About Us Advertise with us Be a Reporter E-Paper

Breaking Newsಪ್ರಚಲಿತಸಿನಿಮಾಸ್
Trending

ಯೂರೋಪ್‌ನಲ್ಲಿ ಒಂದಾಗಲಿದೆ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಜೋಡಿ

Image result for prabhas

ಪ್ರಭಾಸ್‌ ಅವರ ಮುಂದಿನ ಹೆಸರಿಡದ ಚಿತ್ರಕ್ಕೆ ಕರ್ನಾಟಕದ ತುಳು ಬೆಡಗಿ ಪೂಜಾ ಹೆಗ್ಡೆ ನಾಯಕಿಯಾಗಿ ಸೆಲೆಕ್ಟ್‌ ಆಗಿದ್ದಾರೆ. 2016ರಲ್ಲಿ ತೆರೆಕಂಡ ಬಾಲಿವುಡ್‍ನ ಹೃತಿಕ್ ರೋಷನ್ ನಟನೆಯ ‘ಮೊಹೆಂಜೋದಾರೋ’ ಚಿತ್ರದ ಮೂಲಕ ಸಿನಿ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದ ಪೂಜಾ ಈಗ ಪ್ರಭಾಸ್‌ಗೆ ಜೋಡಿಯಾಗಲಿದ್ದಾರೆ.

Image result for pooja hegde actress

ಈ ಬಗ್ಗೇ ಈಗಾಗಲೇ ಗಾಳಿ ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಈ ಗಾಳಿ ಸುದ್ದಿಗಳಿಗೆಲ್ಲ ಬ್ರೇಕ್‌ ನೀಡಿರುವ ಪ್ರಭಾಸ್‌ ತಮ್ಮ ಫೇಸ್‌ಬುಕ್‌ನಲ್ಲಿ “ಹಾಯ್ ಗೆಳೆಯರೇ, ನನ್ನ ಮುಂದಿನ ಫಿಲ್ಮ್ ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ. ರಾಧಾಕೃಷ್ಣ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಗೋಪಿ ಕೃಷ್ಣ ಬಂಡವಾಳ ಹಾಕಿದ್ದಾರೆ. ನನಗೆ ಜೊತೆಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಚಿತ್ರೀಕರಣ ಆದಷ್ಟು ಬೇಗ ಆರಂಭವಾಗಲಿದೆ” ಎಂದು ಹಾಕಿಕೊಳ್ಳುವ ಮೂಲಕ ಅಧಿಕೃತವಾಗಿ ಪೂಜಾ ಅವರೇ ಚಿತ್ರದ ನಾಯಕಿ ಎಂದು ಘೋಷಣೆ ಮಾಡಿದ್ದಾರೆ.

ಇದೊಂದು ಪ್ರೇಮಕತೆಯಾಗಿದ್ದು ಶೀಘ್ರದಲ್ಲೇ ಯುರೋಪನಲ್ಲಿ ಚಿತ್ರೀಕರಣ ಆರಂಭವಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close