About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಅಕ್ಟೋಬರ್‌ 31ಕ್ಕೆ ಐಕ್ಯತಾ ಮೂರ್ತಿ ಅನಾವರಣ: ಗುಜರಾತ್‌ ಮುಖ್ಯಮಂತ್ರಿ

ದೆಹಲಿ: ದಾಸ್ಯಮುಕ್ತ ದೇಶದ ಮೊದಲ ಗೃಹ ಸಚಿವರಾದ ಸರ್ದಾರ್‌ ಪಟೇಲರ ಬೃಹತ್‌ ಪ್ರತಿಮೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಕ್ಟೋಬರ್‌ 31ರಂದು ಅನಾವರಣ ಮಾಡಲಿದ್ದಾರೆ.

ಐಕ್ಯತಾ ಪುರುಷ ಪಟೇಲರ ಪ್ರತಿಮೆಯನ್ನು ಅವರ ಜನ್ಮದಿನವಾದ ಅಕ್ಟೋಬರ್‌ 31ರಂದೇ ನೆರವೇರಿಸಲಾಗುವುದು ಎಂದು ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ರೂಪಾನಿ, 182ಮೀಟರ್‌ ಎತ್ತರದ ಈ ಪ್ರತಿಮೆಯು ದೇಶದ ಐಕ್ಯತೆ ಹಾಗು ಸಮಗ್ರತೆಯ ಪ್ರತೀಕವಾಗಿದೆ ಎಂದಿದ್ದಾರೆ.

ಈ ಪ್ರತಿಮೆಯನ್ನು ಐಕ್ಯತೆಯ ಪ್ರತಿಮೆ ಎಂದು ಗುಜರಾತ್‌ ಸರಕಾರ ನಾಮಕರಣ ಮಾಡಿದೆ. ಪ್ರತಿಮೆ ನಿರ್ಮಾಣಕ್ಕೆ 2013ರಲ್ಲಿ ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ದೇಶಾದ್ಯಂತ ಇದೇ ಕೆಲಸಕ್ಕೆ ಹಳೆಯ  ಕಬ್ಬಿಣ, ಮಣ್ಣು ಹಾಗು ನೀರನ್ನು ಸಂಗ್ರಹ ಮಾಡಲು ಬಿಜೆಪಿ ಮುಂದಾಗಿತ್ತು.

ದೇಶವನ್ನು ಒಡೆಯಲು ಕೆಲ ದುಷ್ಟಶಕ್ತಿಗಳು ನೋಡುತ್ತಿರುವ ಈ ವೇಳೆ ಪ್ರತಿಮೆಯು ಐಕ್ಯತೆಯನ್ನು ಎತ್ತಿಹಿಡಿಯಲಿದೆ ಎಂದು ರೂಪಾನಿ ಇದೇ ವೇಳೆ ತಿಳಿಸಿದ್ದಾರೆ.

ಪಟೇಲರನ್ನು ಕಾಂಗ್ರೆಸ್‌ ಕಡೆಗಾಣಿಸಿತ್ತು. ಇದೇ ವೇಳೆ ಮೋದಿ ಅವರನ್ನು ಮತ್ತೊಮ್ಮೆ ಮುಖ್ಯವಾಹಿನಿಯ ಸ್ಮರಣೆಗೆ ತಂದಿದ್ದಾರೆ. ಅಲ್ಲದೇ ಅವರ ಸೇವೆಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ ಎಂದು ರೂಪಾನಿ ತಿಳಿಸಿದ್ಧಾರೆ.

 

Tags

Related Articles

Leave a Reply

Your email address will not be published. Required fields are marked *

Language
Close