ವಿಶ್ವವಾಣಿ

ಯಾವ ಪೊಲೀಸ್ ಠಾಣೆಯಲ್ಲಿ ನನ್ನ ಕಂಪ್ಲೇಟ್ ತೆಗೆದುಕೊಳ್ಳುತ್ತಿಲ್ಲ: ಹುಚ್ಚ ವೆಂಕಟ್

ಬೆಂಗಳೂರು: ಪೊಲೀಸರ ವಿರುದ್ಧ ದೂರು ನೀಡಲು ಹುಚ್ಚ ವೆಂಕಟ್ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದಾನೆ.

ಯಾವ ಪೊಲೀಸ್ ಠಾಣೆಯಲ್ಲಿ ನನ್ನ ಕಂಪ್ಲೇಟ್ ತೆಗೆದುಕೊಳ್ಳುತ್ತಿಲ್ಲ, ಹಾಗಾಗಿ ಕಮಿಷನರ್ ಗೆ ದೂರು ನೀಡಲು ಬಂದಿರುವುದಾಗಿ ಹುಚ್ಚ ವೆಂಕಟ್ ತಿಳಿಸಿದ್ದಾನೆ. ಯಾರ ವಿರುದ್ಧ ದೂರು ನೀಡಲು ಮುಂದಾಗಿದ್ದೀರಾ ಎಂದು ಪ್ರಶ್ನಿಸಿದ್ದಾಗ ವೆಂಕಟ್ ಸರಿಯಾದ ಉತ್ತರ ನೀಡುತ್ತಿಲ್ಲ. ಬುಧವಾರ ನಡು ರಸ್ತೆಯಲ್ಲಿ ಹುಚ್ಚ ವೆಂಕಟ್ ಕುಡಿದು ತೂರಾಡುತ್ತಿದ್ದು, ಇವನ ರಂಪಾಟವನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದರು.

ಗುರುವಾರ ಬೆಳಗ್ಗೆ ಹುಚ್ಚ ವೆಂಕಟ್ ಉಲ್ಲಾಳದ ಬೇಕರಿ ಬಳಿ ಬಂದು ಟೀ ಕೊಡುವ ಯುವಕನ ಮುಖಕ್ಕೆ ಬಿಸಿ ಟೀ ಎರಚಿದ್ದು ಅಲ್ಲದೇ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಹಲ್ಲೆ ನಡೆಸಿದನು. ಈ ವೇಳೆ ತಡೆಯಲು ಬಂದ ಇಬ್ಬರು ಯುವಕರ ಮೇಲೆಯೂ ಹಲ್ಲೆ ನಡೆಸಿದ್ದು, ಸದ್ಯ ಹಲ್ಲೆಗೊಳಗಾದ ಯುವಕರು ಪೊಲೀಸರಿಗೆ ಮಾಹಿತಿ ನೀಡಿದರು.

ವೆಂಕಟ್ ಮೈಮೇಲಿನ ಬಟ್ಟೆ ಕೊಳೆ ಮಾಡಿಕೊಂಡು ಥೇಟ್ ಕುಡುಕರಂತೆ ವರ್ತಿಸುತ್ತಿದ್ದನು. ಬಳಿಕ ರಾಜರಾಜೇಶ್ವರಿನಗರ ಠಾಣೆಯ ಪೊಲೀಸರು ಆತನನ್ನು ವಶಕ್ಕೆ ಪಡೆದು ಎನ್‍ಸಿಆರ್ ದಾಖಲಿಸಿದರು. ಎನ್‍ಸಿಆರ್ ದಾಖಲಿಸಿದ ಬಳಿಕ ಪೊಲೀಸರು ಎಚ್ಚರಿಕೆ ಕೊಟ್ಟು ವೆಂಕಟ್‍ನನ್ನು ಬಿಟ್ಟು ಕಳಿಸಿದರು. ಆದರೆ ಈಗ ಕಮಿಷನರ್ ಕಚೇರಿಗೆ ದೂರು ನೀಡಲು ಬಂದಿರುವುದಾಗಿ ಹುಚ್ಚ ವೆಂಕಟ್ ಹೇಳುತ್ತಿದ್ದಾನೆ.