About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಪಾಕ್‌: ಪಿಎಂಎಲ್‌(ಎನ್‌) ಪ್ರಧಾನಿ ಅಭ್ಯರ್ಥಿಯಾಗಿ ಶಹಬಾಝ್‌ ಶರೀಫ್‌

ಪಾಕಿಸ್ತಾನದಲ್ಲಿ ನೂತನ ಸರಕಾರ ರಚನೆಯ ಸರ್ಕಸ್‌  ಮುಂದುವರೆದಿದೆ.

ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ, ಅತಿ ದೊಡ್ಡ ಪಕ್ಷವಾದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್‌ರ ಪಾಕಿಸ್ತಾನ ತೆಹ್ರೀಕ್‌ ಏ ಇನ್ಸಾಫ್‌ ಸಣ್ಣ ಪುಟ್ಟ ಪಕ್ಷಗಳು ಹಾಗು ಸ್ವತಂತ್ರ ಅಭ್ಯರ್ಥಿಗಳ ಜತೆ ಸೇರಿ ಸರಕಾರ ರಚನೆ ಮಾಡಲು ಮುಂದಾಗಿದ್ದಾರೆ.

ಇದಕ್ಕೆ ಪ್ರತಿಯಾಗಿ, ಪಾಕ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆಯಲಿರುವ ವಿಶ್ವಾಸ ಮತಯಾಚನೆ ವೇಳೆ ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಶಹಬಾಝ್ ಶರೀಫ್‌ರನ್ನು ಪಾಕಿಸ್ತಾನ ಮುಸ್ಲಿಂ ಲೀಗ್‌(ನಮಾಝ್‌) ಘೋಷಿಸಿದೆ. ಶಹಬಾಝ್‌, ಜೈಲಿನಲ್ಲಿರುವ ಮಾಜಿ ಪ್ರಧಾನಿ ನವಾಝ್‌ ಶರೀಫ್‌ ಸಹೋದರರಾಗಿದ್ದಾರೆ.

ಇದೇ ವೇಳೆ, ಇಮ್ರಾನ್‌ ಪದೋನ್ನತಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದೆ. ಇಮ್ರಾನ್‌ ಪರವಾಗಿ ಪಾಕ್‌ ಮಿಲಿಟರಿ ಚುನಾವಣೆಯಲ್ಲಿ ಅಕ್ರಮವೆಸಗಿದೆ ಎಂದು ಇತರ ಪಕ್ಷಗಳಾದ ಪಾಕಿಸ್ತಾನ ಮುಸ್ಲಿಂ ಲೀಗ್‌ ಹಾಗು ಪಾಕಿಸ್ತಾನ ಪೀಪಲ್ಸ್ ಪಾರ್ಟಿಗಳು ಬಲವಾದ ಆಪಾದನೆ ಮಾಡಿವೆ.

ಪಿಟಿಐ ಪಕ್ಷಕ್ಕೆ ಪ್ರತಿಯಾಗಿ ವಿಪಕ್ಷಗಳೆಲ್ಲಾ ಒಂದಾಗಿ ಮೈತ್ರಿಕೂಟ ಮಾಡಿಕೊಂಡಿವೆ.

Tags

Related Articles

Leave a Reply

Your email address will not be published. Required fields are marked *

Language
Close