ವಿಶ್ವವಾಣಿ

ಪೊಲೀಸ್ ಠಾಣೆ ಎದುರಿಗಿದ್ದ ಅಂಗಡಿಗೆ ಖದೀಮರು ಕನ್ನ

ರಾಯಚೂರು: ಪೊಲೀಸ್ ಠಾಣೆ ಎದುರಿಗೆ ಇರುವ ಅಂಗಡಿಗೆ ಕಳ್ಳರು ಕನ್ನ ಹಾಕಿರುವ ಘಟನೆ ನಹರದ ಸ್ಟೇಷನ್ ರಸ್ತೆಯಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಸ್ಟೋರ್ ನಲ್ಲಿ ನಡೆದಿದೆ.

ಪೊಲೀಸ್ ಠಾಣೆ ಎದುರಿಗಿದ್ದರೂ ಹೆದರದ ಕಳ್ಳರು ಮೆಡಿಕಲ್ ಸ್ಟೋರ್ ಬೀಗ ಮುರಿದು ಹಣ ದೋಚಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೈಚಳಕ ಬಯಲಾಗಿದ್ದು, ಶೆಟರ್ ಬಾಗಿಸಿ ಇಬ್ಬರು ಕಳ್ಳರು ಒಳಗೆ ನುಗ್ಗಿದ್ದಾರೆ. ಅಲ್ಲದೆ ಹದಿನೈದು ಸಾವಿರ ರೂಪಾಯಿ ಹಣ ಕದ್ದಿದ್ದಾರೆ. ಇನ್ನು ಪಶ್ಚಿಮ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಎರಡು ತಿಂಗಳ ಹಿಂದೆಯೂ ಇಲ್ಲಿ ಕಳ್ಳತನವಾಗಿತ್ತು. ಆಗ 25 ಸಾವಿರ ರೂಪಾಯಿ ಹಣವನ್ನ ಕಳ್ಳರು ದೋಚಿದ್ದರು.