About Us Advertise with us Be a Reporter E-Paper

Breaking Newsದೇಶ
Trending

ರೈತರ ಆದಾಯ ವೃದ್ಧಿಸಲು ಜೈವಿಕ ಇಂಧನ ಉತ್ಪಾದನೆಗೆ ಉತ್ತೇಜನ: ಪ್ರಧಾನಿ

ದೆಹಲಿ:  ಜೈವಿಕ ಇಂಧನಗಳ ಬಳಕೆಗೆ ಉತ್ತೇಜನ ನೀಡುವ ಮೂಲಕ ರೈತರ ಆದಾಯವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಬಹುದಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ರೈತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಬ್ಬು ಹಾಗು ಕೃಷಿ ತ್ಯಾಜ್ಯಗಳನ್ನು ಇಂಧನವನ್ನಾಗಿ ಬಳಕೆ ಮಾಡುವ ಮೂಲಕ ರೈತರೆ ಆದಾಯದಲ್ಲಿ ಗಣನೀಯ ಏರಿಕೆ ಮಾಡಬಹುದಾಗಿದೆ ಎಂದ ಪ್ರಧಾನಿ, ಈ ನಿಟ್ಟಿನಲ್ಲಿ ತಮ್ಮ ಸರಕಾರ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದ್ದು, 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುವಲ್ಲಿ ಸಾಕಷ್ಟು ಗುರಿಗಳನ್ನು ಇಟ್ಟುಕೊಳ್ಳಲಾಗಿದೆ ಎಂದಿದ್ದಾರೆ.

ವಿಶ್ವ ಜೀವಿಕ ಇಂಧನ ದಿನದಂದು ಮಾತನಾಡಿದ ಪ್ರಧಾನಿ, ರೈತರ ಆದಾಯ ಹೆಚ್ಚಳ ಹಾಗು ಇಂಧನ ಭದ್ರತೆಗಳ ನಡುವೆ ಸಂಬಂಧವನ್ನು ಬಳಸಿ, ಏಥನಾಲ್‌ ಉತ್ಪಾದನೆಯನ್ನು ತ್ರಿಗುಣಗೊಳಿಸುವ ಮೂಲಕ ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ 12,000 ಕೋಟಿರುನಷ್ಟು ಉಳಿತಾಯ ಮಾಡಿ ಆಮದು ತಗ್ಗಿಸಬಹುದಾಗಿದೆ ಎಂದಿದ್ದಾರೆ.

ಏಥನಾಲ್‌ ಮೂಲಕ ಒಂದು ಲಕ್ಷ ಕೋಟಿರು ಮೌಲ್ಯದಷ್ಟು ಇಂಧನ ಉತ್ಪಾದನೆಯನ್ನೂ ಮಾಡಬಹುದಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close