಶದಲ್ಲಿ ಟ್ಯಾಲೆಂಟ್​ಗಳಿಗೆ ಕೊರತೆ ಇಲ್ಲ. ಅವರನ್ನ ಗುರುತಿಸಿ ಸರ್ಕಾರ  ಅಗತ್ಯ ಸಹಾಯ ಮಾಡ್ತಿದೆ. ಮಹಿಳೆಯರ ಸಶಕ್ತೀರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದ ಮೋದಿ ರಾಜಮಾತೆ ವಿಜಯರಾಜೇ ಸಿಂಧಿಯಾ ನೆನಪಿಸಿಕೊಂಡರು. ನಾವು ಬೇಟಿ ಪಡಾವೋ ಬೇಟಿ ಬಚಾವೋ  ಕಾರ್ಯಕ್ರಮ ಜಾರಿಗೆ ತಂದಿದ್ದೇವೆ. ಹೆರಿಗೆ ರಜೆಯ ದಿನಗಳನ್ನ ಹೆಚ್ಚಿಸಿದ್ದೇವೆ. ಮೊದಲ ಬಾರಿಗೆ  ಮಹಿಳೆ ಸೇನೆಯಲ್ಲಿ ಅತ್ಯುನ್ನತ ಸ್ಥಾನ ಮಾನ ಪಡೆದಿದ್ದಾಳೆ  ಎಂದು ವಿವರಿಸಿದರು.

ದೇಶದ ರೈತರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಆದರೆ ವಿರೋಧಿಗಳು ಮತ ಬೇಟೆಗಾಗಿ ನಾನಾ ಆಮೀಷ ಒಡ್ಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ನಮ್ಮ ಸರ್ಕಾರ ತಾತ್ಕಾಲಿಕ ಪರಿಹಾರದಲ್ಲಿ ನಂಬಿಕೆ ಇಟ್ಟಿಲ್ಲ. ಬದಲಾಗಿ ದೀರ್ಘಕಾಲಿನ ಯೋಜನೆಗಳಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದರು. ದೇಶದ ರೈತರು   ಬೆಳೆದ ಬೆಳೆಗೆ ಕನಿಷ್ಟ ಪ್ರೋತ್ಸಾಹ ಧನ ಹೆಚ್ಚಿಸಿದ್ದೇವೆ. ಸ್ವಾಮಿನಾಥನ್​ ಕಮಿಟಿ ಶಿಫಾರಸು ಜಾರಿ ಮಾಡಿದ್ದೇವೆ.  ಯೋಗ್ಯ ಬೆಳೆಗೆ ಯೋಗ್ಯ ಬೆಲೆ ನೀಡಲು  ಸಹ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ನಾನು ಯಾವತ್ತು ನನ್ನ ಹೆಸರಿನಿಂದ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಇದು ಭಾರತೀಯ ಜನತಾ ಪಕ್ಷದ ಸಂಸ್ಕೃತಿ ಅಲ್ಲ. ನಮಗೆ ನಮ್ಮ ಹೆಸರು ಇಟ್ಟುಕೊಳ್ಳುವ ದೌಡು ಇಲ್ಲ. ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​ ಎಂದು ಪುನರುಚ್ಛರಿಸಿದ ಮೋದಿ, ದೇಶದ ಪ್ರತಿಯೊಬ್ಬನ ವಿಕಾಸ್​ ಆಗಲೇಬೇಕು.. ಇದೇ ನಮ್ಮ ಸರ್ಕಾರದ ಗುರಿ. ಇದು ನಮ್ಮ ಸರ್ಕಾರದ ಸಂಸ್ಕೃತಿಯೂ ಹೌದು  ಎಂದು ಹೆಮ್ಮೆಯಿಂದ  ಹೇಳಿದರು. ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ರಚಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳನ್ನು ಕ್ಲರ್ಕ್​ ರೀತಿಯಲ್ಲಿ ನಡೆಸಿಕೊಳ್ಳತ್ತಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close