ವಿಶ್ವವಾಣಿ

ಅಕ್ರಮ ವ್ಯವಹಾರಕ್ಕೆ ಖೊಟ್ಟಿ ಸಂಸ್ಥೆಗಳನ್ನು ನಡೆಸುತ್ತಿದ್ದ ಚೋಕ್ಸಿ: ಇಡಿ ವರದಿ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಚಳ್ಳೆಹಣ್ಣು ತಿನಿನಿರುವ ಆರ್ಥಿಕ ಅಪರಾಧಿ ಮೇಹುಲ್‌ ಚೋಕ್ಸಿ 3250 ಕೋಟಿ ರುಗಳನ್ನು ವಿದೇಶಕ್ಕೆ ಸಾಗಾಟ ಮಾಡಿದ್ದಾನೆ ಎಂದಿರುವ ಜಾರಿ ನಿರ್ದೇಶನಾಲಯ(ಇಡಿ) ತನ್ನ ಅಂಗಡಿ ಮಳಿಗೆಗಳಲ್ಲಿ ಆಭರಣಗಳನ್ನು ಬಹಳ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿಸಿದೆ.

ತನ್ನ ವೈಯಕ್ತಿಕ ಬಳಕೆಗೆ ಹಣವನ್ನು ಎಳೆದುಕೊಳ್ಳಲು ಚೋಕ್ಸಿ ಅನೇಕ ಖೊಟ್ಟಿ ಕಂಪನಿಗಳನ್ನು ಆರಂಭಿಸಿದ್ದು, ಸುಮಾರು 400 ಕೋಟಿ ರುಗಳನ್ನು ನೀರವ್‌ ಮೋದಿಗೆ ಹಾಗು 360 ಕೋಟಿ ರುಗಳನ್ನು ನೀರವ್‌ನ ತಂದೆ ದೀಪಕ್ ಮೋದಿ ಖಾತೆಗೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಮುಂಬಯಿಯ ಬ್ರಾಡಿ ಹೌಸ್‌ ಶಾಖೆಯಲ್ಲಿ 3,257 ಕೋಟಿ ರುಗಳನ್ನು ಅಕ್ರಮವಾಗಿ ಥಾಯ್ಲೆಂಡ್‌, ಅಮೆರಿಕ, ಬೆಲ್ಜಿಯಮ್‌, ಯುಎಇ, ಇಟಲಿ, ಜಪಾನ್‌, ಹಾಂಕಾಂಗ್‌ಗಳಲ್ಲಿ ಖೊಟ್ಟಿ ಸಂಸ್ಥೆಗಳ ಹೆಸರಲ್ಲಿ ಇಡಲಾಗಿತ್ತು. ಅಕ್ರಮ ವ್ಯವಹಾರಗಳನ್ನು ನಡೆಸಲು ಹಾಂಕಾಂಗ್ ಹಾಗು ಯುಎಇಗಳಲ್ಲಿ ಸಾಕಷ್ಟು ಖೊಟ್ಟಿ ಸಂಸ್ಥೆಗಳನ್ನು ಈ ಕಳ್ಳರು ತೆರೆದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಚೋಕ್ಸಿ ಹಾಗು ನೀರವ್‌ರನ್ನು ಆರ್ಥಿಕ ಅಪರಾಧಿಗಳೆಂದು ಪರಿಗಣಿಸಲು ಮುಂಬಯಿಯ ನ್ಯಾಯಾಲಯವನ್ನು ಕೋರಿರುವ ಇಡಿ ಆತನ ವಿರುದ್ಧ ಇಂಟರ್‌ಪೊಲ್‌ ಬಂಧನದ ವಾರಂಟ್‌ ಜಾರಿ ಮಾಡಲು ಕೋರಿದೆ.