ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashi Tharoor: ಪಕ್ಷಕ್ಕಿಂತ ರಾಷ್ಟ್ರೀಯ ಭದ್ರತೆ ಮುಖ್ಯ-ಸ್ವಪಕ್ಷ ನಾಯರಿಗೆ ಟಾಂಗ್‌ ಕೊಟ್ರಾ ಶಶಿ ತರೂರ್‌?

ರಾಜಕೀಯ ಪಕ್ಷಕ್ಕಿಂತ ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಬೇಕು. ಭಾರತ ಸತ್ತರೆ ಯಾರು ಬದುಕುತ್ತಾರೆ. ದೇಶ ಎಲ್ಲಕ್ಕಿಂತ ಮೊದಲು ಎಂದು ಕಾಂಗ್ರೆಸ್ (congress) ಸಂಸದ ಶಶಿ ತರೂರ್ (MP Shashi Tharoor) ಹೇಳಿದರು. ಆಪರೇಷನ್ ಸಿಂದೂರ್ ಬಳಿಕ ಮೋದಿ (PM Narendra Modi) ಸರ್ಕಾರವನ್ನು ಹೊಗಳಿ ಕಾಂಗ್ರೆಸ್ ನಾಯಕರಿಂದ ಟೀಕೆಗೆ ಗುರಿಯಾಗಿರುವ ತರೂರ್ ಕೇರಳದ (kerala) ಕೊಚ್ಚಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಪಕ್ಷದ ನಾಯಕತ್ವದೊಂದಿಗಿನ ಅವರ ಸಂಬಂಧದ ಕುರಿತ ಪ್ರಶ್ನೆಗೆ ಉತ್ತರಿಸಿದರು.

ಸ್ವಪಕ್ಷ ನಾಯರಿಗೆ ಟಾಂಗ್‌ ಕೊಟ್ರಾ ಶಶಿ ತರೂರ್‌?

ಕೊಚ್ಚಿ: ರಾಜಕೀಯ ಪಕ್ಷಕ್ಕಿಂತ ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಬೇಕು. ಭಾರತ ಸತ್ತರೆ ಯಾರು ಬದುಕುತ್ತಾರೆ. ದೇಶ ಎಲ್ಲಕ್ಕಿಂತ ಮೊದಲು ಎಂದು ಕಾಂಗ್ರೆಸ್ (congress) ಸಂಸದ ಶಶಿ ತರೂರ್ (MP Shashi Tharoor) ಹೇಳಿದರು. ಆಪರೇಷನ್ ಸಿಂದೂರ್ ಬಳಿಕ ಮೋದಿ (PM Narendra Modi) ಸರ್ಕಾರವನ್ನು ಹೊಗಳಿ ಕಾಂಗ್ರೆಸ್ ನಾಯಕರಿಂದ ಟೀಕೆಗೆ ಗುರಿಯಾಗಿರುವ ತರೂರ್ ಕೇರಳದ (Kerala) ಕೊಚ್ಚಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಪಕ್ಷದ ನಾಯಕತ್ವದೊಂದಿಗಿನ ಅವರ ಸಂಬಂಧದ ಕುರಿತ ಪ್ರಶ್ನೆಗೆ ಉತ್ತರಿಸಿದರು. ಪಕ್ಷದ ಮೇಲಿನ ನಿಷ್ಠೆಗಿಂತ ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡುವುದಾಗಿ ಅವರು ಹೇಳಿದರು.

ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ನಾವು ನಮ್ಮ ಪಕ್ಷಗಳನ್ನು ಗೌರವಿಸುತ್ತೇವೆ. ನಮ್ಮ ಪಕ್ಷಗಳಲ್ಲಿ ನಮ್ಮನ್ನು ಉಳಿಸಿಕೊಳ್ಳುವ ಕೆಲವು ಮೌಲ್ಯಗಳು ಮತ್ತು ನಂಬಿಕೆಗಳನ್ನು ನಾವು ಹೊಂದಿದ್ದೇವೆ. ಆದರೆ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ನಾವು ಇತರ ಪಕ್ಷಗಳೊಂದಿಗೆ ಸಹಕರಿಸಬೇಕಾಗಿದೆ ಎಂದು ತಿಳಿಸಿದರು.

ಈ ಭಾವನೆಯನ್ನು ವ್ಯಕ್ತಪಡಿಸಿದಾಗ ಪಕ್ಷಗಳು ನಮಗೆ ನಿಷ್ಠೆಯಿಲ್ಲ ಎಂದು ಭಾವಿಸುತ್ತವೆ. ಆದರೆ ನನಗೆ ರಾಷ್ಟ್ರವು ಮೊದಲು. ಪಕ್ಷಗಳು ರಾಷ್ಟ್ರವನ್ನು ಉತ್ತಮಗೊಳಿಸುವ ಒಂದು ಸಾಧನ. ನಾವು ಯಾವುದೇ ಪಕ್ಷಕ್ಕೆ ಸೇರಿದವರಾಗಿದ್ದರೂ ಪಕ್ಷದ ಮುಖ್ಯ ಉದ್ದೇಶ ತನ್ನದೇ ಆದ ರೀತಿಯಲ್ಲಿ ಉತ್ತಮ ಭಾರತವನ್ನು ರಚಿಸುವುದು ಪ್ರತಿಯೊಬ್ಬರ ಮೊದಲ ಕರ್ತವ್ಯವಾಗಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ವಿಡಿಯೊ ಹಂಚಿಕೊಂಡಿರುವ ಅವರು, ಇಂದು ಕೊಚ್ಚಿಯಲ್ಲಿ ನಾನು ಪ್ರೌಢಶಾಲಾ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಅನಿವಾರ್ಯವಾಗಿ ಉತ್ತರಿಸಬೇಕಾಯಿತು. ಸಾರ್ವಜನಿಕವಾಗಿ ನಾನು ಇಂತಹ ರಾಜಕೀಯ ಚರ್ಚೆಗಳಿಂದ ದೂರವಿದ್ದಾಗ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಉತ್ತರಿಸಬೇಕು ಎಂದೆನಿಸಿತು ಎಂದು ಹೇಳಿಕೊಂಡಿದ್ದಾರೆ.



ನಮ್ಮ ಸಶಸ್ತ್ರ ಪಡೆಗಳು, ನಮ್ಮ ಸರ್ಕಾರವನ್ನು ಬೆಂಬಲಿಸುವ ನನ್ನ ನಿಲುವು ಮತ್ತು ನಮ್ಮ ದೇಶದಲ್ಲಿ ಮತ್ತು ಗಡಿಗಳಲ್ಲಿ ಇತ್ತೀಚೆಗೆ ನಡೆದ ಘಟನೆಗಳಿಂದಾಗಿ ಬಹಳಷ್ಟು ಜನರು ನನ್ನನ್ನು ತುಂಬಾ ಟೀಕಿಸಿದ್ದಾರೆ. ಇದು ದೇಶಕ್ಕೆ ಸರಿಯಾದ ವಿಷಯ ಎಂದು ನಾನು ನಂಬುವುದರಿಂದ ನಾನು ನನ್ನ ನಿಲುವಿಗೆ ಬದ್ಧನಾಗಿ ನಿಲ್ಲುತ್ತೇನೆ. ಭಾರತದ ಬಗ್ಗೆ ಮಾತನಾಡುವಾಗ ನಾನು ನನ್ನ ಪಕ್ಷವನ್ನು ಇಷ್ಟಪಡುವವರಿಗಾಗಿ ಮಾತ್ರವಲ್ಲ ಎಲ್ಲಾ ಭಾರತೀಯರ ಪರವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Power Men Death: ಕರ್ತವ್ಯದ ವೇಳೆ ಪವರ್‌ ಮ್ಯಾನ್‌ ಸಾವು; ಸೆಸ್ಕ್ ವತಿಯಿಂದ ಕುಟುಂಬಕ್ಕೆ 1.06 ಕೋಟಿ ರೂ. ಪರಿಹಾರ ವಿತರಣೆ

ಭಾರತ ಸತ್ತರೆ ಯಾರು ಬದುಕುತ್ತಾರೆ? ಎಂಬ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಸಾಲುಗಳನ್ನು ಉಲ್ಲೇಖಿಸಿದ ತರೂರ್, ರಾಷ್ಟ್ರವು ಅಪಾಯದಲ್ಲಿದ್ದಾಗ ನಾಯಕರು ಮತ್ತು ಜನರು ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು ಎಂದು ತಿಳಿಸಿದರು.