About Us Advertise with us Be a Reporter E-Paper

Breaking Newsವಿದೇಶ
Trending

ಮಗುವಿಗೆ ಸ್ತನ್ಯಪಾನ ಮಾಡಿದ್ದ ಮಹಿಳಾ ಪೊಲೀಸ್‍ಗೆ ಸಿಕ್ತು ಬಡ್ತಿ

ಅರ್ಜೆಂಟೀನಾ: ಅಪೌಷ್ಠಿಕತೆಯಿಂದ ಬಳಲುತ್ತಿತ್ತು ಎಂದು ನಿರ್ಲಕ್ಷ್ಯ ಮಾಡಲಾಗಿದ್ದ ಮಗುವಿಗೆ ಸ್ತನ್ಯಪಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಪೊಲೀಸ್ ಗೆ ಇದೀಗ ಬಡ್ತಿ ಭಾಗ್ಯ ಸಿಕ್ಕಿದೆ.

ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಮಗು ಹಸಿವಿನಿಂದ ಒಂದೇ ಸಮನೆ ಅಳುತ್ತಿತ್ತು. ಇದನ್ನು ನೋಡಲಾಗದ ಮಹಿಳಾ ಪೊಲೀಸ್ ಆಗಿರುವ ಸೆಲೆಸ್ಟ್ ಅಯಲಾ ಎಂಬುವವರು ಆಸ್ಪತ್ರೆಯ ಅನುಮತಿ ಪಡೆದು ಮಗುವಿಗೆ ಸ್ತನ್ಯಪಾನ ನೀಡಿದ್ದರು. ಈ ದೃಶ್ಯವನ್ನು ಈಕೆಯ ಸಹೋದ್ಯೋಗಿಗಳು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿದ್ದರು. ಎಲ್ಲೆಡೆ ಮಹಿಳಾ ಪೊಲೀಸ್ ಅವರ ಈ ಮಹತ್ಕಾರ್ಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿತ್ತು.

ಸೆಲೆಸ್ಟ್ ಅಯಲಾ ಅವರು ತೋರಿದ ಈ ಮಾನವೀಯತೆಗೆ ಇದೀಗ ಕೆಲಸದಿಂದ ಮುಂಬಡ್ತಿ ಭಾಗ್ಯ ಸಿಕ್ಕಿದೆ.

Tags

Related Articles

Leave a Reply

Your email address will not be published. Required fields are marked *

Language
Close