About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

15000 ಅಕ್ರಮ ಕಟ್ಟಡಗಳಿಗೆ ಜನನಾಯಕರೇ ಬೆನ್ನೆಲುಬು!

ರಿಯಲ್‍‍ ಎಸ್ಟೇಟ್‍‍, ಡೆವಲರ್ಪ್ಸಗಳಿಂದ ಎಗ್ಗಿಲ್ಲದೆ ಸಾಗಿದ ದಂಧೆಗಳು: ಈ ಕಟ್ಟಡಗಳಿಗೆ ನೋಟೀಸ್‍‍ ಜಾರಿಗೊಳಿಸಲು ಸರಕಾರಕ್ಕೆ ಒತ್ತಾಯ

ಬೀದರ್ : ಗಡಿ ಭಾಗದಲ್ಲಿ ಅಕ್ರಮಗಳು ನಡೆಯುತ್ತಿದ್ದರೂ ಯಾರು ಅಲ್ಲಿ ಹೇಳುವವರಿಲ್ಲ, ಕೇಳುವವರಿಲ್ಲ ಎಂಬಂತಾಗಿದೆ. ಬೀದರ್ ಜಿಲ್ಲೆಯಲ್ಲಿ ಬೃಹತ್‍‍ ಕಟ್ಟಡಗಲು ತಲೆಎತ್ತುತ್ತಿದ್ದು, ಇದ್ಯಾವುದು ನಗರ ಸಭೆಯಿಂದ ಅನುಮತಿ ಪಡೆದಿಲ್ಲ. ವಿಪರ್ಯಾಸ ಎಂದರೆ ಇದಕ್ಕೆ ರಾಜಕಾರಣಿಗಳೇ ಕುಮ್ಮಕ್ಕು ನೀಡುತ್ತಿರುವುದು ಬೇಸರ ಸಂಗತಿ.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆಯ ಅನುಮತಿಯನ್ನು ಪಡೆಯದೆ ಕಾನೂನನ್ನು ಗಾಳಿಗೆ ತೂರಿ ಬೃಹತ್ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಇಲ್ಲಿ ಅಕ್ರಮ ಕಟ್ಟಡ, ಅಕ್ರಮ ನಿವೇಶನಗಳ ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ.

ಅಕ್ರಮ ಕಟ್ಟಡ ಕಟ್ಟಿದವರು ಲಕ್ಷಾಂತರ ರು ಬಾಡಿಗೆ ಬೇರೆ ಪಡೆಯುತ್ತಿದ್ದಾರೆ. ಅಕ್ರಮ ಕಟ್ಟಡ ಹಾಗೂ ಅಕ್ರಮ ನಿವೇಶನಗಳಿದ್ದರೆ ಅಂತವುಗಳಿಗೆ ನಗರ ಸಭೆಯಿಂದ ಯಾವುದೇ ರೀತಿಯ ಮೂಲ ಸೌಲಭ್ಯಗಳನ್ನು ಕಲ್ಪಿಸಬಾರದೆಂಬ ಸ್ಪಷ್ಟ ಕಾನೂನಿದ್ದರೂ, ಇಂತಹ ಅಕ್ರಮ ಕಟ್ಟಡಗಳಿಗೆ ನಗರಸಭೆಯ ಅಧಿಕಾರಿಗಳು ಮೂಲ ಸೌಲಭ್ಯಗಳನ್ನ ಕಲ್ಪಿಸಿ ಅಭಿವೃದ್ಧಿ ಪಡಿಸುತ್ತಿದ್ದಾರೆ.

ನಗರದಲ್ಲಿ 15000 ಸಾವಿರಕ್ಕೂ ಅಧಿಕ ಅಕ್ರಮ ಕಟ್ಟಡಗಳಿದ್ದು, ಅವುಗಳನ್ನು ಗುರುತಿಸಲಾಗಿದೆ. ಅಕ್ರಮ ಕಟ್ಟಡಗಳಿಗೆ ಹೆಚ್ಚಿನ ಟ್ಯಾಕ್ಸ್ ವಸೂಲಿ ಮಾಡಲಾಗುತ್ತಿದ್ದು, ಹಂತ ಹಂತವಾಗಿ ಅಕ್ರಮ ಕಟ್ಟಡಗಳನ್ನು ನೆಲಕ್ಕುರುಳಿಸಲಾಗುವುದು ಎಂದು ಎಚ್ಚರಿಕೆ ನೀಡಿರುವುದಾಗಿ ನಗರ ಸಭೆ ಆಯುಕ್ತರು ತಿಳಸಿದ್ದಾರೆ.

ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು -ಡೆವಲರ್ಪ್ಸ ಇದನ್ನೇ ದಂಧೆಯನ್ನಾಗಿಸಿಕೊಂಡು ಹಲವಾರು ವರ್ಷಗಳಿಂದ ಅಕ್ರಮ ನಗರವನ್ನೇ ಸೃಷ್ಟಿಸುವ ಜತೆಗೆ ಜಿಲ್ಲೆಯಲ್ಲಿ ದರ್ಬಾರ್​ ನಡೆಸುತ್ತಿದ್ದಾರೆ ಎನ್ನಲಾಗಿದೆ.
ರಿಯಲ್ ಎಸ್ಟೇಟ್‍‍ನ ರಿಯಲ್ ದಂಧೆ ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದ ನಗರಸಭೆಯ ಅಧಿಕಾರಿಗಳು ಈಗ ಕೆಲವೇ ಕೆಲವು ಅಕ್ರಮ ಕಟ್ಟಡಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಸ್ಥಳೀಯ ಶಾಸಕರು, ಕೆಲ ರಾಜಕೀಯ ಮುಖಂಡರು ಅಕ್ರಮ ಕಟ್ಟಡ ಕಟ್ಟಿದ ಮಾಲಿಕರಿಗೆ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗ್ತಿದೆ. ಸರಕಾರಿ ಅಧಿಕಾರಿಗಳು ಕಂಡುಕಾಣದಂತೆ ಕುಳಿತುಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ತೆರೆ ಎಳೆಯಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close